newsfirstkannada.com

VIDEO: ಸೆಲ್ಫಿ ತಂದ ಆಪತ್ತು.. ಕಣ್ಣೆದುರೇ ಟ್ರೈನ್ ಗುದ್ದಿ ಸಾವನ್ನಪ್ಪಿದ ಯುವತಿ!

Share :

Published June 7, 2024 at 8:23am

    ಚಲಿಸುವ ಟ್ರೈನ್​ ನೋಡಿ ಸೆಲ್ಫಿ ತೆಗೆಯಲು ಹೋದ ಯುವತಿ

    ಸೆಲ್ಫಿ ಹುಚ್ಚಿಗೆ ಸಾವನ್ನಪ್ಪಿದ ಯುವತಿ.. ಕಣ್ಣೆದುರೇ ಸಾವು

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದೃಶ್ಯ

ಸೆಲ್ಫಿಯೊಂದು ಮಹಿಳೆಯ ಸಾವಿಗೆ ಕಾರಣವಾದ ದೃಶ್ಯ ಸಮೇತ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡುತ್ತಿದೆ. ಭಯಾನಕ ದೃಶ್ಯ ಮಾತ್ರ ಸೆಲ್ಫಿ ಪ್ರಿಯರನ್ನು ಮತ್ತೆಂದೂ ಹೀಗೆ ಮಾಡದಂತೆ ಎಚ್ಚರಿಸಿದೆ.

ಮೆಕ್ಸಿಕೋದ ಹಿಡಾಲ್ಗೋದಲ್ಲಿ ಈ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಕಂಡು ಸೆಲ್ಫಿ ತೆಗೆಯಲು ಹೋದ ಮಹಿಳೆಗೆ ಟ್ರೈನ್​ ಗುದ್ದಿ ಸಾವನ್ನಪ್ಪಿದ್ದಾಳೆ. ಮಹಿಳೆ ಸಾವನ್ನಪ್ಪುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಬಲಿಷ್ಠ ಪಾಕ್​​ಗೆ ಚಳ್ಳೆ ಹಣ್ಣು ತಿನ್ನಿಸಿದ ಅಮೆರಿಕ.. ಭಾರತದ ವಿರುದ್ಧ ಪಂದ್ಯಕ್ಕೂ ದೊಡ್ಡ ಆಘಾತ..!

ಟ್ರೈನ್​ ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುವ ಸ್ಟೀಮ್​​ ಇಂಜಿನ್​ ಆಗಿದ್ದು, ಇದನ್ನು ಕಾಣಲು ಅನೇಕರು ರೈಲ್ವೇ ಟ್ರಾಕ್​ ಬಳಿ ಕಾದಿದ್ದರು. ಇದು ಹಿಡಾಲ್ಗೋದಲ್ಲಿ ನೊಪಾಲ ಡಿ ವಿಲ್ಲಾಗ್ರಾನ್​ ಮೂಲಕ ಹಾದುಹೋಗುವ ಲೋಕೋಮೊಟಿವ್​ ಎಕ್ಸ್​ಪ್ರೆಸ್​ ಆಗಿದ್ದು. ಅನೇಕರು ಈ ರೈಲನ್ನು ನೋಡಲೆಂದೇ ಇಲ್ಲಿ ಕಾಯುತ್ತಿರುತ್ತಾರೆ.

ಇದನ್ನೂ ಓದಿ: ಇಂದು ಬಿರುಗಾಳಿ ಸಮೇತ ಮಳೆಯ ಮುನ್ಸೂಚನೆ! 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌.. ಬೇಗ ಮನೆ ಸೇರಿಕೊಳ್ಳಿ

ಅದರಂತೆಯೇ ಡುಲ್ಸೆ ಅಲೋಂಡ್ರಾ (28) ಎಂಬಾಕೆ ತನ್ನ ಮಗನೊಂದಿಗೆ ರೈಲು ಚಲಿಸುತ್ತಿರುವಾಗ ಸೆಲ್ಫಿ ತೆಗೆಯಲು ಮುಂದಾಗುತ್ತಾಳೆ. ಆದರೆ ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಟ್ರೈನ್​ಗೆ ಆಕೆಯ ತಲೆ ಗುದ್ದಿ ಅಲ್ಲೇ ಸಾವನ್ನಪ್ಪುತ್ತಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸೆಲ್ಫಿ ತಂದ ಆಪತ್ತು.. ಕಣ್ಣೆದುರೇ ಟ್ರೈನ್ ಗುದ್ದಿ ಸಾವನ್ನಪ್ಪಿದ ಯುವತಿ!

https://newsfirstlive.com/wp-content/uploads/2024/06/Selfie.jpg

Load More