/newsfirstlive-kannada/media/post_attachments/wp-content/uploads/2025/02/kumbamelea.jpg)
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಐತಿಹಾಸಿಕ ಮಹಾಕುಂಭಮೇಳಕ್ಕೆ ನಾಳೆ ಅಧಿಕೃತವಾಗಿ ತೆರೆ ಬೀಳಲಿದೆ.. 144 ವರ್ಷಗಳಿಗೊಮ್ಮೆ ಬರುವ ಈ ಮಹಾಕುಂಭ ಮುಗಿಯಲು ಇನ್ನೂ 1 ದಿನ ಬಾಕಿ ಇದೆ. ಈಗಾಗಲೇ ಜಗತ್ತಿನ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಜೀವನ ಪಾವನ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ ಜಾಗರಣೆಗೆ ದೇವಾಲಯಕ್ಕೆ ಹೋಗ್ತಿದ್ದ 30 ಭಕ್ತರ ಮೇಲೆ ಆನೆ ಹಿಂಡು ದಾಳಿ
ಜನವರಿ 13ರಿಂದ ಆರಂಭವಾಗಿರೋ ಕುಂಭಮೇಳದಲ್ಲಿ ಸಿನಿ ಸೆಲೆಬ್ರಿಟಿಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು, ಸಾಧು-ಸಂತರು ಸಹ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಈವರೆಗೂ 64 ಕೋಟಿ ಭಕ್ತಾದಿಗಳು ಕುಂಭದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ.
ಆದ್ರೆ, ಇದರ ಮಧ್ಯೆ ಮಹಿಳೆಯೊಬ್ಬಳು ಮಹಾಕುಂಭಮೇಳದಲ್ಲಿ ಗಂಡನಿಗೆ ವಿಡಿಯೋ ಕಾಲ್ ಮಾಡಿ ಪೋನ್ನನ್ನೇ ನೀರಿನಲ್ಲಿ ಮುಳುಗಿಸಿದ್ದಾಳೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಏನ್ ಕಾಲ ಬಂತು ಗುರು, ಗಂಡನ ಪಾಪ ತೊಳೆದಿದ್ದಾಳೆ, ನಾವು ಹಿಂಗೆ ಮಾಡಬೇಕಿತ್ತು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
When your husband's manager doesn't approve his leave pic.twitter.com/OiMibMaF2A
— Sagar (@sagarcasm)
When your husband's manager doesn't approve his leave pic.twitter.com/OiMibMaF2A
— Sagar (@sagarcasm) February 25, 2025
">February 25, 2025
ಸದ್ಯ ನಾಳೆ ಶಿವರಾತ್ರಿ ಪ್ರಯುಕ್ತ ಮಹಾ ಕುಂಭಮೇಳಕ್ಕೆ ಕೋಟಿ ಕೋಟಿ ಜನ ಭೇಟಿ ನಿರೀಕ್ಷೆ ಇದೆ. ಈಗಾಗಲೇ ಪ್ರಯಾಗರಾಜ್ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇಂದು ಸಂಜೆ 4 ಗಂಟೆಯಿಂದಲೇ ಯುಪಿ ಸರ್ಕಾರ ಸಂಚಾರ ನಿಷೇಧಿಸಿದೆ. ಹೀಗಾಗಿ ಮಹಾ ಕುಂಭಮೇಳದ ಮಹಾಶಿವರಾತ್ರಿಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸುವ ಲಕ್ನೋ, ಪ್ರತಾಪ್‌ಗಢದಿಂದ ಬರುವ ಯಾತ್ರಿಗಳಿಗೆ ಫಾಫಮೌ ಘಾಟ್ ವ್ಯವಸ್ಥೆ ಮಾಡಲಾಗಿದೆ.
ರೇವಾನ್, ಬಂದಾ, ಚಿತ್ರಕೂಟ, ಮಿರ್ಜಾಪುರ ಜನರಿಗೆ ಅರೈಲ್ ಘಾಟ್, ಕೌಶಂಬಿಯ ಭಕ್ತರಿಗಾಗಿ ಸಂಗಮ್ ಘಾಟ್ ಗೊತ್ತು ಪಡಿಸಲಾಗಿದೆ. ಪಾಸ್ ಹೊಂದಿದ ವಾಹನಗಳಿಗೆ ಮಾತ್ರ ಪಾರ್ಕಿಂಗ್ಗೆ ಅವಕಾಶ ಮಾಡಲಾಗಿದೆ. ಹೆದ್ದಾರಿ, ಮಾರ್ಗಗಳಲ್ಲಿ 40 ಪೊಲೀಸರ ತಂಡಗಳು, ಕಾನೂನು ಸುವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಲ್ಲಾ ಶಿವ ದೇವಾಲಯಗಳಿಗೆ ಭಕ್ತರಿಗೆ ಭೇಟಿ ನೀಡಲು ಅವಕಾಶ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ