Advertisment

ಜಾತ್ರೆಗೆ ಬಂದವರ ಮೇಲೆ ಹರಿದ ಕಾರು; ಸ್ಥಳದಲ್ಲೇ ಉಸಿರು ನಿಲ್ಲಿಸಿದ ಯುವತಿ; ಹಲವರ ಸ್ಥಿತಿ ಗಂಭೀರ

author-image
Ganesh Nachikethu
Updated On
ಜಾತ್ರೆಗೆ ಬಂದವರ ಮೇಲೆ ಹರಿದ ಕಾರು; ಸ್ಥಳದಲ್ಲೇ ಉಸಿರು ನಿಲ್ಲಿಸಿದ ಯುವತಿ; ಹಲವರ ಸ್ಥಿತಿ ಗಂಭೀರ
Advertisment
  • ಜಾತ್ರೆಗೆಂದು ಬಂದಿದ್ದ ಭಕ್ತರ ಮೇಲೆ ಕಾರು ಹಾಯಿಸಿದ ಪಾಪಿ
  • ಕಾರು ಡಿಕ್ಕಿ.. ಯುವತಿ ಸಾವು, 20ಕ್ಕೂ ಅಧಿಕ ಜನರಿಗೆ ಗಾಯ
  • ದೇವಸ್ಥಾನದ ಮಂಟಪಕ್ಕೆ ಡಿಕ್ಕಿ.. ಜನರ ಮೇಲೂ ಹರಿದ ಕಾರು

ಉತ್ತರ ಕನ್ನಡ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಜಾತ್ರೆಗೆ ನುಗ್ಗಿಸಿದ್ದಾನೆ. ಪರಿಣಾಮ ಜಾತ್ರೆಗೆ ಬಂದಿದ್ದ ಯುವತಿಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅನೇಕ ಜನರು ಆಸ್ಪತ್ರೆ ಬೆಡ್​ ಮೇಲೆ ಮಲಗುವಂತೆ ಮಾಡಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿರೋ ಭಯಾನಕ ಅಪಘಾತ.

Advertisment

ಜಾತ್ರೆಗೆಂದು ಬಂದಿದ್ದ ಭಕ್ತರ ಮೇಲೆ ಕಾರು ಹಾಯಿಸಿದ ಪಾಪಿ

ಒಂದು ಕಾರು 20ಕ್ಕೂ ಹೆಚ್ಚು ಮಂದಿಗೆ ಗಾಯ ಮಾಡಿದೆ. ಸಾಲದೂ ಎಂದು ಓರ್ವ ಯುವತಿಯ ಪ್ರಾಣವನ್ನ ತೆಗೆದಿದೆ. ಮಕರ ಸಂಕ್ರಾಂತಿ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ರವೀಂದ್ರ ನಗರ ಸರ್ಕಲ್ ಬಳಿ ಅಯ್ಯಪ್ಪ ಸ್ವಾಮಿ ಜಾತ್ರೆ ನಡೆಯುತ್ತಿತ್ತು. ಈ ಜಾತ್ರೆಯಲ್ಲಿ ನೂರಾರು ಜನರು ಸೇರಿದ್ದರು. ಪೊಲೀಸರು ಬ್ಯಾರಿಕೇಡ್​ಗೆ ಗುದ್ದಿ ಒಳಗಡೆ ನುಗ್ಗಿದ ಕಾರು ಜಾತ್ರೆಗೆಂದು ಬಂದಿದ್ದ ಭಕ್ತರ ಮೇಲೆ ಹರಿದಿದೆ. ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ.

ದೇವಸ್ಥಾನ ಮಂಟಪಕ್ಕೆ ಡಿಕ್ಕಿ.. ಜನರ ಮೇಲೂ ಹರಿದ ಕಾರು

ದೀಪಾ ರಾಮಗೊಂಡ ವಯಸ್ಸು 21. ಇವರು ಸಿದ್ದಾಪುರದ ಕವಲಕೊಪ್ಪ ನಿವಾಸಿ. ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿತ್ತಾದ್ರೂ ದಾರಿ ಮಧ್ಯೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪಿಶಾಚಿ, ದೇವಸ್ಥಾನ ಮಂಟಪಕ್ಕೆ ಡಿಕ್ಕಿ ಹೊಡೆಸಿ ಜನರ ಮೇಲೆ ಕಾರು ಹತ್ತಿಸಿದ್ದಾನೆ.

ಚಾಲಕ ರೋಷನ್ ಫೆರ್ನಾಂಡಿಸ್​ ಪೊಲೀಸರ ವಶಕ್ಕೆ

ಇನ್ನು ದೇಗುಲದ ಮಂಟಪಕ್ಕೆ ಡಿಕ್ಕಿ ಹೊಡೆದವನು. ತಪ್ಪಿಸಿಕೊಳ್ಳಲು ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಕಾರಿನ ಮೇಲೆ ಕಲ್ಲು ಎಸೆದು ಅಡ್ಡಹಾಕಿದ್ದಾರೆ. ಸಿದ್ದಾಪುರ ಪೊಲೀಸರು ಫುಲ್ ಟೈಟ್ ಆಗಿ ಯರಾಽಬಿರಿಽ ಕಾರು ಚಲಾಯಿಸಿದ್ದ ರೋಶನ್ ಫೆರ್ನಾಂಡಿಸ್​ನನ್ನ ವಶಕ್ಕೆ ಪಡೆದಿದ್ದಾರೆ.

Advertisment

ಒಟ್ಟಾರೆ, ಶೋಕಿ ಗಿರಾಕಿಗಳ ಅಟಾಟೋಪಕ್ಕೆ ಬಾಳಿ ಬದುಕ ಬೇಕಿದ್ದ ಯುವತಿಯ ಪ್ರಾಣ ತೆಗೆದಿದೆ. ಈ ಅಪಘಾತ ಆಕಸ್ಮಿಕನಾ? ಇಲ್ಲಿ ಪ್ಲ್ಯಾನ್​ ಮಾಡಿದ್ದಾ? ಆದರೆ ಅನುಮಾನವಂತು ಕಾಡ್ತಿದೆ. ಪೊಲೀಸರ ವಿಚಾರಣೆಯಲ್ಲಿ ನಿಜ ಏನು ಅನ್ನೋದು ಗೊತ್ತಾಗಬೇಕಿದೆ.

ಇದನ್ನೂ ಓದಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಕಾರು ಅಪಘಾತ ಕೇಸ್​ಗೆ ಬಿಗ್​ ಟ್ವಿಸ್ಟ್; ವಾಮಾಚಾರ ಮಾಡಿರೋ ಶಂಕೆ​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment