/newsfirstlive-kannada/media/post_attachments/wp-content/uploads/2024/06/Selfie.jpg)
ಸೆಲ್ಫಿಯೊಂದು ಮಹಿಳೆಯ ಸಾವಿಗೆ ಕಾರಣವಾದ ದೃಶ್ಯ ಸಮೇತ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡುತ್ತಿದೆ. ಭಯಾನಕ ದೃಶ್ಯ ಮಾತ್ರ ಸೆಲ್ಫಿ ಪ್ರಿಯರನ್ನು ಮತ್ತೆಂದೂ ಹೀಗೆ ಮಾಡದಂತೆ ಎಚ್ಚರಿಸಿದೆ.
ಮೆಕ್ಸಿಕೋದ ಹಿಡಾಲ್ಗೋದಲ್ಲಿ ಈ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಕಂಡು ಸೆಲ್ಫಿ ತೆಗೆಯಲು ಹೋದ ಮಹಿಳೆಗೆ ಟ್ರೈನ್​ ಗುದ್ದಿ ಸಾವನ್ನಪ್ಪಿದ್ದಾಳೆ. ಮಹಿಳೆ ಸಾವನ್ನಪ್ಪುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ರೈನ್​ ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುವ ಸ್ಟೀಮ್​​ ಇಂಜಿನ್​ ಆಗಿದ್ದು, ಇದನ್ನು ಕಾಣಲು ಅನೇಕರು ರೈಲ್ವೇ ಟ್ರಾಕ್​ ಬಳಿ ಕಾದಿದ್ದರು. ಇದು ಹಿಡಾಲ್ಗೋದಲ್ಲಿ ನೊಪಾಲ ಡಿ ವಿಲ್ಲಾಗ್ರಾನ್​ ಮೂಲಕ ಹಾದುಹೋಗುವ ಲೋಕೋಮೊಟಿವ್​ ಎಕ್ಸ್​ಪ್ರೆಸ್​ ಆಗಿದ್ದು. ಅನೇಕರು ಈ ರೈಲನ್ನು ನೋಡಲೆಂದೇ ಇಲ್ಲಿ ಕಾಯುತ್ತಿರುತ್ತಾರೆ.
MEXICO - In Hidalgo, a famous train that comes from Canada and travels all the way to Mexico City, attracting locals, struck a woman who was trying to take a selfie as the train approached. She passed at the scene. Article in comments. pic.twitter.com/32XdsCehEB
— The Many Faces of Death (@ManyFaces_Death) June 5, 2024
ಇದನ್ನೂ ಓದಿ: ಇಂದು ಬಿರುಗಾಳಿ ಸಮೇತ ಮಳೆಯ ಮುನ್ಸೂಚನೆ! 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.. ಬೇಗ ಮನೆ ಸೇರಿಕೊಳ್ಳಿ
ಅದರಂತೆಯೇ ಡುಲ್ಸೆ ಅಲೋಂಡ್ರಾ (28) ಎಂಬಾಕೆ ತನ್ನ ಮಗನೊಂದಿಗೆ ರೈಲು ಚಲಿಸುತ್ತಿರುವಾಗ ಸೆಲ್ಫಿ ತೆಗೆಯಲು ಮುಂದಾಗುತ್ತಾಳೆ. ಆದರೆ ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಟ್ರೈನ್​ಗೆ ಆಕೆಯ ತಲೆ ಗುದ್ದಿ ಅಲ್ಲೇ ಸಾವನ್ನಪ್ಪುತ್ತಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us