ಲಕ್ಷದಿಂದ ಲಕ್ಷ ಮಾಡೋದು ಹೇಗೆ? ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಆಗುತ್ತೆ ನಿಮ್ಮ ಆದಾಯ

author-image
Ganesh Nachikethu
Updated On
ಟೀ ಅಂಗಡಿ ಮಾಲೀಕನಿಗೆ ಬಂಪರ್​​; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?
Advertisment
  • ರಿಟೈರ್​ಮೆಂಟ್​​ ಲೈಫ್​​ಗೆ ಸೇವಿಂಗ್ಸ್ ಮಾಡಬೇಕು ಅನ್ನೋ ಆಸೆ
  • FD ಮಾಡೋಕೆ ಯಾವುದು ಬೆಸ್ಟ್​ ಬ್ಯಾಂಕ್​​? ಎಷ್ಟು ಬಡ್ಡಿ ಸಿಗಲಿದೆ?
  • ಅತಿಹೆಚ್ಚು ಬಡ್ಡಿ ನೀಡೋ ಹಲವು ಬ್ಯಾಂಕ್​ಗಳ ಲಿಸ್ಟ್​ ಇಲ್ಲಿದೆ ನೋಡಿ

ಎಲ್ಲರಿಗೂ ಈಗಿನಿಂದಲೇ ರಿಟೈರ್​ಮೆಂಟ್​​ ಲೈಫ್​​ಗೆ ಸೇವಿಂಗ್ಸ್ ಮಾಡಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಗೋಲ್ಡ್​, ರಿಯಲ್​ ಎಸ್ಟೇಟ್​ ಅಥವಾ ಸ್ಟಾಕ್​​ ಮಾರ್ಕೆಟ್​ನಲ್ಲಿ ಇನ್ವೆಸ್ಟ್​ ಮಾಡುತ್ತಾರೆ. ಅದರಲ್ಲೂ ಬಹುತೇಕರು ಎಫ್​​ಡಿ ಮೊರೆ ಹೋಗುತ್ತಾರೆ. ಅಂಥವರಿಗೆ ಎಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚು ಬಡ್ಡಿ ಸಿಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

9% ವಾರ್ಷಿಕ ಬಡ್ಡಿ ನೀಡಲಿದೆ ಯೂನಿಟಿ ಸ್ಮಾಲ್​​ ಫೈನಾನ್ಸ್​ ಬ್ಯಾಂಕ್​​

ಎಫ್​​ಡಿ ಮಾಡಬೇಕು ಎಂದರೆ ಥಟ್​ ಅಂತಾ ನೆನಪಾಗೋದು ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಕಾರಣ ಈ ಬ್ಯಾಂಕ್​​ ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ 9% ಮತ್ತು ಹಿರಿಯ ನಾಗರಿಕರಿಗೆ 9.5% ಬಡ್ಡಿ ನೀಡಲಿದೆ. ಅದರಲ್ಲೂ ಒಂದು ವರ್ಷ ಎಫ್​​ಡಿ ಇಡೋರಿಗೆ 7.85%, 3 ವರ್ಷಕ್ಕೆ 8.15% ಮತ್ತು 5 ವರ್ಷಕ್ಕೆ 8.15% ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಅತೀ ಹೆಚ್ಚು ಬಡ್ಡಿ ನೀಡೋ ಮತ್ತೊಂದು ಬ್ಯಾಂಕ್​​ ಎಂದರೆ ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್. ಇದು ಸಾಮಾನ್ಯ ಗ್ರಾಹಕರಿಗೆ 9% ಮತ್ತು ಹಿರಿಯ ನಾಗರಿಕರಿಗೆ 9.5% ಬಡ್ಡಿ ನೀಡುತ್ತದೆ. 1 ವರ್ಷದ FD ಮೇಲೆ 7%, 3 ವರ್ಷಕ್ಕೆ 9% ಮತ್ತು 5 ವರ್ಷಗಳ ಅವಧಿಗೆ 6.25% ದರದಲ್ಲಿ ಬಡ್ಡಿ ಕೊಡುತ್ತದೆ ಎಂದು ತಿಳಿದು ಬಂದಿದೆ.

ಉತ್ತಮ ಬಡ್ಡಿ ನೀಡೋ ಹಲವು ಬ್ಯಾಂಕ್​ಗಳು!

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 8.65% ಮತ್ತು ಹಿರಿಯ ನಾಗರಿಕರಿಗೆ 9.15% ಬಡ್ಡಿ ನೀಡುತ್ತದೆ. ಇಷ್ಟೇ ಅಲ್ಲ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಮೇಲೆ ಸಾಮಾನ್ಯ ಗ್ರಾಹಕರಿಗೆ 8.55% ಮತ್ತು ಹಿರಿಯ ನಾಗರಿಕರಿಗೆ 9.05% ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಜತೆಗೆ ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಕೂಡ ನಿಮಗೆ 8.5% ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಮಾತ್ರ 9.10% ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಕೊಹ್ಲಿ ಅಲ್ಲ; ಆರ್​​ಸಿಬಿ ಟೀಮ್​ಗೆ ಈ ಸ್ಟಾರ್​ ಪ್ಲೇಯರ್​ ಕ್ಯಾಪ್ಟನ್​​; ಸ್ಫೋಟಕ ಮಾಹಿತಿ ಬಹಿರಂಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment