ಸಿಕ್ಸರ್ ಬಾರಿಸಿದ ಬೆನ್ನಲ್ಲೇ ವಿಧಿ ಘೋರ ಆಟ.. ಮೈದಾನದಲ್ಲಿ ಹೃದಯ ವಿದ್ರಾವಕ ಘಟನೆ -VIDEO

author-image
Ganesh
Updated On
ಸಿಕ್ಸರ್ ಬಾರಿಸಿದ ಬೆನ್ನಲ್ಲೇ ವಿಧಿ ಘೋರ ಆಟ.. ಮೈದಾನದಲ್ಲಿ ಹೃದಯ ವಿದ್ರಾವಕ ಘಟನೆ -VIDEO
Advertisment
  • ಮೈದಾನದಲ್ಲೇ ಯುವಕನ ಬಲಿ ಪಡೆದ ಹೃದಯಾಘಾತ
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
  • ಕೈ, ಕಾಲು ಉಜ್ಜಿ ಕೂಗಿ ಕರೆದರೂ ಮತ್ತೆ ಮೇಲೆ ಏಳಲಿಲ್ಲ

ಹೃದಯಾಘಾತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ವಯಸ್ಸಿನ ಭೇದವಿಲ್ಲದೆ ಅನೇಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಅಂತೆಯೇ ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಯುವಕನೊಬ್ಬ ಕೆಳಗೆ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹರ್ಜಿತ್ ಸಿಂಗ್ ಎಂಬ ಯುವಕ ಕ್ರಿಕೆಟ್ ಆಡುತ್ತಿದ್ದ. ಬೌಲರ್ ಎಸೆದ ಚೆಂಡನ್ನು ಸಿಕ್ಸರ್‌ ಬಾರಿಸಿದ. ಸಿಕ್ಸರ್ ಹೊಡೆದ ತಕ್ಷಣ ಪಿಚ್‌ನಿಂದ ಸ್ವಲ್ಪ ಮುಂದೆ ಬಂದು ಬ್ಯಾಟ್ ಕೆಳಗಿಟ್ಟು ಅಲ್ಲಿಯೇ ಕುಳಿತ. ನಂತರ ಅಲ್ಲೇ ಬಿದ್ದಿದ್ದಾನೆ. ಇದನ್ನು ಗಮನಿಸಿದ ನಾನ್-ಸ್ಟ್ರೈಕರ್ ಆತನ ಬಳಿಗೆ ಬಂದು ಏನಾಯಿತು ಅಂತಾ ಕೇಳಿದ್ದಾನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ:RCB ಸ್ಟಾರ್​ ವಿರುದ್ಧ ಮಹಿಳೆ ಆರೋಪ.. ಠಾಣೆಯಲ್ಲಿ ಇವತ್ತು ಭಾರೀ ಬೆಳವಣಿಗೆ, ದಯಾಳ್​ಗೆ ಸಂಕಷ್ಟ..!

ಮೈದಾನದಲ್ಲಿದ್ದವರೆಲ್ಲ ಓಡಿ ಬಂದಿದ್ದಾರೆ. ಆತನ ಮೇಲೆ ಎತ್ತಲು ಪ್ರಯತ್ನಿಸಿದರು. ಹರ್ಜಿತ್​​ನ ಕೈ, ಕಾಲು ಎಲ್ಲವನ್ನೂ ಉಜ್ಜಿ ಅವರು ಎಬ್ಬಿಸಲು ಪ್ರಯತ್ನಿಸಿದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ತಪಾಸಣೆ ವೇಳೆ ಹೃದಯಾಘಾತದಿಂದ ಪ್ರಾಣಬಿಟ್ಟಿರೋದು ಗೊತ್ತಾಗಿದೆ.

ಇದನ್ನೂ ಓದಿ: ಪೊಲೀಸರ ಮುಂದೆ ಮಹತ್ವದ ಹೇಳಿಕೆ ಕೊಟ್ಟ ಸಂತ್ರಸ್ತೆ.. ಯಶ್ ದಯಾಳ್ ವಿರುದ್ಧ ಮಾಡಿದ ಆರೋಪ ಏನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment