ಸ್ಯಾಡ್ ರೀಲ್ಸ್​ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಪ್ರಾಣ ಬಿಟ್ಟ ಯುವತಿ

author-image
Bheemappa
Updated On
ಸ್ಯಾಡ್ ರೀಲ್ಸ್​ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಪ್ರಾಣ ಬಿಟ್ಟ ಯುವತಿ
Advertisment
  • ರೀಲ್ಸ್ ಮಾಡುತ್ತ..ಮಾಡುತ್ತ ಮೇಲಿನಿಂದ ಕೆಳಗೆ ಬಿದ್ದ ಯುವತಿ
  • ನಿರ್ಮಾಣ ಹಂತದ ಕಟ್ಟಡದಲ್ಲಿ ಪಾರ್ಟಿ ಮಾಡಲು ಹೋಗಿದ್ದರು
  • ಶಾಪಿಂಗ್ ಮಾರ್ಟ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್​​ಗೆ ಮೀಸಲಿದ್ದ ಸ್ಥಳದಲ್ಲಿ ರೀಲ್ಸ್​ ಮಾಡುವಾಗ 13ನೇ ಅಂತಸ್ತಿನಿಂದ ಯುವತಿ ಬಿದ್ದು ಜೀವ ಕಳೆದುಕೊಂಡಿದ್ದಾಳೆ. ಈ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್​ ಮಾಡಲು ಹೋಗಿದ್ದಳು. ಆದರೆ ರೀಲ್ಸ್​ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ.

ಇದನ್ನೂ ಓದಿ: ಮಾವು ಬೆಳೆಗಾರರಿಗೆ ಗುಡ್ ನ್ಯೂಸ್; HD ಕುಮಾರಸ್ವಾಮಿ ಪತ್ರದ ಬೆನ್ನಲ್ಲೇ ಬೆಂಬಲ ಬೆಲೆ ಘೋಷಣೆ

publive-image

ಐದಲ್ಲ, ಹತ್ತಲ್ಲ ಬರೋಬ್ಬರಿ 13ನೇ ಅಂತಸ್ತಿನ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್​ಗಾಗಿ ಬಿಡಲಾಗಿದ್ದ ಸ್ಥಳದಲ್ಲಿ ಮೇಲಿನಿಂದ ಕೆಳಗೆ ಬಿದ್ದು ಯುವತಿ ಜೀವ ಬಿಟ್ಟಿದ್ದಾಳೆ. ಇನ್ನು ಈ ನಂದಿನಿ ಶಾಪಿಂಗ್ ಮಾರ್ಟ್​ವೊಂದರಲ್ಲಿ ಕೆಲಸ ಮಾಡುತ್ತಿದ್ದು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಮೃತ ನಂದಿನಿಯ 12 ವರ್ಷದ ಪ್ರೀತಿ ಫೇಲ್ಯೂರ್ ಆಗಿತ್ತು. ಹೀಗಾಗಿ ಅದೇ ಫೀಲಿಂಗ್​ನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಹೋಗಿದ್ದಳು. ಈ ವೇಳೆ ಮದ್ಯಪಾನ ಕುಡಿದು ಸ್ಯಾಡ್​ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ನಂದಿನಿ ಜೀವ ಬಿಟ್ಟಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment