ಬಾಂಗ್ಲಾ ವಿರುದ್ಧ ಟಿ20; ಟೀಮ್​ ಇಂಡಿಯಾಗೆ ಬೆಂಕಿ ಬೌಲರ್​​ ಎಂಟ್ರಿ; ಭಾರತಕ್ಕೆ ಬಂತು ಆನೆಬಲ!

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20; ಟೀಮ್​ ಇಂಡಿಯಾಗೆ ಬೆಂಕಿ ಬೌಲರ್​​ ಎಂಟ್ರಿ; ಭಾರತಕ್ಕೆ ಬಂತು ಆನೆಬಲ!
Advertisment
  • ಟೀಮ್​ ಇಂಡಿಯಾ, ಬಾಂಗ್ಲಾ ನಡುವಿನ ಟೆಸ್ಟ್​ ಸರಣಿ ಮುಕ್ತಾಯ
  • ಅಕ್ಟೋಬರ್​​ 6ನೇ ತಾರೀಕಿನಿಂದ ಮಹತ್ವದ ಟಿ20 ಸರಣಿ ಶುರು!
  • ಇಂದು ನಡೆಯಲಿರೋ ಮಹತ್ವದ ಪಂದ್ಯಕ್ಕೆ ಬೆಂಕಿ ಬೌಲರ್​ ಎಂಟ್ರಿ

ಇತ್ತೀಚೆಗಷ್ಟೇ ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​ ಸರಣಿ ಮುಗಿದಿದೆ. ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾ 2-0 ಅಂತರದಿಂದ ಟೆಸ್ಟ್​ ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡಿದೆ.

ಇನ್ನು, ಟೆಸ್ಟ್​ ಸರಣಿ ಬೆನ್ನಲ್ಲೇ ಟಿ20 ಸರಣಿ ಶುರುವಾಗಿದೆ. ಇಂದು ಗ್ವಾಲಿಯರ್‌ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಎದುರಿಸಲಿದೆ. ಭಾರತ ಟಿ20 ತಂಡದ ಆಯ್ಕೆ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್ ಕೈಯಲ್ಲಿದೆ.

ಮಹತ್ವದ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​ನಲ್ಲಿ ಯುವ ವೇಗದ ಬೌಲರ್​​​ ಎಂಟ್ರಿ ಬಹುತೇಕ ಖಚಿತವಾಗಿದೆ. ಬಿಹಾರ ಮೂಲದ ವೇಗದ ಬೌಲರ್ ಮಯಾಂಕ್ ಯಾದವ್ ಮೊದಲ ಬಾರಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಮಯಾಂಕ್ ಯಾದವ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಯಾರು ಈ ಮಯಾಂಕ್​?

ಮಯಾಂಕ್​​ ಭಾರತದ ವೇಗದ ಬೌಲರ್. ಇವರು ಬೆಂಕಿ ಬೌಲಿಂಗ್​ ಮಾಡುತ್ತಾರೆ. ಇಷ್ಟೇ ಅಲ್ಲ ಮಯಾಂಕ್​ಗೆ ಭಾರತಕ್ಕೆ ಗೆಲುವು ತಂದು ಕೊಡಬಲ್ಲ ಸಾಮರ್ಥ್ಯ ಇದೆ. ತವರಿನಲ್ಲೇ ಟಿ20 ಸರಣಿ ನಡೆಯುತ್ತಿರೋ ಕಾರಣ ಇಲ್ಲಿನ ಪಿಚ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಬರೋಬ್ಬರಿ 156.7 kmph ವೇಗದಲ್ಲಿ ಚೆಂಡು ಎಸೆಯಬಲ್ಲರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment