ತಿಂಗಳ ಸಂಬಳ ಸಾಕಾಗುತ್ತಿಲ್ಲವೇ? ಈ ಬ್ಯುಸಿನೆಸ್​ ಮಾಡಿ ಬರೋಬ್ಬರಿ 50 ಸಾವಿರ ದುಡಿಯಿರಿ!

author-image
Ganesh Nachikethu
Updated On
ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್​ನ್ಯೂಸ್​; ಇನ್ಮುಂದೆ ಮಹಿಳೆಯರಿಗೆ ಮಾತ್ರವಲ್ಲ ಇವರಿಗೂ ಸಿಗಲಿದೆ 2 ಸಾವಿರ
Advertisment
  • ಎಲ್ಲರಿಗೂ ದುಡ್ಡು ಮಾಡಲೇಬೇಕು ಅನ್ನೋ ಆಸೆ ಇರುತ್ತದೆ
  • ಇದಕ್ಕೆ ಕಾರಣ ಎಷ್ಟು ಸಂಬಳ ಬಂದ್ರೂ ಜೀವನಕ್ಕೆ ಸಾಕಾಗಲ್ಲ
  • ಸಂಬಳ ಸಾಕಾಗಲ್ಲ ಅನ್ನೋರು ಹಣಕ್ಕಾಗಿ ಈ ಕೆಲಸ ಮಾಡಿ!

ಎಲ್ಲರಿಗೂ ದುಡ್ಡು ಮಾಡಲೇಬೇಕು ಅನ್ನೋ ಆಸೆ ಇರುತ್ತದೆ. ಇದಕ್ಕೆ ಕಾರಣ ಎಷ್ಟು ಸಂಬಳ ಬಂದ್ರೂ ಜೀವನಕ್ಕೆ ಸಾಕಾಗಲ್ಲ. ಈಗ ತಿಂಗಳ ಸಂಬಳ ಸಾಕಾಗಲ್ಲ ಅನ್ನೋರು IRCTC ಟಿಕೆಟ್ ಏಜೆಂಟ್ ಆಗಬಹುದು. ಈ ಮೂಲಕ ಹೆಚ್ಚಿನ ಹಣವನ್ನು ಗಳಿಸಬಹುದು.

ಯೆಸ್​​, ಯಾವುದೇ ಕಾರಣಕ್ಕೂ ಕೇವಲ ಸಂಬಳದ ಮೇಲೆ ಮಾತ್ರ ಡಿಪೆಂಡ್​ ಆಗಬೇಡಿ. ಬದಲಿಗೆ ಇದನ್ನು ಸರಿದೂಗಿಸಲು ಹೆಚ್ಚುವರಿ ಹಣವನ್ನು ಗಳಿಸುವುದು. IRCTC ಟಿಕೆಟ್ ಬುಕಿಂಗ್ ಏಜೆಂಟ್ ಆಗಿ ನೀವು ಸುಲಭವಾಗಿ ಆದಾಯ ಗಳಿಸಬಹುದು. ನೀವು ಮಾಡಬೇಕಾದ ಕೆಲಸ ಇಷ್ಟೇ IRCTC ಅನುಮೋದಿತ ಟಿಕೆಟ್ ಏಜೆಂಟ್ ಆಗುವುದು. ಇದರಲ್ಲಿ ನೀವು ಬುಕ್ ಮಾಡುವ ಪ್ರತಿ ಟಿಕೆಟ್‌ಗೆ ಕಮಿಷನ್ ಸಿಗಲಿದೆ. ಎಷ್ಟು ಬೇಕಾದ್ರೂ ಟಿಕೆಟ್​​ ಬುಕ್​ ಮಾಡಬಹುದು. ತಿಂಗಳಿಗೆ ಹತ್ತಾರು ಸಾವಿರ ಹಣ ಮಾಡಬಹುದು.

ಏಜೆಂಟ್​​ ಆಗಿ ಏನು ಮಾಡಬೇಕು?

ನೀವು ಏಜೆಂಟ್​ ಆದ ಬಳಿಕ ಎಲ್ಲಿಂದ ಬೇಕಾದ್ರೂ ಕೆಲಸ ಮಾಡಬಹುದು. ಇಂಥದ್ದೇ ಪ್ಲೇಸ್​ ಅಂತೇನು ಇಲ್ಲ. ಮನೆ ಆದ್ರೂ ಪರ್ವಾಗಿಲ್ಲ. ನಿಮ್ಮ ಆಯ್ಕೆಯ ಸ್ಥಳದಿಂದಲೇ ಉತ್ತಮ ಆದಾಯ ಗಳಿಸಬಹುದು. ಏಜೆಂಟ್ ಆಗಿ ಪ್ರಯಾಣಿಕರಿಗೆ ಟಿಕೆಟ್ ರಿಸರ್ಸ್​​​ ಮಾಡುವುದು ನಿಮ್ಮ ಜವಾಬ್ದಾರಿ.

publive-image

ಅರ್ಜಿ ಸಲ್ಲಿಸುವುದು ಹೇಗೆ?

ಏಜೆಂಟ್​​ ಆಗುವ ಮೊದಲು ನೀವು ಅಧಿಕೃತ IRCTC ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅದಕ್ಕಾಗಿ ಅಗತ್ಯವಿರೋ ಅರ್ಜಿ ಸಲ್ಲಿಸಬೇಕು. ಬಳಿಕ ನೀವು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಅಧಿಕೃತ ಏಜೆಂಟ್ ಆಗುತ್ತೀರಿ. ನೀವು ಬುಕ್ ಮಾಡುವ ಪ್ರತಿ ಟಿಕೆಟ್‌ಗೆ ಕಮಿಷನ್ ಪಡೆಯುತ್ತೀರಿ. ಇದು ಸಖತ್​​ ಸಿಂಪಲ್​​ ಕೆಲಸ ಆಗಿದ್ದು, ತಿಂಗಳಿಗೆ ಕನಿಷ್ಠ 50 ಸಾವಿರ ದುಡಿಯಬಹುದು.

ನಾನ್ ಎಸಿ ಪ್ರತಿ ಟಿಕೆಟ್‌ಗೆ ರೂ. 20, ಎಸಿ ಕ್ಲಾಸ್ ಟಿಕೆಟ್ ದರದಲ್ಲಿ 40 ರೂ. ಕಮಿಷನ್ ಸಿಗಲಿದೆ. ಹಬ್ಬದ ಸೀಸನ್​ನಲ್ಲಿ ಹೆಚ್ಚು ದುಡಿಯಬಹುದು. ಏಜೆಂಟ್ ಆಗಲು ಸಣ್ಣ ಶುಲ್ಕ ಇದೆ. ನೀವು ಒಂದು ವರ್ಷಕ್ಕೆ ರೂ 3,999 ಮತ್ತು 2 ವರ್ಷಗಳ ಪರವಾನಗಿಗಾಗಿ ರೂ 6,999 ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:ಇಡೀ ದಿನ ಸುರಿದ ಮಳೆಗೆ ತತ್ತರಿಸಿದ ಬೆಂಗಳೂರು; ಯಾವ ಏರಿಯಾದಲ್ಲಿ ಏನೇನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment