SSLC ಮುಗಿಸಿ ಮನೆಯಲ್ಲೇ ಕೂತಿದ್ದೀರಾ? ಡೈರೆಕ್ಟ್​​ ಇಂಜಿನಿಯರಿಂಗ್​ ಮಾಡಬಹುದು.. ಹೇಗೆ ಅಂತೀರಾ..?

author-image
Ganesh
Updated On
SSLC ಮುಗಿಸಿ ಮನೆಯಲ್ಲೇ ಕೂತಿದ್ದೀರಾ? ಡೈರೆಕ್ಟ್​​ ಇಂಜಿನಿಯರಿಂಗ್​ ಮಾಡಬಹುದು.. ಹೇಗೆ ಅಂತೀರಾ..?
Advertisment
  • ಪಿಯುಸಿಯಲ್ಲಿ ಶೇಕಡ. 50ರಷ್ಟು ಅಂಕ ಪಡೆದಿದ್ದೀರಾ?
  • ಮುಂದೇನು? ಅನ್ನೋ ನಿಮ್ಮನ್ನು ಕಾಡುತ್ತಲೇ ಇದ್ಯಾ?
  • ಬಿಇ ಸೇರಲು ಪಿಯುಸಿ ಸೈನ್ಸ್​ ಮಾಡಲೇಬೇಕು ಅಂತೇನಿಲ್ಲ

II PUC ಪರೀಕ್ಷೆಯನ್ನು ಈಗಾಗಲೇ ಎರಡು ಬಾರಿ ನಡೆಸಿದ್ದು 2 ಬಾರಿಯ ಎಕ್ಸಾಂ ರಿಸಲ್ಟ್​​​ ಹೊರಬಿದ್ದಿದೆ. ಈಗ ಮೂರನೇ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. II PUCಯಲ್ಲಿ ಸೈನ್ಸ್​ ಓದಿದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಿಇಟಿ, ಜೆಇಇ ಮೇನ್‌ ಪರೀಕ್ಷೆ, ಕಾಮೆಡ್‌ಕೆ, ಯುಜಿಇಟಿ ಬರೆದು ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಬಹುದು. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಅಷ್ಟೇ ಅಲ್ಲ, ಜೆಇಇ ಮೇನ್‌ ರಿಸಲ್ಟ್‌ ಕೂಡ ಬಂದಿದ್ದು, ಈ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದವರು ದೇಶದ ಐಐಟಿ, ಐಐಐಟಿ ಮತ್ತು ಎನ್‌ಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ಇದನ್ನೂ ಓದಿ: ಮೊಮ್ಮಗನಿಗೆ ವಿಶ್ ಮಾಡಿದ ರಜನಿಕಾಂತ್​.. ಡಿವೋರ್ಸ್​ ಪಡೆದರೂ ಮಗನಿಗಾಗಿ ಒಂದಾದ ಧನುಷ್​, ಐಶ್ವರ್ಯ!

publive-image

ಈಗಾಗಲೇ ಕಾಮೆಡ್‌ಕೆ ರಿಸಲ್ಟ್‌ ಕೂಡ ಬಂದಿದೆ. ಸದ್ಯ ಅನೌನ್ಸ್​ ಆಗಬೇಕಿರುವುದು ಯುಜಿಸಿಇಟಿ ಫಲಿತಾಂಶ ಮಾತ್ರ. ರಾಜ್ಯದ ಸರ್ಕಾರಿ ಅನುದಾನಿತ, ಅನುದಾನರಹಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯಲು ಈ ರಿಸಲ್ಟ್‌ ಬಹಳ ಮುಖ್ಯ. ಅದಕ್ಕಾಗಿ ಬಿಇ ಆಕಾಂಕ್ಷಿಗಳು ಕಾಯುತ್ತಿದ್ದಾರೆ. ಒಂದು ವೇಳೆ II PUC ಫೇಲಾದವ್ರು ಅಥವಾ ಪಿಯುಸಿ ವಿಜ್ಞಾನದಲ್ಲಿ ಶೇಕಡ. 50ರಷ್ಟು ಅಂಕ ಪಡೆದವರು ಇಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಸೇರಬಹುದೇ? ಅನ್ನೋ ಪ್ರಶ್ನೆ ಹಲವರಿಗೆ ಕಾಡುತ್ತಿದೆ.

ನೀವು ದ್ವಿತೀಯ ಪಿಯುಸಿಯಲ್ಲಿ ಎಷ್ಟು ಬೇಕಾದ್ರೂ ಮಾರ್ಕ್ಸ್​​ ಪಡೆಯಿರಿ ಅಥವಾ ಜಸ್ಟ್​​ ಪಾಸ್​​ ಆಗಿರಿ ಪರ್ವಾಗಿಲ್ಲ. ಆದರೆ ನೀವು ಕೆಸಿಇಟಿ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದಿದ್ದಲ್ಲಿ ನಿಮಗೆ ಸೀಟು ಸಿಗುವ ಅವಕಾಶಗಳು ಇರುತ್ತವೆ. ನಿಮ್ಮ ದ್ವಿತೀಯ ಪಿಯುಸಿಯ ಒಟ್ಟು ಅಂಕಗಳ ಪೈಕಿ ಶೇಕಡ. 50 ಅಂಕಗಳನ್ನು ಕೆಸಿಇಟಿ ಅಂಕಗಳೊಂದಿಗೆ ಸೇರಿಸಿ Rank ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ಆಗ ನೀವು ಇಂಜಿನಿಯರಿಂಗ್ ಸೀಟು ಪಡೆಯಲು ಕೆಸಿಇಟಿ ಕೌನ್ಸಿಲಿಂಗ್‌ಗೆ 5 ಸುತ್ತಿನವರೆಗೆ ಭಾಗವಹಿಸುವ ಅವಕಾಶ ಇರುತ್ತದೆ. ಒಂದು ವೇಳೆ ನೀವು ಸರ್ಕಾರಿ ಕೋಟಾದಲ್ಲಿ ಪ್ರವೇಶಕ್ಕೆ ಅರ್ಹರಾಗದಿದ್ದಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಪಡೆಯಬಹುದು.

ಇದನ್ನೂ ಓದಿ: ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!

ಕೆಸಿಇಟಿ ಬರೆಯದವರು ಕೂಡ ಇಂಜಿನಿಯರಿಂಗ್ ಪ್ರವೇಶ ಪಡೆಯಬಹುದು..

ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಶೇಕಡ.50 ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ರೂ ಒಂದು ವೇಳೆ ನೀವು ಕರ್ನಾಟಕ ಸಿಇಟಿ ಬರೆಯದಿದ್ರೂ ಇಂಜಿನಿಯರಿಂಗ್​​ ಸೀಟು ಪಡೆಯಬಹುದು. ಅದಕ್ಕೆ ನೀವು ಕಾಮೆಡ್‌ಕೆ ಯುಜಿಇಟಿ ಅಥವಾ ಜೆಇಇ ಮೇನ್‌ ಪರೀಕ್ಷೆ ಎರಡರಲ್ಲಿ ಯಾವುದಾದ್ರೂ ಒಂದು ಬರೆದಿದ್ರೂ ಸಾಕು. ಕಡಿಮೆ ಅಂಕ ಇದ್ರೂ ಯುಜಿಸಿಇಟಿ, ಕಾಮೆಡ್‌ಕೆ, ಜೆಇಇ ಯಾವುದಾದರೂ ಒಂದು ಬರೆದಿದ್ರೂ ಮ್ಯಾನೇಜ್ಮೆಂಟ್‌ ಕೋಟಾದಡಿ ಇಂಜಿನಿಯರಿಂಗ್‌ಗೆ ಸೀಟು ಪಡೆಯಬಹುದು.

ವಿಜ್ಞಾನ ಪಿಯು ಅಂಕಗಳು ಕಡಿಮೆ ಇದ್ದಲ್ಲಿ ನಿಮಗೆ ಎರಡು ಆಯ್ಕೆಗಳಿವೆ..

ನೀವು ಕಡಿಮೆ ಅಂಕ ಗಳಿಸಿದ್ದರೂ ಬಿಇ ಪ್ರವೇಶ ಸಾಧ್ಯ. ಆದರೆ ಸರಾಸರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿದ್ಧರಿರಬೇಕು. ಇಲ್ಲಿ ಎರಡು ಅಂಶಗಳು ಇಂಪಾರ್ಟೆಂಟ್​. ನೀವು ಉತ್ತಮ ಇಂಜಿನಿಯರಿಂಗ್ ಕಾಲೇಜು ಸೇರಬೇಕು ಎಂಬ ಆಸೆಯನ್ನು ಕೈಬಿಡಬೇಕು. ಜತೆಗೆ ಹೆಚ್ಚು ಡೊನೇಷನ್‌, ಪ್ರವೇಶ ಶುಲ್ಕ ನೀಡಲು ಸಿದ್ಧರಿದ್ದರೆ ಡೀಸೆಂಟ್‌ ಕಾಲೇಜಿಗೆ ಪ್ರವೇಶ ಪಡೆಯಬಹುದು.

ಇದನ್ನೂ ಓದಿ: ಕೈಗೆಟುಕುವ ದರದಲ್ಲಿ MBBS ಸೀಟ್.. ಆದರೂ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗೋದು ಯಾಕೆ..?

ಒಂದು ವೇಳೆ ಪಿಯುಸಿ ಫೇಲಾದ್ರೆ ಮುಂದೇನು?

ಕೆಲವು ಸಲ ಕಡಿಮೆ ಅಂಕದಿಂದ ಯಾವುದೇ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಆಗದಿರಬಹುದು. ಆಗ ದ್ವಿತೀಯ ಪಿಯುಸಿ ವಿಜ್ಞಾನ ಓದಿದ ಆಧಾರದಲ್ಲಿ ಡಿಪ್ಲೊಮಾ ಎರಡನೇ ವರ್ಷ ಅಂದ್ರೆ ಮೂರನೇ ಸೆಮಿಸ್ಟರ್‌ಗೆ ಸುಲಭವಾಗಿ ಲ್ಯಾಟರಲ್ ಎಂಟ್ರಿ ಪಡೆಯಬಹುದು. ನಂತರ ಡಿಪ್ಲೊಮ ಮುಗಿಸಿ, ಡಿಸಿಇಟಿ ಪರೀಕ್ಷೆ ಬರೆದು ಬಿಇ ಎರಡನೇ ವರ್ಷದ/ಮೂರನೇ ಸೆಮಿಸ್ಟರ್‌ಗೆ ಅಥವಾ ಬಿ.ಟೆಕ್‌ಗೆ ಅಡ್ಮಿಷನ್‌ ಪಡೆಯಬಹುದು. ಅಥವಾ ನೀವು ಪಿಯುಸಿ ಫೇಲಾದ್ರೂ ಮತ್ತೆ 10ನೇ ತರಗತಿ ಆಧಾರದ ಮೇರೆಗೆ ಡಿಪ್ಲೋಮಾ ಮಾಡಬಹುದು.

ಹಲವು ಕಾಲೇಜುಗಳಲ್ಲಿ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆಯಲು ಕನಿಷ್ಠ ಶೇಕಡ.50 ಅಂಕಗಳು ಬೇಕು. ಒಂದು ವೇಳೆ ಸಿಇಟಿ ಅಂಕಗಳು ನೆರವಿಗೆ ಬರದೆ ಬಿಇ ಪ್ರವೇಶ ಸಾಧ್ಯವಾಗದವರು ಸುಲಭವಾದ ಕೋರ್ಸ್‌ಗಳಾದ ಬಿಎಸ್ಸಿ ಸ್ನಾತಕ, ಬಿ.ಕಾಂ ಸ್ನಾತಕ ಕೋರ್ಸ್‌ಗಳನ್ನು ಓದಬಹುದು. ನಂತರ ಸರ್ಕಾರಿ ಹುದ್ದೆಗೆ ಪ್ಲಾನ್‌ ಮಾಡಿ ಓದಬಹುದು.

ಇದನ್ನೂ ಓದಿ: NEET-PG 2025 ಪರೀಕ್ಷೆಗೆ ಹೊಸ ದಿನಾಂಕ ನಿಗದಿ; ಮಹತ್ವದ ಬದಲಾವಣೆಗಳು ಪ್ರಕಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment