/newsfirstlive-kannada/media/post_attachments/wp-content/uploads/2024/04/Whatsapp-2.jpg)
ಇತ್ತೀಚೆಗೆ ದಿನದಿಂದ ದಿನಕ್ಕೆ ಸಂಚಾರಿ ನಿಯಮಗಳು ಹೆಚ್ಚಾಗುತ್ತಿದೆ. ಉಲ್ಲಂಘಿಸುವವರ ಸಂಖ್ಯೆಯು ಏರಿಕೆಯಾಗುತ್ತಿದೆ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಪ್ರತಿಯೊಬ್ಬರಿಗೂ ದಂಡ ವಿಧಿಸಲಾಗುತ್ತದೆ. ಆದರೆ ಈ ದಂಡವನ್ನು ಪಾವತಿಸಲು ಸಂಚಾರಿ ಪೊಲೀಸ್ ಠಾಣೆ, ಕೋರ್ಟ್ ಅಥವಾ ಸಾರಿಗೆ ಇಲಾಖೆಯ ವೆಬ್ಸೈಟ್ಗೆ ಹೋಗಬೇಕಾಗುತ್ತದೆ. ಆದರೀಗ ತಂತ್ರಜ್ಞಾನ ಮುಂದುವರಿದಿದ್ದು, ವಾಟ್ಸ್ಆ್ಯಪ್ನಲ್ಲೇ ಟ್ರಾಫಿಕ್ ಚಲನ್ ಪಾವತಿಸುವ ಆಯ್ಕೆ ಬರುತ್ತಿದೆ.
ಸಂಚಾರಿ ನಿಯಮ ಉಲ್ಲಂಘಿಸಿದವರು ದಂಡವನ್ನು ಪಾವತಿಸಲು ಅಲ್ಲಿ, ಇಲ್ಲಿ ಸಂಚರಿಸಬೇಕಾಗುತ್ತದೆ. ಆದರೆ ಆ ವ್ಯರ್ಥ ಸಮಯವನ್ನು ಉಳಿಸಲು ವಾಟ್ಸ್ಆ್ಯಪ್ ಮುಂದಾಗಿದೆ. ಮೆಟಾ ಒಡೆತನದ ವ್ಯಾಟ್ಸ್ಆ್ಯಪ್ ಟ್ರಾಫಿಕ್ ಚಲನ್ ಅನ್ನು ಆ್ಯಪ್ನಲ್ಲೇ ಪಾವತಿಸುವ ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ಮಾಡುತ್ತಿದೆ.
ವಾಟ್ಸ್ಆ್ಯಪ್ನಲ್ಲೇ ಚಲನ್ ಪಾವತಿಸಿ
ದೆಹಲಿಯಲ್ಲಿ ಪ್ರತಿದಿನ ಸುಮಾರು 1 ಸಾವಿರದಿಂದ 1,500 ವಾಹನ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡ ವಿಧಿಸಲಾಗುತ್ತಿದೆ. ಆದರೀಗ ಟ್ರಾಫಿಕ್ ಚಲನ್ ಪಾವತಿಯನ್ನು ಸುಲಭಗೊಳಿಸಲು ವಾಟ್ಸ್ಆ್ಯಪ್ ಮುಂದಾಗಿದೆ.
ವಾಟ್ಸ್ಆ್ಯಪ್ ಸೇವೆಯ ಹೊರತಾಗಿ ಚಾಲನಾ ಪರವಾನಗಿ ಪ್ರಕ್ರಿಯೆಯನ್ನು ಸಂಪೂರ್ಣ ಆನ್ಲೈನ್ ಮಾಡಲು ಸಾರಿಗೆ ಇಲಾಖೆಯು ಯೋಚಿಸಿದೆ. ಶೀಘ್ರದಲ್ಲೇ ಈ ಸೇವೆ ಜಾರಿಗೆ ಬರಲಿದೆ. ಜನರು ಸಾರಿಗೆ ಕಚೇರಿಗೆ ಭೆಟಿ ನೀಡದೆಯೇ ತಮ್ಮ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅಥವಾ ನವೀಕರಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಗಿಲ್, ಅಯ್ಯರ್, ಕೊಹ್ಲಿ ಅಬ್ಬರ; ಇಂಗ್ಲೆಂಡ್ಗೆ ಟೀಮ್ ಇಂಡಿಯಾ ಬರೋಬ್ಬರಿ 357 ರನ್ಗಳ ಟಾರ್ಗೆಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ