ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್​ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ

author-image
AS Harshith
Updated On
ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್​ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ
Advertisment
  • ಯುವ ಜೋಡಿಗಳ ಪ್ರೀತಿಗೆ ಪೋಷಕರಿಂದ ವಿರೋಧ
  • ಜುಲೈ 1 ರಂದು ನಾಪತ್ತೆಯಾದವರು ಕೆರೆಯಲ್ಲಿ ಪತ್ತೆ
  • ಕೆರೆಗೆ ಹಾರಿ ಸುಸೈಡ್ ಮಾಡಿಕೊಂಡ ದುರ್ದೈವಿಗಳು

ಬೆಂಗಳೂರು: ಯುವ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೈಸ್ ರಸ್ತೆ ಸಮೀಪದ ಕೆರೆಯಲ್ಲಿ ಇಬ್ಬರ ಮೃತದೇಹ ಸಿಕ್ಕಿದೆ.

ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಕೆರೆಗೆ ಹಾರಿ ಸುಸೈಡ್ ಮಾಡಿಕೊಂಡ ದುರ್ದೈವಿಗಳೆಂದು ಗುರುತಿಸಲಾಗಿದೆ. ಇಬ್ಬರು ಕಳೆದ ಕೆಲ ವರ್ಷದಿಂದ ಪರಸ್ಪರ ಪ್ರೀತಿಸ್ತಿದ್ದರು. ಆದರೆ ಇದೇ ಜುಲೈ 1 ರಂದು ನಾಪತ್ತೆಯಾಗಿದ್ದರು.

ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಬಾಯ್​ಫ್ರೆಂಡ್​​.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ

ವಿದ್ಯಾರ್ಥಿನಿ ಅಂಜನಾ ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ವಾಸವಿದ್ದಳು. ಶ್ರೀಕಾಂತ್​ ಕೋಣನಕುಂಟೆ ನಿವಾಸಿಯಾಗಿದ್ದನು. ಯುವ ಜೋಡಿಯ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜುಲೈ 1 ರಂದು ನಾಪತ್ತೆಯಾಗಿದ್ದರು.

ಇದನ್ನೂ ಓದಿ: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ಇಲ್ಲಿದೆ ನೋಡಿ ಮಾಹಿತಿ

ನಾಪತ್ತೆ ಹಿನ್ನಲೆ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೀಗ ಶ್ರೀಕಾಂತ್​ ಮತ್ತು ಅಂಜನಾ ಮೃತದೇಹ ನೈಸ್ ರಸ್ತೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment