/newsfirstlive-kannada/media/post_attachments/wp-content/uploads/2024/07/MYS-SANJEEV.jpg)
ಮೈಸೂರು: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾತ್ರಿ ಮೈಸೂರಿನ ಯಾದವಗಿರಿಯಲ್ಲಿ ನಡೆದಿದೆ. ಸಂಜಯ್ (22) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಸಂಜಯ್ ಮೈಸೂರಿನ ಚಾಮರಾಜ ಮೊಹಲ್ಲಾ ನಿವಾಸಿಯಾಗಿದ್ದ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ರೈಲು ಹಾದು ಹೋಗಿರುವ ತೀವ್ರತೆಗೆ ಯುವಕನ ದೇಹ ಜರ್ಜರಿತಗೊಂಡಿದೆ. ಎರಡೂ ಕಾಲುಗಳು ಕಟ್ ಆಗಿವೆ. ವಿಷಯ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದರು. ಮಗನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.
ಇದನ್ನೂ ಓದಿ:ನಿಮ್ಮ ಮೊಬೈಲ್ನಲ್ಲಿ ಈ App ಇದ್ದರೆ ಕೂಡಲೇ Uninstall ಮಾಡಿ -ಸರ್ಕಾರದಿಂದ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ