Advertisment

EV ಬೈಕ್​ ಶೋ ರೂಮ್​ನಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ಬೆಂಕಿಗೆ ಯುವತಿ ಆಹುತಿ

author-image
Veena Gangani
Updated On
EV ಬೈಕ್​ ಶೋ ರೂಮ್​ನಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ಬೆಂಕಿಗೆ ಯುವತಿ ಆಹುತಿ
Advertisment
  • ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾದ ಸಾಕಷ್ಟು ಬೈಕ್​ಗಳು
  • ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿಕೊಂಡ ಬೆಂಕಿ
  • ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡು

ಬೆಂಗಳೂರು: ಸ್ಕೂಟರ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಇಡೀ ಶೋ ರೂಮ್ ಸುಟ್ಟು ಭಸ್ಮವಾಗಿರೋ ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಪ್ರಿಯಾ ಎಂಬ ಯುವತಿ ಸಾವನ್ನಪ್ಪಿದ್ದಾಳೆ.

Advertisment

ಇದನ್ನೂ ಓದಿ: ಅಬ್ಬಾ.. ಸಿಕ್ಕಾಪಟ್ಟೆ ವೈರಲ್ ಆದ ನೀತಾ ಅಂಬಾನಿ ಪಾಪ್​ಕಾರ್ನ್​ ಬ್ಯಾಗ್​! ಇದರ ಬೆಲೆ ಎಷ್ಟು ಗೊತ್ತಾ?

publive-image

ರಾಜ್ ಕುಮಾರ್ ರಸ್ತೆಯಲ್ಲಿರೋ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್​ನಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಎಲ್ಲಾ ಬೈಕ್​ಗಳು ಸುಟ್ಟು ಭಸ್ಮವಾಗಿವೆ. ಈ ವಿಷಯ ಕೂಡಲೇ ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಇನ್ನೂ, ಈ ಘಟನೆಯಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಪ್ರಿಯಾ ಶೋರೂಂನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತಿದ್ದಳಂತೆ. ಶೋರೂಂನಲ್ಲಿ ೪೫ ಇವಿ ವಾಹನಗಳು ಇದ್ದವು. ಮೈ ಇವಿ ಸ್ಟೋರ್​ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇಂದು ಸಂಜೆ 5.30 ಸುಮಾರಿಗೆ ಈ ಘಟನೆ ನಡೆದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment