newsfirstkannada.com

ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸುವ ತಯಾರಿಯಲ್ಲಿ ಪ್ರಾಣಬಿಟ್ಟ ಸರ್ಕಾರಿ ವೈದ್ಯ; ಹೇಗೆ..?

Share :

Published September 16, 2023 at 11:50am

    ಹಾಸನ ಜಿಲ್ಲೆ ಖೋನಾಪುರದಲ್ಲಿ ದುರ್ಘಟನೆ ನಡೆದಿದೆ

    ಗೊರೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

    ಹೊಳೆನರಸೀಪುರ ತಾಲೂಕಿನ ವೈದ್ಯರಾಗಿದ್ದ ಚಂದ್ರಶೇಖರ್

ಹಾಸನ: ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಸ್ನಾನ ಮಾಡಲು ನದಿಗೆ ಇಳಿದಿದ್ದ ಸರ್ಕಾರಿ ವೈದ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೊರೂರಿನ ಹೇಮಾವತಿ ನದಿಯ ಹಿನ್ನೀರಿನ ಖೋನಾಪುರದಲ್ಲಿ ನಡೆದಿದೆ. ಚಂದ್ರಶೇಖರ್ (31) ಮೃತ ವೈದ್ಯ.

ಚಂದ್ರಶೇಖರ್, ಹೊಳೆನರಸೀಪುರ ತಾಲೂಕಿನ ಕೆರಗೋಡು ಪಿಎಚ್‌ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ಖೋನಾಪುರ ಐಲ್ಯಾಂಡ್‌ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು.
ಪೂಜೆಗೂ ಮುನ್ನ ಹೇಮಾವತಿ ನದಿಯಲ್ಲಿ ಚಂದ್ರಶೇಖರ್ ಸ್ನಾನಕ್ಕೆ ಇಳಿದಿದ್ದ. ಚಂದ್ರಶೇಖರ್ ಹಲವು ವರ್ಷಗಳಿಂದ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಹೇಮಾವತಿ ನದಿ ನೀರಿನ ಆಳ ಅರಿಯದೇ ಸ್ನಾನಕ್ಕೆ ಇಳಿದು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿ ಮೊಬೈಲ್ ಇಟ್ಟು, ನದಿಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟು ಸ್ನಾನಕ್ಕೆ ಇಳಿದಿದ್ದರು. ರಾತ್ರಿಯವರೆಗೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಕರೆ ಮಾಡಿದ್ದರು. ಮಗ ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪೋಷಕರು ರಕಲಗೂಡು ಠಾಣೆಗೆ ದೂರು ನೀಡಿದ್ದರು. ಕೊನೆಗೆ ಪೊಲೀಸರು ಶೋಧಕಾರ್ಯಕ್ಕೆ ಇಳಿದಾಗ ಕಾರು ಪತ್ತೆಯಾದ ಆಧಾರದ ಮೇಲೆ ವೈದ್ಯ ಚಂದ್ರಶೇಖರ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸುವ ತಯಾರಿಯಲ್ಲಿ ಪ್ರಾಣಬಿಟ್ಟ ಸರ್ಕಾರಿ ವೈದ್ಯ; ಹೇಗೆ..?

https://newsfirstlive.com/wp-content/uploads/2023/09/HSN_DOCTOR.jpg

Load More