/newsfirstlive-kannada/media/post_attachments/wp-content/uploads/2025/04/GIRI_NAGAR_4.jpg)
ಬೆಂಗಳೂರು ಹಿಂದೆಂದಿಗಿಂತಲೂ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಬೆಳೆಯುತ್ತಿರುವ ಈ ಮಹಾನಗರದಲ್ಲಿ Investment Opportunity ಅಗಾಧವಾಗಿದೆ. ಈ ತರಹದ ಅವಕಾಶ ಹೊಸಕೆರೆ ಹಳ್ಳಿ ಸನಿಹದಲ್ಲಿರೋ ಗಿರಿನಗರದಲ್ಲೂ ಕಾಣಬಹುದು. ಗಿರಿನಗರ ಬೆಂಗಳೂರಿನ ನೈಋತ್ಯದಲ್ಲಿರುವ ಒಂದು ಬಡಾವಣೆಯಾಗಿದ್ದು, ಬನಶಂಕರಿ 3ನೇ ಹಂತದ ಒಂದು ಭಾಗವಾಗಿದೆ. ಶ್ರೀನಗರ, ಬ್ಯಾಟರಾಯನಪುರ, ಶ್ರೀನಿವಾಸನಗರ ಮತ್ತು ವಿದ್ಯಾನಗರ, ಹನುಮಂತನಗರ, ಬನಶಂಕರಿ, ಬಸವನಗುಡಿ ರೀತಿಯಲ್ಲೇ ಗಿರಿನಗರವೂ ಅಭಿವೃದ್ದಿ ಹೊಂದಿರೋ ಹಳೆಯ ಏರಿಯಾ ಆಗಿದೆ. ಗಿರಿನಗರ ಮೈಸೂರು ರಸ್ತೆ, ಬೆಂಗಳೂರು ಔಟರ್ ರಿಂಗ್ ರೋಡ್ಗೆ ಹೊಂದಿಕೊಂಡಿರೋದರಿಂದ Investment ಮಾಡಲು ಬೆಸ್ಟ್ ಪ್ಲೇಸ್. ಇಷ್ಟೇ ಅಲ್ಲ ತುಮಕೂರು ರೋಡ್ಗೂ ಹತ್ತಿರವಾಗಿರೋದರಿಂದ ಹೂಡಿಕೆಗೆ ಬೆಸ್ಟ್ ಅನ್ನಬಹುದು.
ಇನ್ನೂ, ಗಿರಿನಗರದಲ್ಲಿ ಹೂಡಿಕೆ ಏಕೆ ಮಾಡಬೇಕು? ಮನೆ, ಸೈಟ್, ಅಪಾರ್ಟ್ಮೆಂಟ್ ಖರೀದಿ ಮಾಡಲು ಬೆಸ್ಟ್ ಪ್ಲೇಸ್ ಏಕೆ? ಏನೆಲ್ಲಾ ಸೌಲಭ್ಯಗಳು ಇಲ್ಲಿವೆ? ಅನ್ನೋ ಕಂಪ್ಲೀಟ್ ಡೀಟೈಲ್ಸ್ ನೋಡೋಣ!.
ಮೊದಲಿಗೆ ಗಿರಿನಗರದ ಸ್ಟ್ರೆಂಥ್ ಅನ್ನೋದು ನೋಡೋದಾದ್ರೆ!
ಗಿರಿನಗರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಗೆ ತುಸು ಹತ್ತಿರದಲ್ಲೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ವೇಗವಾಗಿ ಬೆಳೆಯಲಿರೋ ಏರಿಯಾ ಇದು. ಜೊತೆಗೆ ಔಟರ್ ರಿಂಗ್ ರೋಡ್ ಹತ್ತಿರದಲ್ಲೇ ಇರೋದರಿಂದ ತುಮಕೂರು ರಸ್ತೆಗೆ ಕೇವಲ 10-15 ನಿಮಿಷದಲ್ಲಿ ತಲುಪಬಹುದು. ಮಾಗಡಿ ರಸ್ತೆಗೂ ಹತ್ತಿರದಲ್ಲಿದ್ದು ಕೂಗಳತೆ ದೂರದಲ್ಲಿ ನೈಸ್ ಕಾರಿಡಾರ್ ಇದೆ. ಇನ್ನು ಸಿಟಿ ಬಿಟ್ಟು ಮೈಸೂರು ಕಡೆ ಟ್ರಾವೆಲ್ ಮಾಡ್ತೀರಿ ಅಂದ್ರೆ ಅದಕ್ಕೂ ಹತ್ತಿರದಲ್ಲಿದೆ. ಸಿಟಿ ತಲುಪೋದಕ್ಕೂ ಸನಿಹದಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಔಟರ್ರಿಂಗ್ ರೋಡ್ಗೆ ಹೊಂದಿಕೊಂಡಿರೋದರಿಂದ ಗಿರಿನಗರದಿಂದ ನಗರದ ಬೇರೆ ಬೇರೆ ಭಾಗಗಳಿಗೆ ಈಜಿ ಕನೆಕ್ಟಿವಿಟಿ ಇದೆ. ಹಾಗಾಗಿ ಇಲ್ಲಿ ಭೂಮಿ ಖರೀದಿಗೆ ಬೆಸ್ಟ್ ಪ್ಲೇಸ್. ನಾಯಂಡಹಳ್ಳಿ ರೈಲ್ವೇ ನಿಲ್ದಾಣ ಕೇವಲ 4 ಕಿ.ಮೀ ದೂರದಲ್ಲಿದೆ. ನೇರಳೆ ಲೇನ್ ಮೆಟ್ರೋ ದೀಪಾಂಜಲಿ ನಗರ ಸ್ಟೇಷನ್, 2 ಕಿ.ಮೀ ಹತ್ತಿರದಲ್ಲೇ ಇದೆ. ಇನ್ನು ಬಸ್ ಕನೆಕ್ಟಿವಿಟಿ ಅಂತ ಬಂದ್ರೆ ಸ್ಯಾಟಲೈಟ್ ಬಸ್ ಸ್ಟಾಪ್ ಸಖತ್ ನಿಯರ್ ಇದೆ. ನಗರದ ಬೇರೆ ಬೇರೆ ಭಾಗಗಳಿಗೆ ಬಸ್ ಸಂಪರ್ಕ ಕೂಡ ಇದೆ. ಈಗಾಗಲೇ ಅಭಿವೃದ್ಧಿ ಹೊಂದಿರುವ ಏರಿಯಾ ಆಗಿರುವುದರಿಂದ ಜಮೀನು ಖರೀದಿ ಮಾಡೋರಿಗೆ ಅವಕಾಶವೂ ಇದೆ.
ಗಿರಿನಗರ ಬಡಾವಣೆಯ ವೀಕ್ನೆಸ್ ನೋಡೋದಾದ್ರೆ!
ಈ ಬಡಾವಣೆ ಈಗಾಗಲೇ ಡೆವಲಪ್ ಆಗಿರುವ ಬಡಾವಣೆ ಆಗಿರೋದರಿಂದ ಹೊಸ ಪ್ರಾಪರ್ಟಿ ಖರೀದಿಗಿರೋ ಅವಕಾಶ ಸ್ವಲ್ಪ ಕಡಿಮೆ ಇದೆ. ಆದರೆ ಇಂಡಿಪೆಂಡೆಂಟ್ ಮನೆಗಳಿದ್ದು Residential Area ಆಗಿರೋದರಿಂದ ಯೂಸ್ಡ್ ಮನೆಗಳು ಹೆಚ್ಚಾಗಿ ಸಿಗುತ್ತವೆ. ಕೆಲ ವರ್ಷಗಳಿಂದ ಇಲ್ಲಿ ಗಾರ್ಬೆಜ್ ಸಮಸ್ಯೆ ಕೂಡ ಇದ್ದು, ಇಲ್ಲಿ ರೋಡ್ಗಳು ಸ್ವಲ್ಪ ಇಕ್ಕಟಾಗಿವೆ. ಹೀಗಾಗಿ ಕಾರಿದ್ದವರಿಗೆ ಈ ಏರಿಯಾ ತುಸು COSTLY ಆಗಬಹುದು. ಸ್ವಲ್ಪ ಪಾರ್ಕಿಂಗ್ ಸಮಸ್ಯೆ ಕಾಡಬಹುದು.
ಹೂಡಿಕೆಗೆ ಏಕೆ ಬೆಸ್ಟ್ ಪ್ಲೇಸ್ ಎಂದು ನೋಡೋದಾದ್ರೆ!
ಗಿರಿನಗರ ಹತ್ತಿರದಲ್ಲೇ ನ್ಯಾಷನಲ್ ಪಬ್ಲಿಕ್ ಸ್ಕೂಲ್, euro kids ಪಬ್ಲಿಕ್ ಸ್ಕೂಲ್, ಬಿಎಮ್ಎಸ್ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜು ಕೂಡ ಇದೆ. ಹೂಡಿಕೆಗೆ ಅವಕಾಶಗಳು ಹೆಚ್ಚಿವೆ. ನಿಮಗೆ 2 BHK ಮನೆಗಳು 13 ಸಾವಿರದಿಂದ 20 ಸಾವಿರದವರೆಗೆ ಸಿಗುತ್ತೆ. ಉಳಿದ ಏರಿಯಾಗಳಿಗೆ ಹೋಲಿಸಿದ್ರೆ ಬಾಡಿಗೆ ಸ್ವಲ್ಪ ಹೆಚ್ಚಾಗೆ ಇದೆ. ಅದೇ ಲೀಸ್ಗೆ ಮನೆಗಳನ್ನ ನೋಡ್ತೀರಿ ಅಂತಾದ್ರೆ 2 BHK 12 ಲಕ್ಷದಿಂದ 20 ಲಕ್ಷ ರೂಪಾಯಿವರೆಗಿದೆ.
ಮನೆ, ಸೈಟ್ ರೇಟ್ ಹೇಗಿದೆ ಅಂತಾ ನೋಡೋದಾದ್ರೆ!
ಗಿರಿ ನಗರ ಮಿಡ್ಲಕ್ಲಾಸ್ನವರಿಗೆ ಹೇಳಿ ಮಾಡಿಸಿದ ಜಾಗ ಅಂತಲೇ ಹೇಳಬಹುದು. ಯಾಕಂದ್ರೆ ಅಪಾರ್ಟ್ಮೆಂಟ್ಗಳಿಗಿಂತ ಸಣ್ಣ ಪುಟ್ಟ ಮನೆಗಳು ನೋಡೋದಕ್ಕೆ ಸಿಗ್ತಾವೆ. ಲಕ್ಸುರಿ ಅಪಾರ್ಟ್ಮೆಂಟ್ ಅದ್ರಲ್ಲೂ 3 BHK 1.38 ಕೋಟಿಯಿಂದ 2.50 ಕೋಟಿಯವರೆಗೆ ಸಿಗ್ತಾವೆ. ಇನ್ನೂ 4 BHK 1.60 ಕೋಟಿಯಿಂದ 6 ಕೋಟಿಯವರೆಗೂ ಲಭ್ಯವಿದೆ. ನಮಗೆ ಮನೆ ಅಪಾರ್ಟ್ಮೆಂಟ್ ಬೇಡ ಅಂತ ಸೈಟ್ ಖರೀದಿ ಮಾಡೋ ಯೋಚ್ನೆಯಲ್ಲಿದ್ರೆ, ಪ್ರತಿ square feet ಬೆಲೆ 15 ಸಾವಿರದಿಂದ 22 ಸಾವಿರ ವರೆಗೂ ಇದೆ.
ಇನ್ನೂ Health and Education ನೋಡೋದಾದ್ರೆ!
ಹೆಲ್ತ್ ವಿಚಾರಕ್ಕೆ ಬಂದ್ರೆ ದೊಡ್ಡ ಮಟ್ಟದ ಆಸ್ಪತ್ರೆಗಳು ಯಾವು ಏರಿಯಾ ಸುತ್ತಮುತ್ತ ಇಲ್ಲ. ಪಲ್ಸ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ಶಾಲಿನಿ ನರ್ಸಿಂಗ್ ಹೋಮ್, ಜೈನ್ ಹಾಸ್ಪಿಟಲ್ ಬಿಟ್ರೆ ಬೇರೆ ದೊಡ್ಡ ಆರೋಗ್ಯ ಸಂಸ್ಥೆ ಯಾವುದು ಇಲ್ಲ. ಇನ್ನೂ ವೀಕೆಂಡ್ನಲ್ಲಿ ಟೈಮ್ ಕಳಿಬೇಕು ಅನ್ನೋರಿಗೆ ಜಿಟಿ ವರ್ಲ್ಡ್ ಮಾಲ್ ಇದೆ. ಜೊತೆಗೆ ಆಗಾ ಮಾಲ್ ಕೂಡ ಟೈಮ್ ಸ್ಪೆಂಡ್ ಮಾಡೋಕೆ ಬೆಸ್ಟ್ ಪ್ಲೇಸ್. Mathrushree ಮಾರ್ಕೆಟ್ನಲ್ಲೂ ನಿಮ್ಮ ವೀಕೆಂಡ್ ಪ್ಲ್ಯಾನ್ ಮಾಡಬಹುದು. ಇನ್ನು ಎಜುಕೇಶನ್ ವಿಚಾರಕ್ಕೆ ಬಂದ್ರೆ ಶಾರದಾ ಪಬ್ಲಿಕ್ ಸ್ಕೂಲ್,ಯೂರೋ ಕಿಡ್, ನ್ಯಾಷನಲ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್, BMS ಇಂಜಿನೀರಿಂಗ್ ಕಾಲೇಜ್,PES ಯೂನಿವರ್ಸಿಟಿ ಇಲ್ಲಿದೆ.
ಇರೋ ಸಮಸ್ಯೆಗಳೇನು ಅಂತಾ ನೋಡೋದಾದ್ರೆ!
ನಾವು ಮೊದಲೇ ಹೇಳಿದಂತೆ ಏರಿಯಾದಲ್ಲಿ ರೋಡ್ಗಳು ಚಿಕ್ಕದಾಗಿವೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆ ಎದುರಾಗಬಹುದು. ಸ್ವಲ್ಪ ಇಕ್ಕಟ್ಟಾದ ಏರಿಯಾ ಆಗಿರೋದ್ರಿಂದ ಓಡಾಡೋದು ತುಸು ಕಷ್ಟ ಆಗ್ಬಹುದು. ಏನಾದ್ರೂ ಆರೋಗ್ಯ ಹದಗೆಟ್ರೆ ಅಡ್ಮಿಟ್ ಆಗ್ಬೇಕು ಅಂದ್ರೆ ಹೇಳಿಕೊಳ್ಳುವಂತ ದೊಡ್ಡ ಆಸ್ಪತ್ರೆಗಳು ಯಾವು ಇಲ್ಲ. ಹೊಸಕೆರೆ ಹಳ್ಳಿ ಸಿಗ್ನಲ್ ಫ್ರೀ ಕಾರಿಡಾರ್ಗೆ ಫ್ಲೈ ಓವರ್ ಕಾಮಗಾರಿ ನಡೀತಿದ್ದು ಇನ್ನೂ ಮುಗಿಯೋ ಹಾಗೆ ಕಾಣಿಸ್ತಿಲ್ಲ, ಇದು ಸ್ವಲ್ಪ ಕಿರಿ ಕಿರಿ ತರಬಹುದು. ಇನ್ನು ಚರಂಡಿ ಕಾಮಗಾರಿ ರೋಡ್ ರಿಪೇರಿ ಅಂತೆಲ್ಲ ಇದ್ದಿದ್ದೆ. ಹೀಗಾಗಿ ಸ್ವಲ್ಪ ತಲೆನೋವಿಗೆ ಕಾರಣವಾಗ್ಬಹುದು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ