ಆಧಾರ್​ ಕಾರ್ಡ್​​ ಅಪ್ಡೇಟ್​​ ಮಾಡಲು ಮತ್ತೊಂದು ಅವಕಾಶ; ನೀವು ಮಾಡಬೇಕಿರುವುದು ಇಷ್ಟೇ..!

author-image
Ganesh Nachikethu
Updated On
ಆಧಾರ್​ ಕಾರ್ಡ್​ ಮೇಲೆ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ; ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ
Advertisment
  • ಆಧಾರ್​​ ಕಾರ್ಡ್​ ನವೀಕರಣಕ್ಕೆ ಇನ್ನು 6 ದಿನ ಗಡುವು
  • ಇದೇ ತಿಂಗಳು ಮಾರ್ಚ್​​​​ 25ರವರೆಗೆ ಸೇವೆ ಚಾಲ್ತಿಯಲ್ಲಿ!
  • ಉಚಿತವಾಗಿ ಆಧಾರ್​​ ಕಾರ್ಡ್​ ನವೀಕರಣ ಮಾಡ್ಬೋದು

ನಿಮ್ಮ ಆಧಾರ್ ​​ಕಾರ್ಡ್ ಅಪ್ಡೇಟ್​ ಮಾಡಬೇಕಾ? ಏನಾದ್ರೂ ಸಮಸ್ಯೆ ಇದ್ಯಾ? ಹಾಗದ್ರೆ ಕೂಡಲೇ ಸರಿ ಮಾಡಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ​​ಕಾರ್ಡನ್ನು ಆನ್​ಲೈನ್​ ಮೂಲಕ ​ನವೀಕರಿಸಲು ಮತ್ತೆ ಗಡುವು ನೀಡಿದೆ. ಇದೇ ತಿಂಗಳು ಮಾರ್ಚ್​​​ 25ರವರೆಗೆ ಈ ಸೇವೆ ಚಾಲ್ತಿಯಲ್ಲಿರಲಿದೆ.

ಆಧಾರ್​​ಕಾರ್ಡ್​ನಲ್ಲಿ ಫೋಟೋ, ವಿಳಾಸವನ್ನು ಬದಲಾಯಿಸಬೇಕು ಎಂದಾದರೆ ನವೀಕರಿಸಬಹುದಾಗಿದೆ. ಅದಕ್ಕಾಗಿ ಸುಮಾರು ಇನ್ನೂ ಕೇವಲ 6 ದಿನ ಗಡುವು ನೀಡಲಾಗಿದೆ.

ಆಧಾರ್​​ ನೋಂದಣಿ ಮತ್ತು ನವೀಕರಣದ ನಿಯಮ 2016ರ ಪ್ರಕಾರ, ಆಧಾರ್​​ ಕಾರ್ಡ್​ ಹೊಂದಿರುವ ವ್ಯಕ್ತಿಗಳು ನೋಂದಣಿ ದಿನಾಂಕದಿಂದ 10 ವರ್ಷಗಳಿಗೊಮ್ಮೆ ದಾಖಲೆಯನ್ನು ನವೀಕರಿಸಬೇಕು. 5 ಮತ್ತು 15 ವರ್ಷದ ಮಕ್ಕಳ ನೀಲಿ ಆಧಾರ್​ಕಾರ್ಡ್​ನಲ್ಲಿರುವ ವಿವರಗಳನ್ನು ಆನ್​ಲೈನ್​ ಮೂಲಕ ನವೀಕರಿಸಲು ಅವಕಾಶವಿದೆ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್​ ನವೀಕರಿಸುವುದು ಹೇಗೆ?

uidai.gov.inಗೆ ಭೇಟಿ ನೀಡಿ. ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ.

"MY Aadhar" ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್ ಮೆನುವಿನಿಂದ "ನಿಮ್ಮ ಆಧಾರ್ ಅನ್ನು ನವೀಕರಿಸಿ" ಆಯ್ಕೆ ಮಾಡಿ.

" ಆನ್‌ಲೈನಲ್ಲಿ ಆಧಾರ್ ನವೀಕರಣ" ತೆರೆಯುತ್ತ. ಬಳಿಕ "ಡಾಕ್ಯುಮೆಂಟ್ ನವೀಕರಣದ" ಮೇಲೆ ಕ್ಲಿಕ್ ಮಾಡಿ.

ನಿಮ್ಮ UAD ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀಡಿ "OTP ಕಳುಹಿಸಿ" ಕ್ಲಿಕ್ ಮಾಡಿ.

OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು "ಲಾಗಿನ್" ಮಾಡಿ.

ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ. ಹೆಸರು, ವಿಳಾಸ, ಜನ್ಮ ದಿನಾಂಕ, ಇತ್ಯಾದಿ. ಹೊಸ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.

ನವೀಕರಣ ಮಾಡಿದ ಬಳಿಕ "ಸಲ್ಲಿಸು" ಆಯ್ಕೆ ಮೇಲೆ ಕ್ಲಿಕ್ ಮಾಡಿ. ನವೀಕರಣ ವಿನಂತಿಯನ್ನು ಬೆಂಬಲಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

"ನವೀಕರಣ ವಿನಂತಿಯನ್ನು ಸಲ್ಲಿಸಿ" ಕ್ಲಿಕ್ ಮಾಡಿ. ನಿಮ್ಮ ವಿನಂತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು SMS ಮೂಲಕ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ಸ್ವೀಕರಿಸುತ್ತೀರಿ.

ಆಧಾರ್​ ನವೀಕರಣಕ್ಕೆ ಏನೆಲ್ಲಾ ದಾಖಲೆಗಳು ಬೇಕು?

ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಸರ್ಕಾರ ನೀಡಿದ ಗುರುತಿನ ಚೀಟಿಗಳು, ಮಾರ್ಕ್‌ಶೀಟ್‌ಗಳು, ವಿವಾಹ ಪ್ರಮಾಣಪತ್ರ, ಪಡಿತರ ಚೀಟಿ.

ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು (3 ತಿಂಗಳಿಗಿಂತ ಹಳೆಯದಲ್ಲ), ವಿದ್ಯುತ್ ಅಥವಾ ಗ್ಯಾಸ್ ಸಂಪರ್ಕ ಬಿಲ್‌ಗಳು (3 ತಿಂಗಳಿಗಿಂತ ಹಳೆಯದಲ್ಲ), ಪಾಸ್‌ಪೋರ್ಟ್, ಮದುವೆ ಪ್ರಮಾಣಪತ್ರ, ರೇಷನ್ ಕಾರ್ಡ್, ಆಸ್ತಿ ತೆರಿಗೆ ರಸೀದಿಗಳು (ಒಂದು ವರ್ಷಕ್ಕಿಂತ ಹಳೆಯದಲ್ಲ), ಸರ್ಕಾರ ನೀಡಿದ ಐಡಿ ಕಾರ್ಡ್‌ಗಳು.

ಇದನ್ನೂ ಓದಿ:ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮಾರ್ಚ್​​ ತಿಂಗಳಲ್ಲೇ ಅತ್ಯಧಿಕ ಬಿಸಿಲು ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment