newsfirstkannada.com

‘ಉಡುಗೊರೆ ಬೇಡ, ಮೋದಿಗೆ ಮತ ನೀಡಿ’; ವೆಡ್ಡಿಂಗ್​ ಕಾರ್ಡ್​ನಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಮಾಡಿದ ಕಾಫಿನಾಡು ಯುವಕ!

Share :

Published January 30, 2024 at 10:46am

Update January 30, 2024 at 10:47am

  ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಚುನಾವಣೆ ಪ್ರಚಾರ

  ಮಕ್ಕಳ ಭವಿಷ್ಯ ಮೋದಿಯಿಂದ ಮಾತ್ರ ಸುಭದ್ರ ಎಂದು ಪ್ರಚಾರ

  ತಂಗಿಯ ವಿವಾಹದ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್​

ಚಿಕ್ಕಮಗಳೂರು: ಸಾಮಾನ್ಯವಾಗಿ ಮದುವೆ ಆಮಂತ್ರಣದಲ್ಲಿ ಆಶೀರ್ವಾದವೇ ಉಡುಗೊರೆ ಅಥವಾ ಆಗಮನವೇ ಉಡುಗೊರೆ ಎಂದು ಬರೆಸುತ್ತಾರೆ. ಆದರೆ ಇಲ್ಲೊಂದು ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪ್ರಚಾರ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕಾಫಿನಾಡಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ ಎಂಬವರು ತನ್ನ ತಂಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಪ್ರಚಾರ ಮಾಡಿದ್ದಾರೆ. ವಧುವರರಿಗೆ ಉಡುಗೊರೆ ಬೇಡ ಮೋದಿಗೆ ಮತ ನೀಡಿ ಎಂದು ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ, ಮಕ್ಕಳ ಭವಿಷ್ಯ ಮೋದಿಯಿಂದ ಮಾತ್ರ ಸುಭದ್ರ ಎಂದು ಪ್ರಚಾರ ಮಾಡಿದ್ದಾರೆ.

ಶಶಿ ಆಲ್ದೂರಿನವರಾಗಿದ್ದು, ಇವರ ತಂಗಿಯ ವಿವಾಹ ಫೆಬ್ರವರಿ 5ರಂದು ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಹೀಗಾಗಿ ತಂಗಿಯ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಮತ ನೀಡುವಂತೆ ಪ್ರಚಾರ ಮಾಡಿದ್ದಾರೆ. ಸದ್ಯ ಈ ಸಂಗತಿ ಈಗ ಬೆಳಕಿಗೆ ಬಂದಿದ್ದು, ಆಮಂತ್ರಣ ಕಾರ್ಡ್​ನ ಫೋಟೋ ಸಮೇತ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಉಡುಗೊರೆ ಬೇಡ, ಮೋದಿಗೆ ಮತ ನೀಡಿ’; ವೆಡ್ಡಿಂಗ್​ ಕಾರ್ಡ್​ನಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಮಾಡಿದ ಕಾಫಿನಾಡು ಯುವಕ!

https://newsfirstlive.com/wp-content/uploads/2024/01/chikamagaluru-3.jpg

Load More