/newsfirstlive-kannada/media/post_attachments/wp-content/uploads/2024/08/saleem.jpg)
ಬೆಂಗಳೂರು: ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್ ಬಂದ ಘಟನೆ ನಡೆದಿದೆ. ಸಲೀಮ್ ಮೃತಪಟ್ಟ ಯುವಕ.
ಹಿಲ್ ರಾಕ್ ಶಾಲೆ ಕಟ್ಟಡ ಕಾಮಗಾರಿ ವೇಳೆ ಸಲೀಮ್ (30) ಮೃತಪಟ್ಟಿದ್ದಾನೆ. ಈತನ ಸಾವಿಗೆ ಗುತ್ತಿಗೆ ಪಡೆದು ಕಟ್ಟಡ ಕಾಮಗಾರಿ ಮಾಡಿಸುತ್ತಿದ್ದ ಹೇಮಂತ್ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಹೇಮಂತ್ ಮೂರು ತಿಂಗಳ ಸಂಬಳ ಕೊಡದೆ ಸಲೀಮ್​ಗೆ ಸತಾಯಿಸಿದ್ದನು. ಸಂಬಳಕ್ಕಾಗಿ ಸಲೀಮ್​​ ಹಿಲ್ ರಾಕ್ ಕಟ್ಟಡ ಕಾಮಗಾರಿ ಬಳಿ ತೆರಳಿದ್ದನು. ಈ ವೇಳೆ ಹೇಮಂತ್​ ಒಂದು ದಿನ ಕೆಲಸ ಮಾಡು ಎಂದು ಸಲೀಮ್​ ಬಳಿ ಹೇಳಿದ್ದಾನೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/saleem-1.jpg)
ಕರೆಂಟ್​ ಶಾಕ್​ ಹೊಡೆದು ಸತ್ತನೇ?
ಹೇಮಂತ್ ಒತ್ತಡಕ್ಕೆ ಮಣಿದು ಸಲೀಮ್​ ಹಿಲ್ ರಾಕ್ ಶಾಲಾ ಕಟ್ಟಡ ಕಾಮಗಾರಿ ಮಾಡಿದ್ದಾನೆ. ಈ ವೇಳೆ ಕಟ್ಟದ ನಾಲ್ಕನೇ ಮಹಡಿಯಲ್ಲಿ ಕರೆಂಟ್ ಶಾಕ್ ನಿಂದ ಸಲೀಂ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಕಳೆದ ಏಪ್ರಿಲ್ 17 ರಂದು ನಡೆದಿರುವ ಘಟನೆ ಇದಾಗಿದ್ದು, ನಿಧಾನವಾಗಿ ಬೆಳಕಿಗೆ ಬಂದಿದೆ. ಇತ್ತ ಮಗನನ್ನು ಕಳೆದುಕೊಂಡಿರುವ ಕುಟುಂಬ ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸಂಬಳಕ್ಕಾಗಿ ಹೋದ ಮಗ ವಾಪಸ್ ಹೆಣವಾಗಿ ಬಂದ ಎಂದು ಅಳಲು ತೋಡಿಕೊಂಡಿದ್ದಾರೆ.
ಇದು ಸಾವಲ್ಲ, ಕೊಲೆ
ಸಲೀಂ ಸಾವಿನ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗುತ್ತಿಗೆದಾರ ಹೇಮಂತ್ ವಿರುದ್ಧ ಕೊಲೆ ಆರೋಪದ ಮಾಡಲಾಗಿದೆ. ಸಲೀಮ್​​ನನ್ನು ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಗೂ ಗುತ್ತಿಗೆದಾರ ಹಾಗೂ ಕಾಮಗಾರಿ ಮಾಡುತ್ತಿದ್ದ ಶಾಲೆಯಿಂದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/08/saleem-2.jpg)
ಮಗ ಸತ್ತು ಮೂರು ತಿಂಗಳಾದ್ರು ಸಿಕ್ಕಿಲ್ಲ ಪರಿಹಾರ
ಮೃತಪಟ್ಟು ಮೂರುವರೆ ತಿಂಗಳಾದ್ರೂ ಮೃತ ಸಲೀಂ ಕುಟುಂಬಕ್ಕೆ ಇದುವರೆಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಅತ್ತ ಗುತ್ತಿಗೆದಾರ ಹೇಮಂತ್​ಗೆ ಸ್ಟೇಷನ್ ಬೇಲ್ ಸಿಕ್ಕಿದೆ. ಅದರೆ ಮೃತ ಕಾರ್ಮಿಕ ಸಲೀಮ್​ ಕುಟುಂಬಕ್ಕೆ ಇದುವರೆಗೂ ನಯಾಪೈಸೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ.
ಅತ್ತ ಸಲೀಮ್​ ಕುಟುಂಬಕ್ಕೆ ಕರ್ನಾಟಕ ಕಾರ್ಮಿಕ ಪರಿಷತ್ ಸಾತ್ ಕೊಟ್ಟಿದೆ. ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಲಿದೆ. ಸಲೀಂ ಮತ್ತು ಅವನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಲಿದ್ದಾರೆ. ಪ್ರತಿಭಟನೆ ಬಳಿಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಲಿದ್ದಾರೆ. ಕೂಡಲೇ ಸೂಕ್ತ ತನಿಖೆ ಮಾಡುವಂತೆ ಆಯುಕ್ತರಿಗೆ ದೂರಿನ ಮೂಲಕ ಮನವಿ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us