/newsfirstlive-kannada/media/post_attachments/wp-content/uploads/2024/07/Jayappa.jpg)
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ದನಗಳ ಮೈ ತೊಳೆಯಲು ಹೋಗಿದ್ದ ಯುವಕ ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಇಂಗಳಗೂಂದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜಯ್ಯಪ್ಪ (33) ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಯುವಕ. ಈತನ ಶವ ಧೂಳೆಹೊಳೆ ಗ್ರಾಮದ ಬಳಿ ಪತ್ತೆಯಾಗಿದೆ.
ಇದನ್ನೂ ಓದಿ: ಕರುನಾಡಲ್ಲಿ ಹಲವೆಡೆ ಜಲಧಾರೆ, ಇಂದು ಶಾಲೆ- ಕಾಲೇಜುಗಳಿಗೆ ರಜೆ
ಕಳೆದ ಮೂರು ದಿನಗಳ ಹಿಂದೆ ದನಗಳ ಮೈ ತೊಳೆಯಲು ತುಂಗಭದ್ರಾ ನದಿಗೆ ಜಯ್ಯಪ್ಪ ಹೋಗಿದ್ದನು. ಈ ವೇಳೆ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದನು.
ನಿನ್ನೆ ಮೃತ ಯುವಕನ ಶವ ಪತ್ತೆಯಾಗಿದೆ. ಮೇಲೆಬೆನ್ನೂರು ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us