/newsfirstlive-kannada/media/post_attachments/wp-content/uploads/2024/04/BNG-TRAIN.jpg)
ಬೆಂಗಳೂರು: ರೈಲಿಗೆ ಸಿಲುಕಿ ನರ್ಸಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೀಪಾಂಜಲಿನಗರದ ರೈಲ್ವೇ ಟ್ರಾಕ್ ಬಳಿ ನಡೆದಿದೆ. ಚೆನ್ನಬಸವರಾಜು ಮೃತ ಯುವಕ.
ಆರ್​ಪಿಸಿ ಲೇಔಟ್​ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಚೆನ್ನಬಸವರಾಜು, ಮಣಿಪಾಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಸಲಕ್ಕೆ ಹೋಗ್ತಿದ್ದ. ನಿನ್ನೆ ಸ್ನೇಹಿತ ಭೇಟಿ ಮಾಡಿ ಬರ್ತೇನೆಂದು ಹೋಗಿದ್ದು, ಇಂದು ಬೆಳಗ್ಗೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಚೆನ್ನಬಸವರಾಜು ವಿಜಯಪುರದ ಮೂಲದವ. ಘಟನಾ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us