ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ
ದುಬಾರಿ ಪದಾರ್ಥಗಳ ಖರೀದಿಯಲ್ಲಿ ತೊಡಗಬಹುದು
ಅವಿವಾಹಿತರಿಗೆ ವಿವಾಹ ವಿಚಾರಕ್ಕೆ ಅವಕಾಶವಿದೆ..!
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪೂರ್ಣಿಮಾ-ಪಾಡ್ಯ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
- ಬಲವಂತವಾಗಿ ತಿಂದ ಆಹಾರದಿಂದ ತೊಂದರೆಯಾಗಬಹುದು
- ಯಾವಾಗಲೂ ಒಂದೇ ರೀತಿ ಇರಲು ಪ್ರಯತ್ನ ಮಾಡಿ
- ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹಾಕಬೇಡಿ
- ಇಂದು ನಿಮಗೆ ಬೇಸರವಾಗುವ ದಿನವಾಗಿರಲಿದೆ
- ಆರೋಗ್ಯದ ಕಡೆ ಗಮನ ಕೊಡಿ
- ಕುಲದೇವತಾರಾಧನೆ ಮಾಡಿ
ವೃಷಭ
- ಅತಿಯಾದ ಕೆಲಸದಿಂದ ಆಯಾಸವಾಗಬಹುದು
- ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿ ಬಿಡುತ್ತೀರಿ
- ಕುಟುಂಬ ಸದಸ್ಯರ ಕಡೆ ಗಮನ ಕೊಡಿ
- ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಶಿಸ್ತುಬದ್ದವಾಗಿರುವ ಮನೆಯ ವಾತಾವರಣವನ್ನು ಹಾಗೇ ಕಾಪಾಡಲು ಪ್ರಯತ್ನಿಸಿ
- ಪ್ರೇಮಿಗಳ ನಡುವೆ ಪರಸ್ಪರ ಜಗಳವಾಗಬಹುದು
- ಗಣಪತಿಗೆ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿ
ಮಿಥುನ
- ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಅವಕಾಶ ವಂಚಿತರಾಗಬೇಡಿ
- ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
- ವಿದ್ಯಾರ್ಥಿಗಳ ನಡುವೆ ಜಗಳವಾಗಬಹುದು
- ಹೊಸ ಸ್ನೇಹಿತರ ವಿಚಾರ ಪ್ರಸ್ತಾಪವಾಗಲಿದೆ
- ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ
ಕಟಕ
- ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ದೂಷಿಸಬೇಡಿ
- ಸಂಬಂಧಿಕರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿರುವುದು
- ಕೆಲವು ವಿಚಾರ ಮುನ್ನೆಲೆಗೆ ಬರಲಿದೆ
- ನೀವು ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
- ಸಾಲದ ವಹಿವಾಟು ಈ ದಿನ ಬೇಡ
- ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
- ನೀಲಕಂಠ ಶಿವನನ್ನು ಆರಾಧಿಸಿ
ಸಿಂಹ
- ಚಿನ್ನ ಅಥವಾ ಬೆಳ್ಳಿಯ ಪದಾರ್ಥಗಳನ್ನು ಖರೀದಿಸುತ್ತೀರಿ
- ಸಂಬಂಧಿಕರಲ್ಲಿರುವ ಉತ್ತಮವಾದ ಬಂಧುತ್ವವನ್ನು ಕಾಪಾಡಿಕೊಳ್ಳಿ
- ಸೈದ್ಧಾಂತಿಕವಾದ ವಿಷಯಗಳ ಬಗ್ಗೆ ಹೆಚ್ಚು ವಾದ-ವಿವಾದ ಮಾಡಿಕೊಳ್ಳಬೇಡಿ
- ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕೆ ನೀವು ಹತ್ತಿರವಾಗುವ ಸಾಧ್ಯತೆಗಳಿವೆ
- ಕಳಂಕ ರಹಿತವಾದ ಕೆಲಸಕ್ಕೆ ದೊಡ್ಡವರ ಸಹಾಯ ಪಡೆಯಿರಿ
- ಕುಲದೇವರನ್ನು ಸ್ಮರಣೆ ಮಾಡಿ
ಕನ್ಯಾ
- ಬಹಳ ದಿನದ ಆಸೆಯೊಂದು ನೆರವೇರಬಹುದು
- ನಿಮ್ಮ ಕೆಲಸದಲ್ಲಿ ನೀವು ಒಂಟಿಯಾಗಬಹುದು
- ತುಂಬಾ ಗಮನವಿಟ್ಟು ಕೆಲಸವನ್ನು ನಿರ್ವಹಿಸಬೇಕು
- ವಿದ್ಯಾರ್ಥಿಗಳಿಗೆ ಅತಿ ಒತ್ತಡದ ದಿನವಾಗಿರಲಿದೆ
- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಮಾಡುತ್ತಾರೆ
- ಇಂದು ಧ್ಯಾನದ ಮೊರೆ ಹೋಗಿ
ತುಲಾ
- ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ
- ದುಬಾರಿ ಪದಾರ್ಥಗಳ ಖರೀದಿಯಲ್ಲಿ ತೊಡಗಬಹುದು
- ಅವಿವಾಹಿತರಿಗೆ ವಿವಾಹ ವಿಚಾರಕ್ಕೆ ಅವಕಾಶವಿದೆ
- ಮದುವೆ ವಿಚಾರ ಬಂದಾಗ ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿರುವುದಿಲ್ಲ
- ವ್ಯಾಪಾರ-ವ್ಯವಹಾರದಿಂದ ಉತ್ತಮ ಹಣ ಸಿಗಲಿದೆ
- ಚಾಲಕರಿಗೆ ಸೌಖ್ಯವಿದೆ ಲಾಭವಿದೆ
- ಸ್ತ್ರೀಯರು ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆ ವಿಶೇಷ ಗೌರವ ಮತ್ತು ಧನಲಾಭ ಸಿಗಲಿದೆ
- ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಹೊಟ್ಟೆಗೆ ಸಂಬಂಧಪಟ್ಟ ಅರೋಗ್ಯ ವ್ಯತ್ಯಯವಾಗಬಹುದು
- ಇದರ ಮಧ್ಯೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
- ನಂಬಿಕೆಯಿರುವವರ ಹತ್ತಿರ ವ್ಯವಹಾರದ ವಿಚಾರವನ್ನು ಚರ್ಚಿಸಿ
- ನಿಮ್ಮ ಯೋಜನೆಯಿಂದ ಬೇರೆಯವರಿಗೆ ಉಪಕಾರವಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಧನಸ್ಸು
- ರಾಜಕೀಯ ವ್ಯಕ್ತಿಗಳಿಗೆ ಶುಭದಿನ
- ಕೈಯಲ್ಲಿ ತುಂಬಾ ಹಣ ಇರಲಿದೆ
- ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಉಡುಗೊರೆಯನ್ನು ನೀಡುತ್ತೀರಿ
- ನಿಮ್ಮ ಬಗ್ಗೆ ಉತ್ತಮವಾದ ಪ್ರಶಂಸೆ ಸಿಗಲಿದೆ
- ಅವಿವಾಹಿತರಿಗೆ ಮದುವೆ ಮಾಡಿಸುವ ಭರವಸೆ ಕೊಡಬಹುದು
- ಸಂಜೆಯ ಹೊತ್ತಿಗೆ ಕಹಿ ಸುದ್ದಿ ಬರುವುದರಿಂದ ಮನಸ್ಸಿಗೆ ಬೇಸರವಾಗಬಹುದು
- ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
ಮಕರ
- ಮನೆಯವರ ಒತ್ತಾಯದ ಮೇರೆಗೆ ಹೊಸ ವಾಹನ ಖರೀದಿಸಲು ಮುಂದಾಗಬಹುದು
- ಕುಟುಂಬದ ಸದಸ್ಯರಿಗೆ ಸಂತೋಷವನ್ನುಂಟು ಮಾಡುತ್ತೀರಿ
- ಹಿರಿಯರ ಆಕ್ಷೇಪಣೆಗೆ ಒಳಗಾಗಬಹುದು
- ಹೊಸ ತಂತ್ರಜ್ಞಾನದ ಬಳಕೆಯಿಂದ ಮನೆಯಲ್ಲಿ, ವೃತ್ತಿಯಲ್ಲಿ ಲಾಭದ ಸೂಚನೆ ಕಾಣಬಹುದು
- ಕರ್ತವ್ಯ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ
- ಮೊದಲು ಮಕ್ಕಳಿಗೆ ತಿಳುವಳಿಕೆ ನೀಡಿ
- ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬಹುದು
- ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
- ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡುತ್ತೀರಿ
- ನಿಮ್ಮ ತಂದೆ ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
- ತಂದೆ ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರಲಿದೆ
- ತಂದೆ ತಾಯಿಯನ್ನು ಪ್ರಾರ್ಥಿಸಿ
ಮೀನ
- ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
- ನೀವು ನಿಮ್ಮ ಕೆಲಸ ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುವ ದಿನವಾಗಿರುತ್ತದೆ
- ಈ ನಷ್ಟದಿಂದ ನೀವು ದಂಡ ಕಟ್ಟ ಬೇಕಾಗಬಹುದು
- ಸಾಯಂಕಾಲದ ವೇಳೆಗೆ ಎದೆ ನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
- ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
- ಮಾರುತಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ