ಟೀಮ್​ ಇಂಡಿಯಾಗೆ ಡೆಡ್ಲಿ ಆಲ್‌ರೌಂಡರ್ ಎಂಟ್ರಿ; ಹಾರ್ದಿಕ್ ಪಾಂಡ್ಯಗೆ ಶುರುವಾಯ್ತು ಭಾರೀ ಆತಂಕ

author-image
Ganesh Nachikethu
Updated On
ಟೀಂ ಇಂಡಿಯಾ ಮುಂದೆ ಬಿಗ್​ ಟಾಸ್ಕ್.. ಹೊಸ ವರ್ಷದ ರೆಸ್ಯೂಲೇಷನ್ ಹೆಂಗಿದೆ..?
Advertisment
  • ಟೀಮ್​ ಇಂಡಿಯಾಗೆ ಯುವ ಡೆಡ್ಲಿ ಆಲ್​ರೌಂಡರ್​ ಎಂಟ್ರಿ
  • ಹಾರ್ದಿಕ್​​ ಪಾಂಡ್ಯ ಸ್ಥಾನಕ್ಕೆ ಯುವ ಆಲ್​ರೌಂಡರ್​ ಪೈಪೋಟಿ
  • ಚೂರು ಯಾಮಾರಿದ್ರೂ ಹಾರ್ದಿಕ್​ ಪಾಂಡ್ಯ ಸ್ಥಾನಕ್ಕೆ ಕುತ್ತು!

ಬರೋಬ್ಬರಿ 24 ವರ್ಷಗಳ ನಂತರ ಟೀಮ್​​ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯ ಸೋಲು ಕಂಡಿದೆ. ಇದು ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡಕ್ಕೆ ತೀವ್ರ ಮುಖಭಂಗ ತಂದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಟಿ20 ಸರಣಿಗಾಗಿ ಸೌತ್​ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಭಾರತ ಟಿ20 ತಂಡದ ಕ್ಯಾಪ್ಟನ್​​​ ಸೂರ್ಯಕುಮಾರ್​ ನೇತೃತ್ವದಲ್ಲಿ ತಂಡ ಕಣಕ್ಕಿಳಿಯುತ್ತಿದೆ.

ನವೆಂಬರ್​​ 8ನೇ ತಾರೀಕಿನಿಂದ ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 4 ಟಿ20 ಪಂದ್ಯಗಳ ಸರಣಿ ಶುರುವಾಗಲಿದೆ. ಟಿ20 ವಿಶ್ವಕಪ್​ ಚಾಂಪಿಯನ್​​ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕು ಎಂದು ಸೌತ್​ ಆಫ್ರಿಕಾ ಭಾರೀ ತಯಾರಿ ನಡೆಸಿಕೊಂಡಿದೆ. ಸೌತ್​ ಆಫ್ರಿಕಾ ವಿರುದ್ಧ ಸರಣಿಗೆ ಟೀಮ್​ ಇಂಡಿಯಾದಲ್ಲಿ ಬಹುತೇಕ ಯುವಕರಿಗೆ ಮಣೆ ಹಾಕಲಾಗಿದೆ. ಟೀಮ್​ ಇಂಡಿಯಾಗೆ ಡೆಡ್ಲಿ ಯುವ ಆಲ್​ರೌಂಡರ್​ ಸ್ಥಾನ ಪಡೆದುಕೊಂಡಿದ್ದು, ಇದು ಹಾರ್ದಿಕ್ ಪಾಂಡ್ಯಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಟೀಮ್​ ಇಂಡಿಯಾಗೆ ಯುವ ಆಲ್​ರೌಂಡರ್​ ಎಂಟ್ರಿ

ಇತ್ತೇಚೆಗೆ ನಡೆದ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಎ ತಂಡದ ಪರ ಅಮೋಘ ಪ್ರದರ್ಶನ ನೀಡಿದವ್ರು ರಮಣದೀಪ್​​ ಸಿಂಗ್. ಇವರು ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಏಷ್ಯಾಕಪ್‌ನಲ್ಲಿ ಲೀಗ್ ಹಂತದಲ್ಲಿ ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಪ್ರಮುಖ ಕಾರಣ ರಮಣದೀಪ್ ಸಿಂಗ್. ರಮಣದೀಪ್​ ಸಿಂಗ್​​ ಆಲ್‌ರೌಂಡರ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ರು.

ಅಫ್ಘಾನ್​​ ವಿರುದ್ಧ ಅಬ್ಬರ

ಅಫ್ಘಾನ್​​ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಎ ಕ್ಯಾಪ್ಟನ್​ ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಅವರ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಕ್ರೀಸ್​ಗೆ ಬಂದ ರಮಣದೀಪ್ ಅಫ್ಘಾನ್ ತಂಡದ ಬೌಲರ್​ಗಳ ಬೆಂಡೆತ್ತಿದ್ರು. ಇನ್ನಿಂಗ್ಸ್​​ ಉದ್ಧಕ್ಕೂ ಭರ್ಜರಿ ಬ್ಯಾಟಿಂಗ್​ ಮಾಡಿದ ಯುವ ಆಲ್​ರೌಂಡರ್​​ 64 ರನ್​ ಚಚ್ಚಿದ್ರು. ಆದ್ರೂ, ಅಫ್ಘಾನ್​ ವಿರುದ್ಧ ಭಾರತ ಸೋತಿತ್ತು.

ಹಾರ್ದಿಕ್​​ ಎದೆ ಢವಢವ

ಭಾರತ ತಂಡಕ್ಕೆ ರಮಣದೀಪ್​​ ಸಿಂಗ್​ ಎಂಟ್ರಿ ಆಗಿದೆ. ಇವ್ರ ಎಂಟ್ರಿ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಸ್ಥಾನಕ್ಕೆ ಕುತ್ತು ತಂದಿದೆ. ಹಾರ್ದಿಕ್​ ಪಾಂಡ್ಯ ಗಾಯಗೊಂಡು ಟೀಮ್​ ಇಂಡಿಯಾದಿಂದ ಹೊರಗೆ ಹೋದಲ್ಲಿ ರಮಣದೀಪ್​​ ಸಿಂಗ್​​​ ಅದೃಷ್ಟ ಖುಲಾಯಿಸಲಿದೆ. ಯುವ ಆಲ್​ರೌಂಡರ್​​ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 3 ವಿಕೆಟ್ ತೆಗೆದು ಬ್ಯಾಟ್​ನಿಂದ 94 ರನ್ ಕೊಡುಗೆ ನೀಡಿದ್ರು.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಹೀಗಿದೆ!

ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್​), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವಿಶಾಕ್, ಅವೇಶ್ ಖಾನ್ ಯಶ್ ದಯಾಳ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment