/newsfirstlive-kannada/media/post_attachments/wp-content/uploads/2024/06/darshan.jpg)
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗಿದ್ದಾರೆ. ಯುವಕನೋರ್ವನನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಈ ಕಾರಣಕ್ಕೆ ಸ್ಯಾಂಡಲ್​ವುಡ್​ ನಟನನ್ನು ಬಂಧಿಸಲಾಗಿದೆ.
ದರ್ಶನ್​ ಪರಿಚಯಸ್ಥ ಮಹಿಳೆಗೆ ಮೆಸೇಜ್​ ಮಾಡಿದ ಆರೋಪಕ್ಕೆ ಯುವಕನ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ. ಮೆಸೇಜ್​ ಮಾಡಿ ಕರೆಸಿಕೊಂಡು ಆತನ ಮರ್ಮಾಂಗಗಕ್ಕೆ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡ ಯುವಕ ನರಳಾಡಿದ್ದಾನೆ. ನರಳಾಡಿದರು ಆತನನ್ನು ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊನೆಗೆ ಯುವಕ ಪ್ರಾಣ ಬಿಟ್ಟಿದ್ದಾನೆ. ಈ ಕಾರಣಕ್ಕೆ ದರ್ಶನನ್ನು ಅರೆಸ್ಟ್​ ಮಾಡಲಾಗಿದೆ.
ಇದನ್ನೂ ಓದಿ: Breaking: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್
ಡಿಸಿಪಿ ಗಿರೀಶ್ ನೇತೃತ್ವದ ತಂಡದಿಂದ ದರ್ಶನ್ ಬಂಧನವಾಗಿದೆ. ಆರ್​.ಆರ್. ನಗರದ ಮನೆಯಿಂದ ನಟನನ್ನು ಬಂಧಿಸಿರುವ ಮಾಹಿತಿ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಚಾಲೆಂಜಿಂಗ್ ಸ್ಟಾರ್ ಅವರನ್ನು ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us