ಅಣ್ಣ, ತಮ್ಮಂದಿರ ಮಧ್ಯೆ ಗಲಾಟೆ.. ಈ ರಾಶಿಯವರಿಗೆ ಅಧಿಕ ಲಾಭ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳು ಮಾಡಬಹುದು
  • ಮನೆಯಲ್ಲಿರೋ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಸಾಮರ್ಥ್ಯ ನಿಮಗೆ ತಿಳಿಯದೇ ಕೊರತೆ ಉಂಟಾಗಬಹುದು
  • ಪೋಷಕರ ಬೆಂಬಲದಿಂದ ಹಣಕಾಸು ಸಮಸ್ಯೆ ನಿವಾರಣೆ
  • ಮಕ್ಕಳಿಗಾಗಿ ತುಂಬಾ ಯೋಚಿಸುವ ದಿನ
  • ಬಲವಂತದಿಂದ ಯಾರನ್ನು ಯಾವುದಕ್ಕೂ ಒಪ್ಪಿಸಬೇಡಿ
  • ಉದ್ಯೋಗ ಸ್ಥಳದಿಂದ ಮನಸ್ಸಿಗೆ ಬೇಸರ ತರುವ ವಿಷಯ ಬರಬಹುದು
  • ಒತ್ತಡದಿಂದ ಬಳಲಿದ ನಿಮಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
  • ಆಂಜನೇಯನಿಗೆ ತೈಲಾಭಿಷೇಕ ಮಾಡಿಸಿ

ವೃಷಭ

publive-image

  • ಆಹಾರದಲ್ಲಿ ಗಮನಹರಿಸಿ ಆರೋಗ್ಯ ಕಾಪಾಡಿಕೊಳ್ಳಿ
  • ಕೇವಲ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಕಡಿಮೆ
  • ಸಮಾಜದ ಜನರಿಂದ ಗೌರವ ನಿರೀಕ್ಷಿಸಬಹುದು
  • ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ
  • ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಅಧಿಕ ಖರ್ಚು
  • ಲಕ್ಷ್ಮಿನರಸಿಂಹನ ಆರಾಧಿ ಆರಾಧಿಸಿ

ಮಿಥುನ

publive-image

  • ಮಾನಸಿಕ ದೃಢತೆ ಇದ್ದರೆ ಸಂತೃಪ್ತಿಯ ಜೀವನ
  • ಆತುರದಲ್ಲಿ ಯಾವುದೇ ರೀತಿಯ ಹಣ ಹೂಡಿಕೆ ಬೇಡ
  • ಮಕ್ಕಳೊಂದಿಗೆ ಮೃದುವಾಗಿ ವರ್ತಿಸಿ
  • ಅಣ್ಣ ತಮ್ಮಂದಿರ ಹೊಂದಾಣಿಕೆ ಕಡಿಮೆ ಹಾಗೇ ಶೀತಲ ಸಮರ
  • ದಾಂಪತ್ಯದಲ್ಲಿ ಚುಚ್ಚು ಮಾತು ಅದರಿಂದ ಬೇಸರ
  • ಆಸ್ತಿ ವಿಚಾರ ಇತ್ಯರ್ಥ ಆಗುವುದಿಲ್ಲ
  • ಮಾಂಗಲ್ಯಮೂರ್ತಿ ಲಕ್ಷ್ಮಿನಾರಾಯಣರನ್ನ ಆರಾಧಿಸಿ

ಕಟಕ

publive-image

  • ಬೇರೆಯವರನ್ನು ಟೀಕಿಸಬೇಡಿ ಅವಮಾನವಿದೆ
  • ನಗು ನಗುತ್ತ ಮಾತಾಡಿ ಜನಾಕರ್ಷಣೆ ಮಾಡಿ
  • ಪದಾರ್ಥ ನಷ್ಟ ಅಥವಾ ಕಳವು ಸಾಧ್ಯತೆ ಇದೆ
  • ಪ್ರೇಮಿಗಳಿಗೆ ಸಂಕಷ್ಟ, ಪಾರಾಗಲು ಹರಸಾಹಸ
  • ವ್ಯವಹಾರ ಸ್ಪಷ್ಟವಾಗಿರದೆ ದಂಡ ಕಟ್ಟಬೇಕಾಗುತ್ತದೆ
  • ಸಾಯಂಕಾಲದಲ್ಲಿ ದುರ್ವಾರ್ತೆ ಅದರಿಂದ ಬೇಸರ ನೋವು
  • ದೇವಿ ಆರಾಧನೆ ಮಾಡಿ

ಸಿಂಹ

publive-image

  • ಅಲ್ಪಸಮಯದಲ್ಲಿ ಹೆಚ್ಚು ಕೆಲಸಗಳಾಗುತ್ತವೆ
  • ಇಂದು ಆದಾಯ ಹೆಚ್ಚಿದೆ
  • ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯುವ ಸೂಚನೆ ಇದೆ
  • ಧಾರ್ಮಿಕ ವಿಚಾರಕ್ಕೆ ಹಣ ವ್ಯಯ, ಭಯಮುಕ್ತಿ
  • ಹಿರಿಯರ ಆಶೀರ್ವಾದ ಅದರಿಂದ ಸಹಾಯ ಒದಗುತ್ತದೆ
  • ಹಳೆಯ ಹರಕೆಗಳಿದ್ದರೆ ಹರಕೆ ತೀರಿಸಿ
  • ಶರಬೇಶ್ವರನನ್ನು ಆರಾಧಿಸಿ

ಕನ್ಯಾ

publive-image

  • ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಿಂದ ಆರೋಗ್ಯ ಮುಖ್ಯ ಗಮನಿಸಿ
  • ಆರ್ಥಿಕವಾಗಿ ಸಬಲರಾಗುತ್ತೀರಿ
  • ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ ಲಾಭ
  • ಸಮಯವಿದ್ದಷ್ಟು ಕೆಲಸ ಮಾಡಿ ಸಂಪಾದಿಸಿ, ಆಲಸ್ಯ ಬೇಡ
  • ವೈವಾಹಿಕ ಜೀವನದಲ್ಲಿ ಕಹಿ ಅನುಭವ
  • ನಿಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಪ್ರಯತ್ನಿಸಿ ಶುಭದಿನ
  • ಪಾರ್ವತಿ ದೇವಿಯನ್ನು ಪೂಜಿಸಿ

ತುಲಾ

publive-image

  • ಜಗಳದಿಂದ ಬಂಧುಗಳಲ್ಲಿ ವಿರಸ ಮಾತು ಬಿಡಬಹುದು
  • ನಿಮ್ಮ ಶಿಸ್ತು ಬದ್ಧ ಜೀವನ ಬೇರೆಯವರಿಗೆ ಮಾದರಿ
  • ಇಂದು ಸುಳ್ಳು ಹೇಳಬೇಕಾದ ಪರಿಸ್ಥಿತಿ ಬರಬಹುದು
  • ಅಕ್ಕ ತಂಗಿಯರಿಗೆ ಸಹಾಯ ಮಾಡಿ
  • ಸಮಯಕ್ಕೆ ಸರಿಯಾಗಿ ಆಗದವರ ಬಗ್ಗೆ ಬೇಸರ
  • ಮಕ್ಕಳ ಯಶಸ್ಸು ತೃಪ್ತಿ ಕೊಡುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ

ವೃಶ್ಚಿಕ

publive-image

  • ಇಂದು ಆರಾಮವಾಗಿ ಕಾಲ ಕಳೆಯುತ್ತೀರಿ
  • ಮನೆಯಿಂದ ಹೊರ ಹೋಗುವಾಗ ಎಚ್ಚರ ಅಪಾಯವಿದೆ
  • ಅನುಚಿತವಾಗಿ ವರ್ತಿಸುವವರನ್ನು ಏನು ಅನ್ನಬೇಡಿ
  • ದುಂದು ವೆಚ್ಚ ಗಮನ ಇರುವುದಿಲ್ಲ
  • ನಿಮಗೆ ಆಯ್ಕೆಯ ಕೊರತೆ ಕಾಣಬಹುದು
  • ಹಣದ ಬೆಲೆ ಬೇರೆಯವರಿಂದ ತಿಳಿಯುವ ಕಾಲ ಶ
  • ಅನ್ನಪೂರ್ಣೇಶ್ವರಿಯನ್ನು ಉಪಾಸನೆ ಮಾಡಿ, ದೇವಾಲಯಕ್ಕೆ ಅಕ್ಕಿ ಅರ್ಪಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

publive-image

  • ಕನಸು ನನಸಾಗುವ ದಿನ ತೃಪ್ತಿ ಇದೆ
  • ನಿಮ್ಮ ಉತ್ಸಾಹ ಸಿಹಿಯಾಗಿದ್ದರು ನಿಯಂತ್ರಣದಲ್ಲಿರಲಿ
  • ಏಕಮುಖವಾದ ವಿಶ್ವಾಸ ಕಡಿಮೆ ಮಾಡಿಕೊಳ್ಳಿ
  • ಮಾನಸಿಕ ಒತ್ತಡ ಕಠಿಣ ಮಾತುಗಳಿಂದ ಬೇಸರ
  • ನಿಮ್ಮ ಹಳೆಯ ಜೀವನ ನೆನಪಿಗೆ ಬಂದು ನೋವು
  • ಮನೆಯ ವ್ಯವಸ್ಥೆಯಿಂದ ಆನಂದ ತಂದುಕೊಳ್ಳಬೇಕು
  • ಸದ್ಗುರುಗಳನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಸೋಂಕು ತಗುಲಿ ತೊಂದರೆಯಾಗಬಹುದು
  • ವ್ಯಾಪಾರಿ ಬುದ್ಧಿಯಿಂದ ಹೊರ ಬರಬೇಕಾಗುತ್ತದೆ
  • ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅದರಿಂದ ನಿಮಗೆ ಗೌರವ
  • ನಂಬಿದ ಸ್ನೇಹಿತರಿಂದ ಅಪಕೀರ್ತಿ ಜಾಗ್ರತೆ ಇರಲಿ
  • ಸುತ್ತಮುತ್ತಲಿರುವ ಎಲ್ಲರೂ ನಿಮ್ಮಿಂದ ಏನನ್ನಾದರೂ ಬಯಸುತ್ತಾರೆ
  • ಆತ್ಮೀಯರ ಕೋಪಕ್ಕೆ ಗುರಿಯಾಗಬಹುದು
  • ವನದುರ್ಗಾದೇವಿ ಆರಾಧನೆ ಮಾಡಿ

ಕುಂಭ

publive-image

  • ಒಂಟಿತನವನ್ನು ದೂರ ಮಾಡಿ, ಕಾರ್ಯೋನ್ಮುಖರಾಗಿರಿ
  • ಹಣಕ್ಕಿಂತ ಸಮಯ ಮುಖ್ಯ ನಿಮ್ಮಲ್ಲಿ ಎರಡು ಇದೆ
  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮುಖ್ಯವಾದ ವ್ಯಕ್ತಿ ಅಥವಾ ಸ್ನೇಹಿತನ ವಿಚಾರದಲ್ಲಿ ಸಮಸ್ಯೆ
  • ಅವಿವಾಹಿತ ಪರವಾಗಿ ಬಂಧುಗಳಿಂದ ಸಹಾಯ
  • ಶಾಂತಿಯುತವಾಗಿ ಈ ದಿನ ಕಳೆಯಬೇಕಾಗಿದೆ
  • ಸ್ವಯಂವರ ಪಾರ್ವತಿ ಮಂತ್ರ ಜಪಿಸಿ

ಮೀನ

publive-image

  • ಬೇರೆಯವರು ನೀಡಿದ್ದ ಭರವಸೆಗಾಗಿ ಕಾಯಬಹುದು ಆದರೆ ಪ್ರಯೋಜನವಿಲ್ಲ
  • ಹಣ ಉಳಿತಾಯದ ಮಾರ್ಗದಿಂದ ತೃಪ್ತಿ
  • ದೂರದೂರಿನಿಂದ ಶುಭವಾರ್ತೆ ಅದರಿಂದ ಸಂತೋಷ
  • ಮನೆಯವರ ಸಹಕಾರದಿಂದ ಕಾರ್ಯಕ್ಷೇತ್ರ ವಿಸ್ತರಣೆ
  • ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾಗುತ್ತದೆ
  • ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ
  • ಕಾಳಿಕಾದೇವಿಯನ್ನ ಪೂಜಿಸಿ ಕಪ್ಪು ಬಟ್ಟೆ ಧರಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment