Advertisment

ಪ್ರೀತಿಸಿದವನನ್ನು ಮದುವೆಯಾಗಲು ಒಪ್ಪದ ಮನೆಯವರು; ಶೋಲೆ ಸಿನಿಮಾ ನೆನಪಿಸಿದ ಹುಡುಗಿ; ಮಾಡಿದ್ದೇನು?

author-image
Gopal Kulkarni
Updated On
ಪ್ರೀತಿಸಿದವನನ್ನು ಮದುವೆಯಾಗಲು ಒಪ್ಪದ ಮನೆಯವರು; ಶೋಲೆ ಸಿನಿಮಾ ನೆನಪಿಸಿದ ಹುಡುಗಿ; ಮಾಡಿದ್ದೇನು?
Advertisment
  • ವಾಟರ್​ ಟ್ಯಾಂಕ್ ಏರಿ ಕುಟುಂಬದವರನ್ನು ಫಜೀತಿಗೆ ಸಿಲುಕಿಸಿದ ಹುಡುಗಿ
  • ಪ್ರೀತಿಸಿದವನ ಜೊತೆ ಮದುವೆ ಮಾಡುವಂತೆ ಪಟ್ಟು ಹಿಡಿದು ಬ್ಲ್ಯಾಕ್​ಮೇಲ್​
  • ವಾಟರ್ ಟ್ಯಾಂಕ್ ಏರಿದವಳನ್ನು ರಕ್ಷಿಸಿದ್ದೇ ಒಂದು ಮಹಾ ಸಾಹಸದ ಕಥೆ

17 ವರ್ಷದ ಹುಡುಗಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಲು ಕುಟಂಬದವರು ಒಪ್ಪಲಿಲ್ಲ ಎಂದು ವಾಟರ್ ಟ್ಯಾಂಕ್ ಏರಿ ಅಲ್ಲಿಂದ ಬಿದ್ದು ಸಾಯುವುದಾಗಿ ಹೆದರಿಸಿದ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿದೆ. ವಾಟರ್​ ಟ್ಯಾಂಕ್ ಮೇಲೆ ಏರಿ ನಾನು ಇಲ್ಲಿಂದ ಬಿದ್ದು ಸಾಯುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಹುಡುಗಿಯ ಈ ವರ್ತನೆ ಹಿಂದಿ ಶೋಲೆ ಸಿನಿಮಾದ ದೃಶ್ಯವನ್ನು ನೆನಪಿಸಿದೆ. ಬಸಂತಿಗಾಗಿ ವೀರು ವಾಟರ್ ಟ್ಯಾಂಕ್ ಏರಿ ಅಲ್ಲಿಂದ ಬೀಳುವುದಾಗಿ ಹೆದರಿಸುವ ಸೀನ್​ ರಿಕ್ರಿಯೇಟ್ ಆದ ರೀತಿ ಈ ಹುಡುಗಿ ಮಾಡಿದ್ದಾಳೆ.

Advertisment


">January 22, 2025


ವರದಿಯ ಪ್ರಕಾರ ಹುಡುಗಿ ತನ್ನ ಸಹೋದರಿಯ ಮೈದುನನ್ನು ಮದುವೆಯಾಗಲು ಸಜ್ಜಾಗಿದ್ದಳಂತೆ ಆದ್ರೆ ಕುಟುಂಬದವರು ಇದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಬೇರೆಯವರೊಂದಿಗೆ ಆಕೆಯನ್ನು ಮದುವೆ ಮಾಡುವುದಾಗಿ ಹೇಳಿದ್ದಾರೆ.. ಇದಕ್ಕೆ ರೊಚ್ಚಿಗೆದ್ದ ಹುಡುಗಿ ವಾಟರ್ ಟ್ಯಾಂಕ್ ಏರಿ ಅಲ್ಲಿಂದ ಹಾರುತ್ತೇನೆ ಎಂದು ತನ್ನ ಕುಟುಂಬದವರನ್ನು ಹೆದರಿಸಿದ್ದಾಳೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಆಕೆಯೊಂದಿಗೆ ಮಾತನಾಡಿದ್ದಾರೆ. ಮತ್ತೊಂದು ಕಡೆ ಸ್ಥಳೀಯರ ಗುಂಪೊಂದು ಸದ್ದಿಲ್ಲದೇ ವಾಟರ್ ಟ್ಯಾಂಕ್ ಏರಿ ಆಕೆಯನ್ನು ಸುರಕ್ಷಿತವಾಗಿ ಕೆಳಗಡೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸಿದ ನಿಗೂಢ ಕಾಯಿಲೆ; ವಿಚಿತ್ರ ರೋಗಕ್ಕೆ 17 ಮಂದಿ ದುರಂತ ಅಂತ್ಯ!

Advertisment

ಇನ್ನು ಹುಡುಗಿ ಸುರಕ್ಷಿತವಾಗಿ ಕೆಳಗೆ ಬಂದ ಬಳಿಕ ಪೊಲೀಸರು ಆಕೆ ಹಾಗೂ ಆಕೆಯ ಕುಟುಂಬದೊಂದಿಗೆ ಆಪ್ತಸಮಾಲೋಚನೆ ನಡೆಸಿದ್ದಾರೆ. ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ. ಅದು ಅಲ್ಲದೇ ನಿಮ್ಮ ನಿರ್ಧಾರವನ್ನು ಬದಲಾಯಿಸಿ ಹುಡುಗಿಯ ಇಷ್ಟದಂತೆ ಮದುವೆ ಮಾಡಲು ಪ್ರಯತ್ನಿಸಿ ಎಂದು ಹುಡುಗಿಯ ಕುಟುಂಬದವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment