/newsfirstlive-kannada/media/post_attachments/wp-content/uploads/2024/04/SALMAN_KHAN.jpg)
ರಾಯಚೂರು: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಹಾಡಿನ ಮೂಲಕ ಜೀವಬೆದರಿಕೆ ಹಾಕಿದ್ದ ಯುವಕನನ್ನ ಮುಂಬೈ ಪೊಲೀಸರು, ಮಾನ್ವಿ ಪಟ್ಟಣದಲ್ಲಿ ಅರೆಸ್ಟ್ ಮಾಡಿದ್ದಾರೆ.
ಮಾನ್ವಿ ಪಟ್ಟಣದ ಗ್ಯಾರೇಜ್ ಮೆಕಾನಿಕ್ ಸೋಹೆಲ್ ಪಾಶಾ (24) ಬಂಧನ. ಮುಂಬೈನ ವರ್ಲಿ ಅಪರಾಧ ವಿಭಾಗದ ಪೊಲೀಸರು ಹಾಡಿನ ಮೂಲಕ ಜೀವ ಬೆದರಿಕೆ ಹಾಕಿದ್ದ ಯುವಕನಿಗಾಗಿ ರಾಯಚೂರಿನ ಮಾನ್ವಿಗೆ ಆಗಮಿಸಿದ್ದರು. ಈ ಸಂಬಂಧ ಹುಡುಕಾಟ ನಡೆಸಿ ಯುವಕನನ್ನು ಪಟ್ಟಣದಲ್ಲಿ ಬಂಧಿಸಿ, ಕರೆದೊಯ್ದಿದ್ದಾರೆ.
ಇದನ್ನೂ ಓದಿ:ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಬಂಗಾರ ಖರೀದಿ ಮಾಡಲು ಇದು ಬೆಸ್ಟ್ ಟೈಮ್!
ಸೋಹೆಲ್ ಪಾಶಾ ಹವ್ಯಾಸಿ ಹಾಡುಗಾರನಾಗಿದ್ದು ತನ್ನ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಈ ಕೃತ್ಯ ಎಸಗಿದ್ದನು ಎನ್ನಲಾಗಿದೆ. ತನ್ನ ಹೊಸ ಹಾಡು ಮೈ ಸಿಕಂದರ್ ಹೂಂ ಜನಪ್ರಿಯಗೊಳಿಸಲು ಹೀಗೆ ಮಾಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ವೆಂಕಟ ನಾರಾಯಣ ಎಂಬ ಅಮಾಯಕ ವ್ಯಕ್ತಿಯ ಮೊಬೈಲ್ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಇದೀಗ ತನಗೆ ತಾನೇ ಸಮಸ್ಯೆಗೆ ಸಿಲುಕಿಕೊಂಡಿದ್ದಾನೆ.
ಇದನ್ನೂ ಓದಿ: ‘ಭೂತದ ವೇಷದಲ್ಲೂ ಬ್ಯೂಟಿಫುಲ್ ಆಗಿ ಕಾಣೋ ಏಕೈಕ ಚೆಲುವೆ’- ದೀಪಿಕಾ ದಾಸ್ ಹೊಸ ಅವತಾರ; ಏನಿದರ ವಿಶೇಷ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ