ಗಂಟಲು ನೋವಿಗೆ ಚಿಕಿತ್ಸೆ ಪಡೆಯಲು ಹೋದ ಯುವತಿಗೆ ಶಾಕ್! ವೈದ್ಯರು ಹೇಳಿದ್ದು ಕೇಳಿ ಬೆಚ್ಚಿಬಿದ್ದಳು !

author-image
Gopal Kulkarni
Updated On
ನೀವು ಗರ್ಭಿಣಿ ಎಂಬ ಸಂದೇಶ.. ಮದುವೆ ಆಗದ 35ಕ್ಕೂ ಹೆಚ್ಚು ಹುಡುಗಿಯರಿಗೆ ಬಿಗ್ ಶಾಕ್!
Advertisment
  • ಗಂಟಲು ನೋವಿನ ಚಿಕಿತ್ಸೆಗೆಂದು ಹೋದ ಯುವತಿಗೆ ಕಾದಿತ್ತು ದೊಡ್ಡ ಶಾಕ್​
  • ಎಕ್ಸ್​ರೇ ಜೊತೆಗೆ ಆ ಒಂದ ಟೆಸ್ಟ್​ನ್ನು ಕೂಡ ಮಾಡಲು ಹೇಳಿದ ವೈದ್ಯರು
  • ರಿಪೋರ್ಟ್​ ಬಂದ ಮೇಲೆ ವೈದ್ಯರು ಹಾಗೂ ಯುವತಿ ಇಬ್ಬರಿಗೂ ಶಾಕ್

ಅಮೆರಿಕಾದ 20 ವರ್ಷದ ಯುವತಿಯೊಬ್ಬಳು ಗಂಟಲು ನೋವು ಎಂದು ವೈದ್ಯರ ಬಳಿ ಹೋಗಿದ್ದಾಳೆ. ಆದ್ರೆ ಆಕೆ ಕನಸು ಮನಸಿನಲ್ಲಿಯೂ ಇಂತಹದೊಂದು ಸುದ್ದಿಯನ್ನು ನಾನು ಕೇಳುತ್ತೇನೆ ಅಂತ ಅಂದುಕೊಂಡಿರಲೇ ಇಲ್ಲ ಅನಿಸುತ್ತೆ. ಅಂತಹ ಸುದ್ದಿಯನ್ನು ವೈದ್ಯರು ಆಕೆಗೆ ಹೇಳಿದ್ದಾರೆ. ಗಂಟಲು ನೋವಿಗೆ ಚಿಕಿತ್ಸೆ ಪಡೆಯಲು ಹೋದ ಯುವತಿಗೆ ನೀನು ಗರ್ಭಿಣಿಯಾಗಿದ್ದೀಯ ಎಂದು ಹೇಳಿ ವೈದ್ಯರು ದೊಡ್ಡ ಶಾಕ್ ನೀಡಿದ್ದಾರೆ.

20 ವರ್ಷದ ಯುವತಿಯ ಹೆಸರು ಕಟೇನ್ಲಿ ಯೆಟ್ಸ್ ಎಂದು. ತೀವ್ರ ಗಂಟಲು ನೋವಿನಿಂದ ಬಳಲುತ್ತಿದ್ದ ಆಕೆ ವೈದ್ಯರ ಬಳಿ ಪರೀಕ್ಷೆಗೆ ಎಂದು ಹೋಗಿದ್ದಾಳೆ. ಆಗ ವೈದ್ಯರು ಒಂದು ಎಕ್ಸ್​-ರೇ ತೆಗೆಸುವಂತೆ ಯುವತಿಗೆ ಹೇಳಿದ್ದಾರೆ. ಅದರ ಜೊತೆಗೆ ಮುನ್ನೆಚ್ಚರಿಕೆಯಾಗಿ ಪ್ರಗ್ನೆನ್ಸಿ ಚೆಕಪ್​ನ್ನು ಕೂಡ ಮಾಡಲು ಹೇಳಿದ್ದಾರೆ. ಈ ವೇಳೆ ಆಕೆ ಗರ್ಭಿಣಿ ಆಗಿರುವುದ ಖಚಿತಗೊಂಡಿದೆ.

ಇದನ್ನೂ ಓದಿ:VIDEO; ಟ್ರಾನ್ಸ್‌ಫಾರ್ಮರ್​ ಮೇಲೆ ಬಳ್ಳಿಯಂತೆ ನೇತಾಡಿದ ಯುವತಿ; 800 ಮನೆಗಳಿಗೆ ವಿದ್ಯುತ್ ಕಟ್​! ಆಗಿದ್ದೇನು?

ಈ ರೀತಿ ಅನಿರೀಕ್ಷಿತ ಚಿಕಿತ್ಸೆಯಲ್ಲಿ ಆಕೆ ಗರ್ಭಿಣಿಯಾಗಿರುವುದು ಖಚಿವಾಗಿದೆ. ವಿಷಯ ಅಂದ್ರೆ ಇತ್ತೀಚೆಗೆ ಯೆಟ್ಸ್​ ಒಬ್ಬ ಬಾಯ್​ಫ್ರೆಂಡ್​ ಜೊತೆ ಡೇಟಿಂಗ್ ಚಾಟಿಂಗ್ ಅಂತ ಕಾಲ ಕಳೆಯುತ್ತಿದ್ದಳು ಎಂಬುದು ಕೂಡ ಗೊತ್ತಾಗಿದೆ. ಅದು ಕೂಡ ಕಳೆದ ಆರು ತಿಂಗಳಿನಿಂದ ಡೇಟಿಂಗ್​ನಲ್ಲಿ ಕಾಲ ಕಳೆಯುತ್ತಿದ್ದಳು ಇದೇ ವೇಳೆ ಪ್ರೇಮಾಂಕುರದ ಜೊತೆಗೆ ಆಕೆಯ ಗರ್ಭದಲ್ಲಿ ಬೀಜಾಂಕುರವು ಆಗಿದೆ.

ಈ ಬಗ್ಗೆ ಮಾತನಾಡಿರುವ ಯೆಟ್ಸ್,ನನಗೆ ಈಗಲೂ ಕೂಡ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದ್ರೆ ನನ್ನ ಬಾಯ್​ಫ್ರೆಂಡ್ ಜುಲೈನ್ ನನ್ನ ಬೆನ್ನಿಗೆ ನಿಂತ ಮೇಲೆ ನಾನು ಸ್ವಲ್ಪ ಶಾಂತಗೊಂಡೆ ಹಾಗೂ ಧೈರ್ಯವೂ ಕೂಡ ಬಂತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment