ಭರ್ಜರಿ ಗುಡ್​ನ್ಯೂಸ್​​; ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಗ್ಯಾಸ್​ ಸಿಲಿಂಡರ್​​​!

author-image
Ganesh Nachikethu
Updated On
Breaking: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
Advertisment
  • ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದು!
  • ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಗ್ಯಾಸ್​ ಸಿಲಿಂಡರ್​​
  • ಯಾರಿಗೆ? ಯಾವಾಗಿನಿಂದ ಮತ್ತೆಲ್ಲಿ ಸಿಗಲಿದೆ? ಏನ್ಮಾಡಬೇಕು?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಗೆದ್ದುಗೆ ಹಿಡಿಯಿತು. ಈ ಬೆನ್ನಲ್ಲೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿತ್ತು. ಇದಾದ ನಂತರ ಬಹುತೇಕ ರಾಜ್ಯಗಳಲ್ಲಿ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಉಚಿತ ಭಾಗ್ಯಗಳು ನೀಡುವುದು ಒಂದು ಟ್ರೆಂಡ್​ ಆಗಿತ್ತು. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್​​ ಸೌಲಭ್ಯ, ಹಣದ ಸಹಾಯ ಮಾಡುವುದು ಹೀಗೆ ಹಲವು ಯೋಜನೆಗಳಿದ್ದವು.

ಈಗ ಇಂಥದ್ದೇ ಯೋಜನೆಯೊಂದು ರಾಜಸ್ಥಾನದ ರಾಜ್ಯ ಸರ್ಕಾರ ಘೋಷಿಸಿದೆ. ಯಾರು ಬೇಕಾದ್ರೂ ಕೇವಲ 450 ರೂಪಾಯಿಗೆ ಗ್ಯಾಸ್​ ಸಿಲಿಂಡರ್​ ಖರೀದಿ ಮಾಡಬಹುದು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSA) ಅಡಿಯಲ್ಲಿ ಈ ಪ್ರಯೋಜನ ಪಡೆಯಬಹುದು. ಈ ಸ್ಕೀಮ್​​ ಅಡಿಯಲ್ಲಿ ಅರ್ಹ ಕುಟುಂಬಗಳು ಕೇವಲ 450 ರೂಪಾಯಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪಡೆಯಲಿದ್ದಾರೆ.

ಯೋಜನೆ ಪಡೆಯಲು ಏನು ಮಾಡಬೇಕು?

ರಾಜ್ಯ ಸರ್ಕಾರದ ಈ ಮಹತ್ವದ ಪ್ರಯೋಜನೆ ಪಡೆಯಲು ಎನ್‌ಎಫ್‌ಎಸ್‌ಎ ಪಡಿತರ ಚೀಟಿಗೆ ಲಿಂಕ್ ಮಾಡಬೇಕು. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಜತೆಗೆ ಎಲ್‌ಪಿಜಿ ಐಡಿ ಲಿಂಕ್​​ ಮಾಡುವುದು ಕಡ್ಡಾಯ.

ಯಾವಾಗ ಅಪ್ಲೈ ಮಾಡಬಹುದು?

ಅರ್ಹ ಕುಟುಂಬಗಳು ನವೆಂಬರ್​​ 5ನೇ ತಾರೀಕಿನಿಂದ 30ರೊಳಗೆ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಗರಿಷ್ಠ ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಲಿದೆ. ಪಿಒಎಸ್ ಯಂತ್ರಗಳ ಮೂಲಕ ಪ್ರತಿ ಎನ್‌ಎಫ್‌ಎಸ್‌ಎ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ, ಇ-ಕೆವೈಸಿ ಮತ್ತು ಎಲ್‌ಪಿಜಿ ಐಡಿ ಸೀಡಿಂಗ್ ಮಾಡಲಿದ್ದಾರೆ.

ಇನ್ನು ಈ ಪ್ರಯೋಜನ ಪಡೆಯಲು ಜನ ಆಧಾರ್ ಕಾರ್ಡ್, ಎಲ್ಲಾ ಕುಟುಂಬ ಸದಸ್ಯರ ಇ-ಕೆವೈಸಿ ದಾಖಲೆ ನೀಡಬೇಕು. ಎಲ್‌ಪಿಜಿ ಗ್ಯಾಸ್ ಪಾಸ್‌ಬುಕ್‌ ಅಥವಾ ಬಿಲ್‌ನೊಂದಿಗೆ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು. ಬಳಿಕ ನೀವು 450 ರೂಪಾಯಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ ಪ್ರಯೋಜನ ಪಡೆಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment