/newsfirstlive-kannada/media/post_attachments/wp-content/uploads/2025/06/HSN_YOUTH.jpg)
ಹಾಸನ: ಹೃದಯಾಘಾತದಿಂದ ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಮೂವರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಯುವಕನೋರ್ವ ಹೃದಯಾಘಾತ ನಿಧನ ಹೊಂದಿದ್ದಾನೆ.
ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತದಿಂದ ನಿಧನ ಹೊಂದಿದವರು. ಹಸುಗಳಿಗೆ ಹುಲ್ಲು ತರಲೆಂದು ಯುವಕನು ಹೊಲಕ್ಕೆ ಹೋಗಿದ್ದನು. ಈ ವೇಳೆ ಹೊಲದಲ್ಲೇ ಯುವಕನಿಗೆ ಎದೆ ನೋವು ಕಾಣಿಸಿದೆ. ಇದರಿಂದ ಹೊಲದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.
ಗ್ರಾಮದ ನಿವಾಸಿಯಾದ ನಂಜುಡಪ್ಪ, ಪಾರ್ವತಮ್ಮ ದಂಪತಿಯ ಏಕೈಕ ಪುತ್ರನಾಗಿದ್ದ ನವೀನ್ ಕಣ್ಮುಚ್ಚಿದ್ದಾನೆ. ಮನೆಯಲ್ಲಿ ನೀರವ ಮೌನ ಆವರಿಸಿದ್ದು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ, ತಾಯಿ ಹಾಗೂ ಅಜ್ಜ, ಅಜ್ಜಿಯನ್ನು ನವೀನ್ ಕುಮಾರ್ ಅಗಲಿದ್ದಾರೆ.
ಇದನ್ನೂ ಓದಿ: KL ರಾಹುಲ್ ಮೇಲೆ ದೊಡ್ಡ ಜವಾಬ್ದಾರಿ.. ಇದರಲ್ಲಿ ಯಶಸ್ಸು ಕಾಣ್ತಾರಾ ಕನ್ನಡಿಗ?
[caption id="attachment_124842" align="alignnone" width="800"]
ಸಂಧ್ಯಾ ಹಾಗೂ ಯುವಕ ಅಭಿಷೇಕ್[/caption]
ಇತ್ತೀಚೆಗೆ ಇದೇ ಜಿಲ್ಲೆಯಲ್ಲೇ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಯುವಕ, ಯುವತಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us