ದೂರದ ಪ್ರಯಾಣ ಬೇಡವೇ ಬೇಡ; ಈ ರಾಶಿಯವರಿಗೆ ಶತ್ರುಗಳ ಕಾಟ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮಿತ್ರರ ಅಥವಾ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ
  • ಜನರಲ್ಲಿ ಅಥವಾ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವ ಸೂಚನೆ ಇದೆ
  • ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ಆಧುನಿಕತೆಗೆ ಬದಲಾಗಿರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಮನಸ್ಸಿನ ಆಲೋಚನೆಗಳ ಮೇಲೆ ದಿನ ಅವಲಂಬಿತವಾಗಿರುತ್ತದೆ
  • ಮಿತ್ರರ ಅಥವಾ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ
  • ಕೆಲವು ವಿಚಾರಗಳನ್ನು ಬಂಧುಗಳ ಜೊತೆಯಲ್ಲಿ ಚರ್ಚಿಸಬಹುದು
  • ನಿದ್ರಾಹೀನತೆ ಅಥವಾ ನಿದ್ರಾ ಭಂಗದಿಂದ ತೊಂದರೆಯಾಗಬಹುದು
  • ಯಾವುದೇ ಕ್ಷಣದಲ್ಲಿ ನಿಮಗೆ ಸವಾಲುಗಳು ಬರಬಹುದು
  • ಮಾನಸಿಕವಾಗಿ ಪ್ರತಿಕ್ಷಣ ಸಿದ್ಧರಾಗಿರಬೇಕಾದ ದಿನ
  • ನವಗ್ರಹರ ಪ್ರಾರ್ಥನೆ ಮಾಡಿ

ವೃಷಭ

publive-image

  • ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಶುಭವಿದೆ
  • ನಿಮ್ಮ ಕಿರಿಯರು ಹೆಚ್ಚು ಗೌರವ ನೀಡುತ್ತಾರೆ
  • ಆರ್ಥಿಕವಾಗಿ ಸಾಧಾರಣವಾದ ದಿನ
  • ಒಡಹುಟ್ಟಿದವರೊಡನೆ ಸಂಬಂಧ ಚೆನ್ನಾಗಿರಲಿದೆ
  • ನಿಮ್ಮ ಇಷ್ಟದ ಕೆಲಸದಲ್ಲಿ ಕಾಲ ಕಳೆಯಬಹುದು
  • ಮನೆಯಲ್ಲಿ ಸ್ವತಂತ್ರದ ವಾತಾವರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ವೈಯಕ್ತಿಕ ವಿಚಾರ ಅಥವಾ ಸಾಂಸಾರಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
  • ಮಧ್ಯಾಹ್ನಕ್ಕಿಂತ ಮುಂಚೆ ನಿಮ್ಮ ಕೆಲಸಗಳಾಗಲಿದೆ
  • ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟ ಇರುವುದಿಲ್ಲ
  • ನಿಮ್ಮ ನಿರ್ಧಾರ ತಪ್ಪಾಗಿರಬಹುದು
  • ಹಳೆಯ ಸಾಲ ಅಥವಾ ವ್ಯವಹಾರದಿಂದ ಸಮಸ್ಯೆಯಾಗಬಹುದು
  • ಜನರಲ್ಲಿ ಅಥವಾ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವ ಸೂಚನೆ ಇದೆ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಇಂದು ನಿಮಗೆ ಸವಾಲಿನ ದಿನ
  • ಜೊತೆಯಲ್ಲಿ ಇರುವವರು ಅಸೂಯೆ ತೋರಿಸಬಹುದು
  • ವಿದೇಶ ಪ್ರಯಾಣಕ್ಕೆ ಇರುವ ಅಡೆತಡೆ ನಿವಾರಣೆಯಾಗಬಹುದು
  • ದಾಂಪತ್ಯ ಜೀವನದಲ್ಲಿ ಕಿರಿಕಿರಿಯಾಗಬಹುದು
  • ಸಾಲ ಪಡೆದ ಹಣ ಸದ್ಬಳಕೆಯಾಗಬಹುದು
  • ಅನಿರೀಕ್ಷಿತವಾಗಿ ಹಣ ಬಂದರೆ ಹಾಗೆ ಖರ್ಚಾಗಲಿದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
  • ನಿಮ್ಮ ಗುರುಗಳನ್ನು ಪ್ರಾರ್ಥಿಸಿ ಆಶೀರ್ವಾದ ಸ್ವೀಕರಿಸಿ

ಸಿಂಹ

publive-image

  • ಮಾಹಿತಿ ಸರಿಯಾಗಿರದೆ ಹಣ ಹೂಡಿಕೆ ಬೇಡ
  • ಇಂದು ಅನಗತ್ಯ ಪ್ರಯಾಣ ಬೇಡ
  • ಮನೆಯಿಂದ ಹೊರಗೆ ಹೋಗಿ ವ್ಯವಹರಿಸುವಾಗ ಎಚ್ಚರಿಕೆಯಿರಲಿ
  • ಮಕ್ಕಳ ಆರೋಗ್ಯ ಅಥವಾ ವರ್ತನೆಯಿಂದ ಬೇಸರವಾಗಬಹುದು
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ಆಧುನಿಕತೆಗೆ ಬದಲಾಗಿರಿ
  • ಲಾಭವಿದ್ದರೂ ಸರಿಯಾಗಿ ಉಪಯೋಗಿಸದೆ ವ್ಯರ್ಥವಾಗಬಹುದು
  • ಮಕ್ಕಳಿಂದ ಸಮಾಧಾನ ಸಿಗಲಿದೆ
  • ತುಂಬಾ ಕಷ್ಟ ಪಡಬೇಕಾದ ದಿನ ಸ್ವಲ್ಪ ಲಾಭವಿದೆ
  • ತಾಯಿಯವರ ಆರೋಗ್ಯದ ಬಗ್ಗೆ ಗಮನಿಸಿ ಕರ್ತವ್ಯ ಲೋಪ ಬೇಡ
  • ತಾಳ್ಮೆಯಿಂದ ಯೋಚಿಸಿ ನಿರ್ಧಾರ ಮಾಡಿದಾಗ ಶುಭವಿದೆ
  • ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ

ತುಲಾ

publive-image

  • ಸಭೆ ಸಮಾರಂಭಗಳ ವಿಚಾರ ಕುರಿತು ಚರ್ಚೆ ಮಾಡುತ್ತೀರಿ
  • ಗೌರವ ಸನ್ಮಾನಗಳು ನಿಮ್ಮ ಪಾಲಿಗೆ ಬರುವ ಸೂಚನೆ ಇದೆ
  • ವಿದ್ಯಾರ್ಥಿಗಳಲ್ಲಿ ಪ್ರಗತಿ ಹೊಂದುತ್ತೀರಿ
  • ಪೋಷಕರ ನಿಯಮಗಳು ಪಾಲಿಸಿ ಶುಭವಿದೆ
  • ವಿನಾಕಾರಣ ಹಣದ ವಿಚಾರದಲ್ಲಿ ಮನಸ್ತಾಪ ಬೇಡ
  • ಕುಲದೇವತಾ ಸ್ಮರಣೆ ಮಾಡಿ

ವೃಶ್ಚಿಕ

publive-image

  • ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುವವರಿಗೆ ಶುಭವಿದೆ
  • ವಿವಾಹ ವಿಚಾರ ಹಾಸ್ಯದಲ್ಲಿ ಮುಗಿದು ಹೋಗಬಹುದು
  • ಪ್ರವಾಸ ಹಣ ಸರ್ಕಾರಿ ಕೆಲಸ ವಿಚಾರದಲ್ಲಿ ಒಳ್ಳೆಯದಿದೆ
  • ಪ್ರಯಾಣಿಸುವಾಗ ನಿಮ್ಮ ಪದಾರ್ಥಗಳ ಬಗ್ಗೆ ಎಚ್ಚರಿಕೆಯಿರಲಿ
  • ಆತುರದ ನಿರ್ಧಾರ ಒಳ್ಳೆಯದಲ್ಲ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಧನುಸ್ಸು

publive-image

  • ಮೇಲಾಧಿಕಾರಿಗಳಿಂದ ಉದ್ದೇಶ ಪೂರ್ವಕವಾಗಿ ಸವಾಲುಗಳು ಬರಬಹುದು
  • ಇಂದು ಸುಳ್ಳನ್ನು ಹೇಳಬಾರದು
  • ಮಾನಸಿಕ ತೊಂದರೆ ಅಥವಾ ಖಿನ್ನತೆ ನಿಮ್ಮನ್ನ ಹಿನ್ನಡೆಗೆ ತರಬಹುದು
  • ನಿಮ್ಮದೇ ತೀರ್ಮಾನದ ಕೆಲಸಗಳು ಆಗುವುದಿಲ್ಲ
  • ಸಮಯಕ್ಕೆ ಹೊಂದಿಕೊಳ್ಳಬೇಕಾಗಬಹುದು
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಮಧ್ಯಾಹ್ನದ ಸಮಯ ಸ್ವಲ್ಪ ಕಷ್ಟವೆನಿಸಬಹುದು
  • ಇಂದಿನ ಕೆಲಸ ಸಾಧಾರಣವಾಗಿ ಯಶಸ್ಸು ಕಾಣಬಹುದು
  • ನಿಂತು ಹೋಗಿದ್ದ ಕೆಲಸಗಳು ಅಥವಾ ವಿಚಾರಗಳು ಮರುಜೀವ ಪಡೆಯಬಹುದು
  • ನಿಮ್ಮದೇ ಆದ ಶೈಲಿಯಲ್ಲಿ ಜನರನ್ನು ಆಕರ್ಷಿಸುತ್ತೀರಿ
  • ಮನಸ್ಸಿನಲ್ಲಿ ಧೈರ್ಯ ಇರುವುದಿಲ್ಲ
  • ಸಮಾಜದಲ್ಲಿ ಹೆದರಿಕೆಯಿಂದಲೇ ದಿನ ಕಳೆಯುವಂತೆ ವರ್ತಿಸುತ್ತೀರಿ
  • ಈಶ್ವರನ ಆರಾಧನೆ ಮಾಡಿ

ಕುಂಭ

publive-image

  • ನಿಮ್ಮ ಕೆಲಸ ಅಥವಾ ತೀರ್ಮಾನ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ
  • ಅನುಮಾನ ಅಥವಾ ತಪ್ಪು ಕಲ್ಪನೆಗಳು ಬಾರದಂತೆ ಗಮನಿಸಿ
  • ಕುಟುಂಬದವರ ಸಹಾಯ ಸಹಕಾರ ಅತಿ ಮುಖ್ಯ ಅದನ್ನು ಗಮನಿಸಿ
  • ಸಮಾಜದಲ್ಲಿ ಜನರು ತುಂಬಾ ಜಾಗೃತವಾಗಿರುವುದರಿಂದ ದ್ರೋಹ ಬೇಡ
  • ಪೋಷಕರೊಂದಿಗೆ ವಿಧೇಯವಾಗಿ ವರ್ತಿಸಿ
  • ನಿಮ್ಮ ಅನುಕೂಲಕ್ಕಾಗಿ ಬೇರೆಯವರಿಗೆ ತೊಂದರೆ ಮಾಡಬೇಡಿ
  • ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಮೀನ

publive-image

  • ದಾಂಪತ್ಯದಲ್ಲಿ ವಾದ-ವಿವಾದ ಬೇಡ
  • ಕಲ್ಯಾಣಕ್ಕೆ ಅನುಕೂಲವಾಗುವ ವಿಚಾರ ಮಾಡಿ
  • ಸರ್ಕಾರಿ ಕೆಲಸದ ವಿಚಾರದಲ್ಲಿ ಅಸಮಾಧಾನ ಉಂಟಾಗಲಿದೆ
  • ನಿಮ್ಮ ಕಾರ್ಯ ವೈಖರಿಯ ಬಗ್ಗೆ ನಿಮಗೆ ಹೆಮ್ಮೆ
  • ನಿಮ್ಮ ಉದ್ದೇಶವನ್ನು ಕಠಿಣವಾಗಿ ತೋರಿಸಬೇಡಿ
  • ದುರ್ಗಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment