newsfirstkannada.com

ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವತಿ.. ಪ್ರಶ್ನಿಸಿದ ಆಟೋ ಡ್ರೈವರ್​ಗೆ ಥಳಿತ

Share :

Published March 27, 2024 at 8:11am

Update March 27, 2024 at 8:16am

  ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವತಿ

  ನಶೆಯಲ್ಲಿ ಆಟೋ ಡ್ರೈವರ್​ಗೆ ಮನಬಂದಂತೆ ಥಳಿಸಿದ ಯುವತಿ

  ಆಟೋ ಡ್ರೈಮರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ

ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳು ಆಟೋ ಡ್ರೈವರ್ ಮೇಲೆ  ಹಲ್ಲೆ ನಡೆಸಿದ ದೃಶ್ಯ ಸಮೇತ ಘಟನೆ ವೈರಲ್ ಆಗಿದೆ. ಆಟೋ ಡ್ರೈವರ್ ನಿಶಾಂತ್ ಎಂಬುವವನ ಮೇಲೆ ಯುವತಿ ಮನಬಂದಂತೆ ಹಲ್ಲೆ ಮಾಡಿದ್ದಾಳೆ.

ಯುವತಿ ಕಂಠ ಪೂರ್ತಿ ಕುಡಿದಿದ್ದು, ರಸ್ತೆ ಮಧ್ಯೆ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಆಟೋ ಡ್ರೈವರ್​ ನಿಶಾಂತ್​ಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಅಷ್ಟೇ ಅಲ್ಲದೆ ಕಾರ್ ನಿಲ್ಲಿಸಿ ಅಟೋ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ.

ಆಟೋ ಡ್ರೈವರ್​ ನಿಶಾಂತ್ ಕುಮಾರ್

ಇದನ್ನು ಓದಿ: ಬಿಜೆಪಿಗೆ ಮೈಸೂರಲ್ಲಿ ಮತ್ತೊಂದು ಶಾಕ್​; ಸಿಎಂ ಗಾಳಕ್ಕೆ ಬಿದ್ದ ಕೋಟೆ ಶಿವಣ್ಣ; ಇಂದು ಕಾಂಗ್ರೆಸ್​ಗೆ ಸೇರ್ಪಡೆ

ಯುವಕನ ಮೈ-ಕೈ ಪರಚಿ ಯುವತಿ ಗಾಯಗೊಳಿಸಿದ್ದಾಳೆ. ಸಾಲದ್ದಕ್ಕೆ ಯುವಕ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಳೆ. ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವತಿ.. ಪ್ರಶ್ನಿಸಿದ ಆಟೋ ಡ್ರೈವರ್​ಗೆ ಥಳಿತ

https://newsfirstlive.com/wp-content/uploads/2024/03/Benagaluru-Drunk-and-Fight.jpg

Load More