ನಿಮಗೂ ಸರಿಗಮಪ Grand Finale ನೋಡೋ ಆಸೆ ಇದ್ಯಾ? ಸಂಗೀತ ಪ್ರಿಯರು ಓದಲೇಬೇಕಾದ ಸ್ಟೋರಿ

author-image
Veena Gangani
Updated On
ನಿಮಗೂ ಸರಿಗಮಪ Grand Finale ನೋಡೋ ಆಸೆ ಇದ್ಯಾ? ಸಂಗೀತ ಪ್ರಿಯರು ಓದಲೇಬೇಕಾದ ಸ್ಟೋರಿ
Advertisment
  • ಕನ್ನಡ ಸರಿಗಮಪ ಅದ್ಧೂರಿ ಫಿನಾಲೆಗೆ ಕೌಂಟ್​ಡೌನ್​ ಆರಂಭ
  • ಆರು ಸ್ಪರ್ಧಿಗಳಿಗೆ ಮುಂದಿನ ವಾರ ಶುರುವಾಗಲಿದೆ ಅಗ್ನಿ ಪರೀಕ್ಷೆ
  • ಸರಿಗಮಪ ಕಾರ್ಯಕ್ರಮವನ್ನು ನೇರವಾಗಿ ನೋಡೋ ಆಸೆ ಇದ್ಯಾ?

ಕನ್ನಡ ಸರಿಗಮಪ ಅದ್ಧೂರಿ ಫಿನಾಲೆಗೆ ಕೌಂಟ್​ಡೌನ್​ ಶುರುವಾಗಿದೆ. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: RCB ಆಟಗಾರರಿಗೆ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಸನ್ಮಾನ.. ಅನುಮತಿ ಸಿಗುತ್ತಾ?

ಇನ್ನೂ ಒಂದು ವಾರದಲ್ಲಿ ಸರಿಗಮಪ ಶೋ ಅಂತ್ಯವಾಗಲಿದೆ. ಇಷ್ಟು ದಿನ ಸ್ಪರ್ಧಿಗಳು ತಮ್ಮ ಹಾಡುಗಳ ಮೂಲಕವೇ ವೀಕ್ಷಕರ ಮನಸ್ಸಿಗೆ ಮುದ ನೀಡುತ್ತಿದ್ದರು. ಇದೀಗ ಟಾಪ್​ 6 ಸ್ಪರ್ಧಿಗಳಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ.

ಹೌದು, ಸರಿಗಮಪ ವೇದಿಕೆಯಲ್ಲಿ ಪ್ರತಿಭೆಗಳ ಮಹಾ ಅನ್ವೇಷಣೆ ನಡೀತಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಫಿನಾಲೆ ಹತ್ತಿರ ಬರುತ್ತಿದ್ದಂತೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

publive-image

ಈ ವಾರದ ಕೊನೆಯಲ್ಲಿ ನಡೆಯಲಿರುವ ‘ಟಿಕೆಟ್ ಟು ಫಿನಾಲೆ’ಯಲ್ಲಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಬಾಳು ಬೆಳಗುಂದಿ, ದ್ಯಾಮೇಶ, ರಶ್ಮಿ ಡಿ, ಅಮೋಘ ವರ್ಷ, ಶಿವಾನಿ ಮತ್ತು ಆರಾಧ್ಯ ರಾವ್ ಆಯ್ಕೆಯಾಗಿದ್ದಾರೆ. ಈ ಆರು ಮಂದಿ ಅದ್ಭುತ ಹಾಡುಗಾರರು.

publive-image

ಈ ಆರು ಸ್ಪರ್ಧಿಗಳಲ್ಲಿ ಸರಿಗಮಪ ವಿನ್ನರ್​ ಪಟ್ಟ ಯಾರಿಗೆ ಸೇರಲಿದೆ ಎಂದು ಭಾನುವಾರದ ಸಂಚಿಕೆಯಲ್ಲಿ ಗೊತ್ತಾಲಿದೆ. ಇನ್ನೂ, ಸರಿಗಮಪ ಗ್ರ್ಯಾಂಡ್ ಫಿನಾಲೆಯನ್ನು ನೇರವಾಗಿ ನೋಡಲು ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಜೀ ಕನ್ನಡ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಇದೇ ಬುಧವಾರ ಬೆಳಿಗ್ಗೆ 9ರಿಂದ ಕನ್ನಡ ಕಚೇರಿಯಲ್ಲಿ ಉಚಿತ ಪಾಸ್ ವಿತರಿಸಲಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಜೂನ್ 5 ಗುರುವಾರ ಮಧ್ಯಾಹ್ನ 3:30ಕ್ಕೆ ಮೈಸೂರು ರಸ್ತೆಯಲ್ಲಿರೋ ನಂದಿ ಲಿಂಕ್ ಗ್ರೌಂಡ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮವನ್ನು ನೇರವಾಗಿ ನೋಡಲು  ಇಚ್ಚಿಸುವವರು ಭಾಗಿಯಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment