ವಾಟ್ಸ್​ಆ್ಯಪ್ ಬಳಕೆದಾರರಿಗೆ ಗುಡ್​ನ್ಯೂಸ್.. Meta AI ನಿಂದ ಬಿಗ್​ ಅಪ್​ಡೇಟ್ಸ್​..!

author-image
Ganesh
Updated On
ವಾಟ್ಸ್​ಆ್ಯಪ್ ಬಳಕೆದಾರರಿಗೆ ಗುಡ್​ನ್ಯೂಸ್.. Meta AI ನಿಂದ ಬಿಗ್​ ಅಪ್​ಡೇಟ್ಸ್​..!
Advertisment
  • ಉಚಿತವಾಗಿ ವಿಡಿಯೋ ಎಡಿಟ್ ಮಾಡಬಹುದು
  • ಸದ್ಯ ಅಮೆರಿಕದಲ್ಲಿ ಮಾತ್ರ ಈ ಟೂಲ್ ಲಭ್ಯ
  • 10 ಸೆಕೆಂಡ್ ವಿಡಿಯೋ ಎಡಿಟಿಂಗ್​ಗೆ ಅಪ್ಷನ್

ಮೆಟಾ AI ಹೊಸ ಅಪ್​ಡೇಟ್ ಪಡೆದುಕೊಳ್ತಿದೆ. ಬಳಕೆದಾರರಿಗೆ ವೀಡಿಯೊ ಎಡಿಟಿಂಗ್ ಆಯ್ಕೆಯನ್ನು ಪರಿಚಯಿಸುತ್ತಿದೆ. ಜನ ಹೆಚ್ಚು, ಹೆಚ್ಚು ವಾಟ್ಸ್​ಆ್ಯಪ್​​ ಬಳಸುತ್ತಿದ್ದಾರೆ. ಅವರಿಗೆ ಮೆಟಾ AI ವಿಡಿಯೋ ಎಡಿಟಿಂಗ್ ಅಪ್ಷನ್ ಸಿಗಲಿದೆ.

ಸದ್ಯ ಮೆಟಾ AI ಸೆಲೆಕ್ಟೆಡ್ ಏರಿಯಾಗಳಿಗೆ ತನ್ನ ಹೊಸ ಟೂಲ್ ಪರಿಚಯ ನೀಡಿದೆ. ಕ್ರಮೇಣ ಹೆಚ್ಚಿನ ಬಳಕೆದಾರರು ಇದರ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಈ ವೀಡಿಯೊ ಎಡಿಟಿಂಗ್ ಟೂಲ್, ಮೆಟಾ AI ವೆಬ್‌ಸೈಟ್‌ನಲ್ಲಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಎಡಿಟ್ಸ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.

AI ಪ್ರಾಂಪ್ಟ್‌ಗಳನ್ನು Instagram ಅಥವಾ Facebook ನಲ್ಲಿ ಶೇರ್​​ ಮಾಡುವ ಬಟ್ಟೆ, ಸ್ಥಳ ಅಥವಾ ಬ್ರೈಟ್​ನೆಸ್​ ಅನ್ನು ಚೇಂಜ್ ಮಾಡಲು ಬಳಸಿಕೊಳ್ಳಬಹುದು. ಅಂದ್ಹಾಗೆ ಬಳಕೆದಾರರಿಗೆ ಇದರ ಪ್ರಯೋಜನ ಇದೇ ವರ್ಷ ಕೊನೆಯಿಂದ ಸಿಗಲಿದೆ ಎಂದು ಮೆಟಾ ತಿಳಿಸಿದೆ.

AI ವಿಡಿಯೋ ಎಡಿಟಿಂಗ್ ಟೂಲ್ ಬಳಕೆ ಹೇಗೆ..?

  • ನೀವು ವೀಡಿಯೊವನ್ನು ಮೆಟಾ AI ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಎಡಿಟ್ಸ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ..
  •  50 ಪ್ರೀ-ಸೆಟ್ ಪ್ರಾಂಪ್ಟ್‌ ಬಳಸಿಕೊಂಡು 10 ಸೆಕೆಂಡುಗಳ ವೀಡಿಯೊ ಉಚಿತವಾಗಿ ಎಡಿಟ್ ಮಾಡಬಹುದು
  •  ಮೆಟಾ AI ವೀಡಿಯೊ ಗ್ರಾಫಿಕ್ ಅಥವಾ ಕಾಮಿಕ್ ಬುಕ್ಸ್​ ರೀತಿಯಲ್ಲಿ ಎಡಿಟ್ ಮಾಡಬಹುದು

ವಿಡಿಯೋ ಎಡಿಟಿಂಗ್ ಅನ್ನೊಂದು ಒಬ್ಬ ವ್ಯಕ್ತಿಯ ಸ್ಕಿಲ್ ಮೇಲೆ ಅಲಂಬಿತವಾಗಿರುತ್ತದೆ. ಅವರ ಆಲೋಚನೆಗೆ ತಕ್ಕಂತೆ ವಿಡಿಯೋ ಎಡಿಟಿಂಗ್ ಮಾಡಬಹುದು. 10 ಸೆಕೆಂಡ್​ನ ವಿಡಿಯೋ ಮಾತ್ರ ಎಡಿಟ್ ಮಾಡಬಹುದು. ಸದ್ಯ ಅಮೆರಿಕದಲ್ಲಿ ಮಾತ್ರ ಈ ಆಪ್ಷನ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಲಭ್ಯವಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment