/newsfirstlive-kannada/media/post_attachments/wp-content/uploads/2025/07/MND_YOUNG_WOMAN.jpg)
ಮಂಡ್ಯ: ಕಾವೇರಿ ನದಿಗೆ ಯುವತಿಯೊಬ್ಬರು ಜಿಗಿದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ದಕ್ಷಿಣ ಕಾವೇರಿ ಸೇತುವೆ ಮೇಲೆ ನಡೆದಿದೆ.
ಹಾಸನ ಮೂಲದ ಸಿಂಚನ (23) ನದಿಗೆ ಜಿಗಿದಿರುವ ಯುವತಿ ಆಗಿದ್ದಾರೆ. ಯುವತಿ ನದಿಗೆ ಹಾರಿರುವುದಕ್ಕೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ದಕ್ಷಿಣ ಕಾವೇರಿ ಬ್ರಿಡ್ಜ್ ಮೇಲಿನಿಂದ ಯುವತಿ ನದಿಗೆ ಹಾರಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯುವತಿ ಜಂಪ್ ಮಾಡುವುದನ್ನ ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಮಾಹಿತಿ ಆಧಾರದ ಮೇಲೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ ಆಗಿದ್ದರೂ ಟಾರ್ಚ್​ಲೈಟ್ ಬೆಳಕಿನಲ್ಲೇ ಯುವತಿಗಾಗಿ ನದಿ ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನದಿಯಲ್ಲಿ ಭಾರೀ ಪ್ರಮಾಣ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಗೆ ಅಡ್ಡಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ