newsfirstkannada.com

ಮದುವೆಗೂ ಮುನ್ನ ಸ್ಮೈಲ್ ಹೆಚ್ಚಿಸೋ ಹುಚ್ಚಿಗೆ ಯುವಕ ದಾರುಣ ಸಾವು; ಆಗಿದ್ದೇನು?

Share :

Published February 20, 2024 at 12:36pm

  ಮದುವೆಗೂ ಮುನ್ನ ಸ್ಮೈಲ್ ಡಿಸೈನಿಂಗ್ ಸರ್ಜರಿಗೆ ಒಳಗಾಗಿದ್ದ

  ಇಂಟರ್ ನ್ಯಾಷನಲ್ ಡೆಂಟಲ್ ಕ್ಲಿನಿಕ್‌ಗೆ ದಾಖಲಾಗಿದ್ದಾಗ ಸಾವು

  ಸ್ಮೈಲ್ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದ ಪ್ರಾಣ ಬಿಟ್ಟ ಮದುಮಗ

ಹೈದರಾಬಾದ್: ಮದುವೆ ವೇಳೆ ಮುಖದಲ್ಲಿ ನಗು ಹೆಚ್ಚಳ ಮಾಡಿಕೊಳ್ಳಲು ಹೋಗಿ ಮದುಮಗ ಜೀವ ಕಳೆದುಕೊಂಡಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸ್ಮೈಲ್ ಡಿಸೈನಿಂಗ್ ಸರ್ಜರಿಗೆ ಒಳಗಾದ ಲಕ್ಷ್ಮಿನಾರಾಯಣ್ ವಿಂಜಮ್ ಮೃತ ದುರ್ದೈವಿ.

ಹೈದರಾಬಾದ್‌ ನಗರದ ಜ್ಯುಬಿಲಿ ಹಿಲ್ಸ್‌ನ FMS ಇಂಟರ್ ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ 28 ವರ್ಷದ ಲಕ್ಷ್ಮಿನಾರಾಯಣ್ ಸ್ಮೈಲ್ ಡಿಸೈನಿಂಗ್‌ ಸರ್ಜರಿಗೆ ದಾಖಲಾಗಿದ್ದಾರೆ. ಸರ್ಜರಿ ವೇಳೆ ಲಕ್ಷ್ಮಿ ನಾರಾಯಣ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಡೆಂಟಲ್ ಕ್ಲಿನಿಕ್‌ನವರು ಲಕ್ಷ್ಮಿನಾರಾಯಣ್ ತಂದೆ ರಾಮುಲುಗೆ ಮಾಹಿತಿ ನೀಡಿದ್ದಾರೆ.

ಪ್ರಜ್ಞೆ ಕಳೆದುಕೊಂಡ ಮೇಲೆ ಲಕ್ಷ್ಮೀ ನಾರಾಯಣ್ ಅವರನ್ನ ಸಮೀಪದ ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಲಕ್ಷ್ಮಿನಾರಾಯಣ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅನಸ್ತೇಸಿಯಾ ಓವರ್ ಡೋಸ್‌ನಿಂದಲೇ ಲಕ್ಷ್ಮಿನಾರಾಯಣ್ ಪ್ರಾಣ ಬಿಟ್ಟಿದ್ದಾನೆ ಎಂದ ಮೃತನ ತಂದೆ ಆರೋಪ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಒಳ್ಳೆ ಕೆಲ್ಸ ಮಾಡಿದ್ರೆ ಅಧಿಕಾರಿಗಳನ್ನ ಜನ ಹೀಗೂ ಆರಾಧಿಸ್ತಾರೆ ವಿಡಿಯೋ ನೋಡಿ..!

ಮದುವೆಗೂ ಮುನ್ನ ಲಕ್ಷ್ಮಿ ನಾರಾಯಣ್ ಅವರು ಸ್ಮೈಲ್ ಡಿಸೈನಿಂಗ್ ಸರ್ಜರಿಗೆ ಪ್ಲಾನ್ ಮಾಡಿದ್ದಾರೆ. ತನ್ನ ಸ್ಮೈಲ್ ಡಿಸೈನಿಂಗ್ ಸರ್ಜರಿ ಬಗ್ಗೆ ತಂದೆಗೆ ಮಾಹಿತಿ ನೀಡಿರಲಿಲ್ಲ. ಸ್ಮೈಲ್ ಹೆಚ್ಚಿಸಿಕೊಳ್ಳುವು ಹುಚ್ಚಿನಿಂದ ಈಗ ಸಾವನ್ನಪ್ಪಿದ್ದಾರೆ. ಡೆಂಟಲ್ ಕ್ಲಿನಿಕ್ ವಿರುದ್ಧ ಜ್ಯುಬಿಲಿ ಹಿಲ್ಸ್ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಗೂ ಮುನ್ನ ಸ್ಮೈಲ್ ಹೆಚ್ಚಿಸೋ ಹುಚ್ಚಿಗೆ ಯುವಕ ದಾರುಣ ಸಾವು; ಆಗಿದ್ದೇನು?

https://newsfirstlive.com/wp-content/uploads/2024/02/Smilling-Surgery.jpg

Load More