/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ಆನಂದದಾಯಕವಾದ ದಿನ
- ನೀವು ಆತ್ಮವಿಶ್ವಾಸದಿಂದ ಮಾಡುವ ಕೆಲಸ ಬೇರೆಯವರಿಗೆ ಪ್ರೇರಣೆ
- ನಿಮ್ಮ ಯೋಜನೆಗಳು ಇಂದು ಯಶಸ್ವಿಯಾಗುತ್ತವೆ
- ಪೂರ್ವ ನಿಯೋಜಿತ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
- ಶುಭ ಸಮಾರಂಭಗಳಿಗೆ ಹಾಜರಾಗಲು ಸಿದ್ಧತೆ ನಡೆಯಬಹುದು
- ವ್ಯವಹಾರಿಕವಾಗಿ ಜಾಣ್ಮೆಯಿಂದ ವರ್ತಿಸಿ
- ಮನೆದೇವರನ್ನು ಅರ್ಚಿಸಿ
ವೃಷಭ
- ಸ್ವ ಇಚ್ಛೆಯಂತೆ ಕಾರ್ಯನಿರ್ವಹಿಸಿ ಯಶಸ್ವಿದೆ
- ಸಮಾಧಾನಕರವಾದ ದಿನವೆಂದು ಹೇಳಬಹುದು
- ಅಂದುಕೊಂಡ ಕೆಲಸ ನಿಧಾನವಾದರೂ ಪರಿಪೂರ್ಣವಾಗುತ್ತದೆ
- ಅನಗತ್ಯ ಗೊಂದಲಗಳು, ಕಿರಿಕಿರಿಯಿಂದ ದೂರ
- ಹಣಗಳಿಸುವ ಹುಡುಕಾಟದಲ್ಲಿರುತ್ತೀರಿ
- ವಾಹನದಿಂದ ಹಾನಿಯಾಗಬಹುದು ಗಮನಿಸಿ
- ದುರ್ಗಾ ಸ್ತೋತ್ರ ಪಠಣೆ ಮಾಡಿ
ಮಿಥುನ
- ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಾಧಾನ
- ಮಕ್ಕಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ
- ಇಂದು ಪ್ರೇಮಿಗಳಿಗೆ ಅಸಮಾಧಾನ
- ಸ್ನೇಹಿತರು ಸಮಯಕ್ಕೆ ಸಹಾಯ ಮಾಡಬಹುದು
- ಪ್ರಭಾವಿ ವ್ಯಕ್ತಿಗಳ ಹೆಸರನ್ನು ಹೇಳಿಕೊಂಡು ಅನುಕೂಲ ಪಡೆಯಬಹುದು
- ಉದ್ಯೋಗಿಗಳಿಗೆ ನಿರಾಸೆಯಾಗಬಹುದು
- ನವಗ್ರಹ ಸ್ತೋತ್ರ ಪಠಣೆ ಮಾಡಿ
ಕಟಕ
- ವೃತ್ತಿ ಅಥವಾ ನೌಕರಿಯಲ್ಲಿ ಅನೇಕ ಸವಾಲುಗಳಿರುತ್ತವೆ
- ಜೊತೆಯಲ್ಲಿರುವವರೇ ಮೋಸ ಮಾಡಬಹುದು
- ಹೊಸ ಕೆಲಸಗಳಿಗೆ ಆತುರದ ನಿರ್ಧಾರ ಬೇಡ
- ಅನಗತ್ಯ ವಾದ-ವಿವಾದ ಜಗಳ ಬೇಡ
- ಕುಟುಂಬದ ಹಿರಿಯರ ಆರೋಗ್ಯ ವ್ಯತ್ಯಯ, ಆತಂಕ
- ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗಬಹುದು
- ವಿಷ್ಣುವಿನ ಆರಾಧನೆ ಮಾಡಿ
ಸಿಂಹ
- ಕೈ ಹಾಕಿದ ಕೆಲಸ ಪೂರ್ಣ ಮಾಡಿ ಆಲಸ್ಯ ಬೇಡ
- ಆಲೋಚನೆಯಲ್ಲಿ ಸಣ್ಣತನ ಬೇಡ
- ಕಾರ್ಯಕ್ರಮಗಳನ್ನು ಸರಿಯಾಗಿ ಆಯೋಜಿಸಿ ಯಶಸ್ಸು ಕಾಣಬಹುದು
- ಸಂದರ್ಶನಗಳಲ್ಲಿ ಉತ್ತಮ ಫಲಿತಾಂಶವಿದೆ
- ಕುಟುಂಬದ ಸದಸ್ಯರಲ್ಲಿರುವ ಭಿನ್ನಾಭಿಪ್ರಾಯ ಸರಿ ಮಾಡಲು ಸುದಿನ
- ನಿಮ್ಮ ಮಾತಿನಿಂದ ಜನ ಆಕರ್ಷಣೆಯಾಗಬಹುದು
- ಯೋಗಾ ನರಸಿಂಹನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಅನಗತ್ಯ ವಿಚಾರಗಳಿಗೆ ಹಣ ಖರ್ಚು
- ಆಸ್ತಿ ವಿವಾದಗಳಲ್ಲಿ ಸಾಕ್ಷಿ ಹೇಳಿ ತೊಂದರೆಯಾಗಬಹುದು
- ಚಿತ್ರರಂಗದಲ್ಲಿರುವವರಿಗೆ ಸಮಸ್ಯೆ ಕಾಣಬಹುದು
- ಮಾನಸಿಕವಾಗಿ ಎಲ್ಲಾ ವಿಚಾರಕ್ಕೂ ಸಿದ್ಧವಾಗಿರಿ
- ಶಾಂತಿಯಿಂದ ವರ್ತಿಸಿ ಜಯವಿದೆ
- ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ
- ಆರ್ಥಿಕ ವಿಚಾರದಲ್ಲಿ ಸಮಸ್ಯೆ ಇದ್ದರೂ ನಿಭಾಯಿಸುತ್ತಿರಿ
- ಧನಾತ್ಮಕ ಶಕ್ತಿ, ಆಲೋಚನೆ ನಿಮ್ಮ ಪ್ರಗತಿಗೆ ಕಾರಣ
- ಕಾರ್ಯಕ್ಷೇತ್ರದಲ್ಲಿ ತುಂಬಾ ಪರಿಶ್ರಮ ಪಡಬೇಕು
- ಪ್ರೇಮ ವಿಚಾರದಲ್ಲಿ ತಪ್ಪು ತಿಳುವಳಿಕೆಯಿಂದ ತೊಂದರೆಯಾಗಬಹುದು
- ನಿಧಾನವಾಗಿ ಯೋಚಿಸಿ ಎಲ್ಲವನ್ನು ನಿರ್ಧರಿಸಿ
- ಇಷ್ಟದೇವತಾ ಅನುಗ್ರಹ ಪಡೆಯಿರಿ
ವೃಶ್ಚಿಕ
- ಅಪಶಕುನ, ಅಶುಭ ವಾರ್ತೆ ಕೇಳಿ ಬೇಸರ
- ಗುರಿಸಾಧನೆಗೆ ತುಂಬಾ ಪ್ರಯತ್ನ ಆದರೆ ವಿಫಲ
- ಸಂಬಂಧಿಕರಿಂದ ಆತಂಕ ಸೃಷ್ಟಿಯಾಗಬಹುದು
- ತಾಳ್ಮೆ ಇದ್ದರೆ ಸ್ವಲ್ಪ ಸಮಾಧಾನ ಸಿಗುತ್ತದೆ
- ಪತಿ, ಪತ್ನಿಯರಲ್ಲಿ ಬೇಡದ ವಿಚಾರಕ್ಕೆ ಜಗಳ
- ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
- ಒಟ್ಟಾರೆ ಈ ದಿನ ಅಷ್ಟೊಂದು ಶುಭವಾಗಿಲ್ಲ
- ಶಾಂತವಾಗಿರಿ, ಧ್ಯಾನಕ್ಕೆ ಶರಣುಹೋಗಿ
ಧನುಸ್ಸು
- ಉದ್ಯೋಗಿಗಳಿಗೆ, ವೃತ್ತಿಪರರಿಗೆ ತೃಪ್ತಿ ಕೊಡುತ್ತದೆ
- ಹವ್ಯಾಸಿ ಕಲಾವಿದರಿಗೆ ಉತ್ತಮ ಅವಕಾಶ
- ವ್ಯವಹಾರ ಒಪ್ಪಂದಗಳು, ಸ್ನೇಹಿತರ ಜೊತೆಗೆ ಉದ್ಯೋಗ ಪ್ರಾರಂಭಿಸಬಹುದು
- ವಿದ್ಯಾರ್ಥಿಗಳಿಗೆ ಶುಭ ಲಾಭವಿದೆ
- ಬಹಳ ದಿನಗಳಿಂದ ಅಂದುಕೊಂಡಂತಹ ಕೆಲಸ ಇಂದು ಈಡೇರಬಹುದು
- ಇರುವುದರಲ್ಲಿ ತೃಪ್ತಿಪಡಬೇಕು ಸುಖವಿದೆ
- ಈಶ್ವರನ ಆರಾಧನೆ ಮಾಡಿ
ಮಕರ
- ಬೆಲೆ ಬಾಳುವ ಪದಾರ್ಥ ಖರೀದಿ ಮಾಡುವುದರಿಂದ ಅಸಮಾಧಾನವಾಗಬಹುದು
- ಅನುಭವಿಗಳ ಮಾರ್ಗದರ್ಶನದಿಂದ ಉಪಯೋಗವಾಗುವುದಿಲ್ಲ
- ಕುಟುಂಬದಲ್ಲಿ ಖುಷಿಯಿರುತ್ತದೆ ಆದರೆ ನೀವು ಯೋಚನೆಯಲ್ಲಿರುತ್ತೀರಿ
- ವಿದೇಶ ಸಂಪರ್ಕವಿರುವವರಿಗೆ ಧನ ಲಾಭವಿದೆ
- ಹೊಸ ಆಸ್ತಿ ಖರೀದಿಸಬಹುದು ಅಥವಾ ಚರ್ಚಿಸಬಹುದು
- ಮನೆಯಲ್ಲಿಯ ಸಾಕು ಪ್ರಾಣಿಗೆ ತೊಂದರೆ ಕಾಣಬಹುದು
- ಮಹಾಲಕ್ಷ್ಮಿಯನ್ನು ಅರ್ಚಿಸಿ
ಕುಂಭ
- ನಿರೀಕ್ಷಿತ ಕೆಲಸದ ವಿರುದ್ಧವಾಗಿ ಸಿಟ್ಟು ಬರಬಹುದು
- ನಿಮ್ಮ ಆಸೆಗಳು ಈಡೇರುವುದರಲ್ಲಿ, ವಿಫಲರಾಗಬಹುದು
- ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಮಾಧಾನ ಸಿಗಬಹುದು
- ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವವರಿಗೆ ಅನುಕೂಲ
- ಶರೀರದಲ್ಲಿ ನೋವು ಕಾಣಬಹುದು ಬೇಸರ
- ಬೇರೆಯವರನ್ನು ಅವಲಂಬಿಸಿರುವವರಿಗೆ ತೊಂದರೆ, ಸಮಸ್ಯೆಯಾಗಬಹುದು
- ಅಯ್ಯಪ್ಪ ಸ್ವಾಮಿಯನ್ನು ಪೂಜಿಸಿ
ಮೀನ
- ಬೇರೆಯವರ ಕೆಲಸವನ್ನು ಅನುಮಾನಿಸಬಹುದು
- ಸಹೋದ್ಯೋಗಿಗಳ ಜೊತೆ ಸಾಮರಸ್ಯ ಕಾಯ್ದುಕೊಳ್ಳಬೇಕು
- ಸಣ್ಣಪುಟ್ಟ ವಿಚಾರಗಳಿಗೆ ಕೋಪದಿಂದ ವರ್ತಿಸಬಹುದು ಆದರೆ ಬೇಡ
- ಕಾಲು ನೋವಿನ ಸಮಸ್ಯೆ ಕಾಡಬಹುದು
- ತೀರ್ಥಯಾತ್ರೆಗೆ, ಗುರುದರ್ಶನ ಪಡೆಯಬಹುದು
- ಉತ್ತಮ ಕೆಲಸಕ್ಕಾಗಿ ಹಣವ್ಯಯ ಅದರಿಂದ ಸಮಾಧಾನ ಸಿಗಬಹುದು
- ಶಿವ ಮಂತ್ರ ಪಠಿಸಿ ಅಥವಾ ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ