/newsfirstlive-kannada/media/post_attachments/wp-content/uploads/2024/09/Agriculture.jpg)
ಇಡೀ ಜಗತ್ತಿನಲ್ಲಿ ಬಹುತೇಕರದ್ದು ಒಂದೇ ಧ್ಯೇಯ ದುಡ್ಡು ಮಾಡುವುದು. ಹಳ್ಳಿಯಿಂದ ದಿಲ್ಲಿವರೆಗೂ ಎಲ್ಲಾ ದುಡ್ಡು ಮಾಡಲು ಅನೇಕ ಮಾರ್ಗ ಹಿಡಿಯುತ್ತಾರೆ. ಏನಾದ್ರೂ ಬ್ಯುಸಿನೆಸ್​ ಮಾಡಿ ಸೆಟಲ್​ ಆಗಬೇಕು. ಹೇಗಾದ್ರೂ ಮಾಡಿ ಹಣ ಮಾಡಲೇಬೇಕು. ಎಲ್ಲರಿಗಿಂತಲೂ ಚೆನ್ನಾಗಿ ಬದುಕಬೇಕು. ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಿಕೊಳ್ಳಬೇಕು ಅನ್ನೋದು ಎಲ್ಲರ ಕನಸು. ಕೆಲವರು ವ್ಯವಹಾರದಿಂದ ಕೈ ಸುಟ್ಟುಕೊಂಡ ಮರೆಯಾಗುತ್ತಾರೆ. ಇನ್ನೂ ಹಲವರು ಉದ್ಯಮ ಆರಂಭಿಸಿ ಕೆಲವೇ ದಿನಗಳಲ್ಲಿ ಶ್ರೀಮಂತರಾಗುತ್ತಾರೆ.
ಪ್ರತಿಯೊಬ್ಬರದ್ದು ಲಾಭದಾಯಕ ವ್ಯಾಪಾರಕ್ಕೆ ಕೈ ಹಾಕಬೇಕು ಎಂಬುದೇ ಪ್ಲಾನ್​​. ಅದರಲ್ಲೂ ಯಶಸ್ಸು ಆಗಲು ಮನುಷ್ಯನಿಗೆ ತಾಳ್ಮೆ ಇರಬೇಕು. ಹೀಗೆ ಬೆಳೆಯಬೇಕು ಅನ್ನೋರಿಗೆ ಇಲ್ಲೊಂದು ಭರ್ಜರಿ ಲಾಭದಾಯಕ ವ್ಯಾಪಾರ ಇದೆ. ಆದರೆ ಅದು ಕೃಷಿಯಲ್ಲಿ ಅನ್ನೋದೆ ಖುಷಿ ವಿಚಾರ. ಇದಕ್ಕೆ ಬೇಕಿರುವುದು ಒಂದು ಎಕರೆ ಜಮೀನು.
/newsfirstlive-kannada/media/post_attachments/wp-content/uploads/2024/09/Teak-Wood-1.jpg)
ಕೃಷಿ ಎಂದರೆ ಕೇವಲ ಬೆಳೆ ಹಾಕುವುದು ಮಾತ್ರವಲ್ಲ ಬದಲಿಗೆ ಸಸಿ ನೆಡೆವುದು, ಮರಗಳು ಬೆಳೆಸುವುದು ಕೂಡ ಬೇಸಾಯದ ಭಾಗವೇ. ಅನೇಕರು ಮರಗಳು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಆಗಬಹುದು. ಈ ಪೈಕಿ ತೇಗ ಮರ ಒಂದು.
ತೇಗು ಮರ ಬೆಳೆಸಿದ್ರೆ ಕೋಟಿ ಕೋಟಿ ಗ್ಯಾರಂಟಿ!
ತೇಗದ ಮರಕ್ಕೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್​ ಇದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ರೈತ ತನ್ನ ಜಮೀನಿನಲ್ಲಿ ಈ ಮರ ನೆಟ್ಟರೆ ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ಲಾಭ ಗಳಿಸಬಹುದು. ತೇಗದ ಮರ ತುಂಬಾ ಬಲವಾಗಿರುತ್ತದೆ. ಅದರಿಂದ ತಯಾರಿಸಿದ ಪೀಠೋಪಕರಣಗಳು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಈ ಮರವನ್ನು ಮನೆಗಳು, ಹಡಗುಗಳು, ದೋಣಿಗಳು, ಬಾಗಿಲುಗಳು ಇತ್ಯಾದಿಗಳ ಕಿಟಕಿಗಳಲ್ಲಿ ಬಳಸಲಾಗುತ್ತದೆ. ಆದರೆ, ತೇಗದ ಮರ ಸಿದ್ಧವಾಗಲು ಕನಿಷ್ಠ 10-12 ವರ್ಷ ಕಾಯಬೇಕು.
/newsfirstlive-kannada/media/post_attachments/wp-content/uploads/2024/09/Teak-Wood.jpg)
ಒಂದು ಎಕರೆಯಲ್ಲಿ 500 ತೇಗದ ಮರ ಬೆಳೆಸಿದ್ರೆ 10 ವರ್ಷಗಳ ನಂತರ 1 ಕೋಟಿಗೆ ಮಾರಾಟ ಮಾಡಬಹುದು. ಸದ್ಯ ಮಾರುಕಟ್ಟೆಯಲ್ಲಿ ಒಂದು ಮರ ಸುಲಭವಾಗಿ 50 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಈ ರೀತಿಯಾಗಿ ಮರದ ಮೌಲ್ಯವೂ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us