newsfirstkannada.com

‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

Share :

Published July 25, 2024 at 9:39am

    ಕಿಂಗ್​ ಕೊಹ್ಲಿಗೆ ಪಾಕ್​ ಮಾಜಿ ಕ್ರಿಕೆಟಿಗನಿಂದ ಚಾಲೆಂಜ್

    U19 ದಿನಗಳಲ್ಲೇ ಪಾಕ್​ ನೆಲದಲ್ಲಿ ಕೊಹ್ಲಿ ಪರಾಕ್ರಮ

    ಚಾಂಪಿಯನ್ಸ್​ ಟ್ರೋಫಿ ಆಡಲು ಭಾರತ ಪಾಕ್​ಗೆ ಹೋಗುತ್ತಾ?

ಚಾಂಪಿಯನ್ಸ್​ ಟ್ರೋಫಿ ಆಡಲು ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋಗುತ್ತೋ? ಇಲ್ವೋ? ಅನ್ನೋದೆ ಇನ್ನೂ ಕನ್ಫರ್ಮ್​ ಆಗಿಲ್ಲ. ಅದಾಗಲೇ ಕಿಂಗ್​ ಕೊಹ್ಲಿಗೆ ಹೊಸ ಸವಾಲು ಎದುರಾಗಿದೆ. ವಿಶ್ವದೆಲ್ಲೆಡೆ ಆರ್ಭಟಿಸಿರೋ ವಿರಾಟನಿಗೆ ಪಾಕ್​ ಮಾಜಿ ಕ್ರಿಕೆಟಿಗ ಹೊಸ ಚಾಲೆಂಜ್​​ ಹಾಕಿದ್ದಾರೆ.

ಮುಂಬರುವ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ವಿಶ್ವದ ತಂಡಗಳ ಸಿದ್ಧತೆ ಆರಂಭವಾಗಿದೆ. ಈಗಾಗಲೇ ಪ್ರತಿಷ್ಟಿತ ಐಸಿಸಿ ಟ್ರೋಫಿ ಗೆಲ್ಲ್ಲಲು ತಂಡಗಳು ರೂಟ್​ಮ್ಯಾಪ್​ ಸಿದ್ಧಪಡಿಸ್ತಿವೆ. ಟೀಮ್​ ಇಂಡಿಯಾ ಕೂಡ ತಯಾರಿಯನ್ನು ಆರಂಭಿಸಿದೆ. ಗೌತಮ್​ ಗಂಭೀರ್ ಟೀಮ್​ ಇಂಡಿಯಾದ ಹೆಡ್​ಕೋಚ್​ ಹುದ್ದೆಗೇರಿದಾಗಿನಿಂದ ಪ್ರತಿ ಹೆಜ್ಜೆಯಲ್ಲೂ ಚಾಂಪಿಯನ್ಸ್​ ಟ್ರೋಫಿಯನ್ನೇ ಟಾರ್ಗೆಟ್​ ಮಾಡ್ತಿದ್ದಾರೆ.

ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!

ಕೊಹ್ಲಿಗೆ ಪಾಕ್​ ಮಾಜಿ ಕ್ರಿಕೆಟಿಗನ ಚಾಲೆಂಜ್​
ಚಾಂಪಿಯನ್ಸ್​ ಟ್ರೋಫಿಗೆ ಸಿದ್ಧತೆ ಆರಂಭವಾಗಿದೆ ನಿಜ. ಪಂದ್ಯಗಳು ಎಲ್ಲಿ ನಡೆಯುತ್ತೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಆಯೋಜನೆಯ ರೈಟ್ಸ್​​ ಹೊಂದಿರೋ ಪಾಕ್​ ಕ್ರಿಕೆಟ್​ ಬೋರ್ಡ್​​, ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಬಿಗಿಪಟ್ಟು ಹಿಡಿದಿದೆ. ಬಿಸಿಸಿಐ ಭದ್ರತಾ ದೃಷ್ಟಿಯಿಂದ ತಟಸ್ಥ ಸ್ಥಳದಲ್ಲಿ ನಮ್ಮ ಪಂದ್ಯಗಳನ್ನ ಆಯೋಜಿಸುವಂತೆ ಐಸಿಸಿಯನ್ನ ಕೋರಿದೆ. ಪಂದ್ಯಗಳು ಎಲ್ಲಿ ನಡೆಯುತ್ತೆ ಅನ್ನೋ ಗೊಂದಲವೇ ಇನ್ನೂ ಬಗೆಹರಿದಿಲ್ಲ. ಇದ್ರ ನಡುವೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಿಂಗ್​ ಕೊಹ್ಲಿಗೆ ಚಾಲೆಂಜ್​​ ಹಾಕಿದ್ದಾರೆ.

ಪಾಕಿಸ್ತಾನಕ್ಕೆ ಬರಲಿ..
ವಿರಾಟ್​​ ಕೊಹ್ಲಿ.. ವಿಶ್ವ ಕ್ರಿಕೆಟ್​ ಕಂಡ ಸರ್ವಶ್ರೇಷ್ಟ ಬ್ಯಾಟ್ಸ್​ಮನ್​​. ಭಾರತದ ನೆಲದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬೌಲರ್​​ಗಳನ್ನು ಬೆಂಡೆತ್ತಿ ರನ್​ ಶಿಖರ ಕಟ್ಟಿರುವ ರನ್​ಮಷೀನ್​. ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಸೌತ್​ ಆಫ್ರಿಕಾ, ಇಂಗ್ಲೆಂಡ್​. ಈ ಸೇನಾ ಕಂಟ್ರಿಗಳಲ್ಲಿ ರನ್​ಗಳಿಸೋದು ಏಷ್ಯನ್​ ಬ್ಯಾಟ್ಸ್​ಮನ್​ಗಳಿಗೆ ಅಸಾಧ್ಯ ಅನ್ನೋ ಮಾತನ್ನ ಸುಳ್ಳು ಎಂದು ನಿರೂಪಿಸಿದ ಆಟಗಾರ. ಇಂತಹ ಆಟಗಾರನಿಗೆ ಪಾಕ್​ ಮಾಜಿ ಕ್ರಿಕೆಟಿಗ ಯೂನಿಸ್​​ ಖಾನ್​ ಪಾಕಿಸ್ತಾನಕ್ಕೆ ಬಂದು ರನ್​ಗಳಿಸಲಿ ಅನ್ನೋ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?

ಪಾಕ್​ ನೆಲದಲ್ಲಿ ಒಂದೂ ಪಂದ್ಯವನ್ನಾಡಿಲ್ಲ ಕೊಹ್ಲಿ
16 ವರ್ಷಗಳ ಸುದೀರ್ಘ ಕರಿಯರ್​ನಲ್ಲಿ ವಿರಾಟ್​ ಕೊಹ್ಲಿ ವಿಶ್ವದ ಹಲವೆಡೆ ಆಡಿದ್ದಾರೆ. ಪಾಕಿಸ್ತಾನ ವಿರುದ್ಧವಂತೂ ಪರಾಕ್ರಮ ಮೆರೆದಿದ್ದಾರೆ. ಪಾಕ್​ ಬೌಲರ್​​ಗಳನ್ನ ಸಿಂಹಸ್ವಪ್ನದಂತೆ ಕಾಡಿದ್ದಾರೆ. ಕೊಹ್ಲಿ, ಪಾಕಿಸ್ತಾನದಲ್ಲಿ ಮಾತ್ರ ಒಂದೇ ಒಂದು ಪಂದ್ಯವನ್ನ ಆಡಿಲ್ಲ. ಹೀಗಾಗಿಯೇ ವಿರಾಟ್​​ ಕೊಹ್ಲಿಗೆ ಯೂನಿಸ್​ ಖಾನ್ ಪಾಕ್​ಗೆ ಬಂದು ಆಡೋ​ ಸವಾಲನ್ನು ಹಾಕಿದ್ದಾರೆ.

ಪಾಕಿಸ್ತಾನ ಹೇಳಿ ಕೇಳಿ ಫಾಸ್ಟ್​ ಬೌಲರ್ಸ್​ ಲ್ಯಾಂಡ್​ ಎಂದೇ ಫೇಮಸ್​​. ಇಲ್ಲಿನ ಪಿಚ್​​ಗಳಲ್ಲಿ ವೇಗಿಗಳ ಎದುರು ಆಡೋದು ಸವಾಲಿನ ಕೆಲಸ ಅನ್ನೋ ಮಾತಿದೆ. ಅಂಡರ್​​ 19 ದಿನಗಳಲ್ಲೇ ಪಾಕಿಸ್ತಾನದಲ್ಲಿ ವಿರಾಟ್​ ಕೊಹ್ಲಿ ವಿರಾಟರೂಪ ದರ್ಶನ ಮಾಡಿಸಿದ್ದಾರೆ. ಈ ವಿಚಾರವನ್ನ ಬಹುಶಃ ಯೂನಿಸ್​ ಖಾನ್​ ಮರೆತು ಬಿಟ್ಟಿದ್ದಾರೆ. 2006ರಲ್ಲಿ ಭಾರತ ಅಂಡರ್​​ 19 ತಂಡ ಪಾಕ್​ ಪ್ರವಾಸ ಕೈಗೊಂಡಾಗ ಕೊಹ್ಲಿ ಪಾಕ್​ ಬೌಲರ್​ಗಳನ್ನ ಚೆಂಡಾಡಿದ್ರು.

ಪಾಕಿಸ್ತಾನ ಪ್ರವಾಸದಲ್ಲಿ ಕೊಹ್ಲಿ
ಪಾಕಿಸ್ತಾನ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳನ್ನಾಡಿದ್ದ ಕೊಹ್ಲಿ 58ರ ಸರಾಸರಿಯಲ್ಲಿ 174 ರನ್​ಗಳಿಸಿದ್ರು. 3 ಏಕದಿನ ಪಂದ್ಯಗಳಲ್ಲಿ 41.66ರ ಸರಾಸರಿಯಲ್ಲಿ 125 ರನ್​ಗಳನ್ನ ಕಲೆ ಹಾಕಿದ್ರು. ಈ ಮೂಲಕ ಏಕದಿನ ಹಾಗೂ ಟೆಸ್ಟ್​ ಸರಣಿ ವೈಟ್​ವಾಷ್​ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ:ನೆಹ್ರಾಗೆ ಗೇಟ್​ಪಾಸ್​..! ಗುಜರಾತ್ ಟೈಟನ್ಸ್​ಗೆ ಯುವರಾಜ್​​ ಸಿಂಗ್ ಎಂಟ್ರಿ..!

ಸವಾಲಿ​ಗೆ ಅಂಜಲ್ಲ.. ಅಳುಕಲ್ಲ.. ಕೊಹ್ಲಿ
ಪಾಕಿಸ್ತಾನದ ಪಿಚ್​ಗಳು ಫಾಸ್ಟ್​ ಬೌಲರ್​​ಗೆ ಸಹಾಯ ಮಾಡಬಹುದು. ಆಸ್ಟ್ರೇಲಿಯಾ, ಸೌತ್​ ಆಫ್ರಿಕಾದಂತದ ಪೇಸ್​ ಅಂಡ್ ಬೌನ್ಸಿ ಟ್ರ್ಯಾಕ್​​ಗಳಲ್ಲೇ ರನ್​ ಪ್ರಹಾರ ನಡೆಸಿರೋ ಕೊಹ್ಲಿಗೆ ಇದೇನು ದೊಡ್ಡ ಸವಾಲಾಗಲ್ಲ. ಅದ್ರ ಜೊತೆಗೆ ಚಾಲೆಂಜ್​ ಅಂದರೆ ಬೆನ್ನು ತೋರಿಸೋ ಜಾಯಮಾನ ಕೊಹ್ಲಿಯದ್ದು ಅಲ್ವೇ ಅಲ್ಲ. ಸವಾಲು ಹಾಕಿದವರೆದುರೇ ಘರ್ಜಿಸಿದು ಕೊಹ್ಲಿಯ ಹವ್ಯಾಸ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಪಾಕಿಸ್ತಾನದಲ್ಲೇ ನಡೆದ್ರೆ ಭಾರತ ಆಡುತ್ತೋ ಬಿಡುತ್ತೋ ಗೊತ್ತಿಲ್ಲ. ಒಂದು ವೇಳೆ ಪಾಕಿಸ್ತಾನದಲ್ಲಿ ಟೀಮ್​ ಇಂಡಿಯಾ ಆಡಿದ್ದೇ ಆದರೆ ಯೂನಿಸ್​ ಸವಾಲ್​ಗೆ ಕೊಹ್ಲಿ ಬ್ಯಾಟ್​ನಿಂದ ಆನ್ಸರ್​ ಕೊಡೋದು ಪಕ್ಕಾ.

ಇದನ್ನೂ ಓದಿ:ಬರೀ ಕಲ್ಲು ಮುಳ್ಳಿನ ಹಾದಿ.. ಇಲ್ಲಿ ಸೂರ್ಯಂಗೇ ಟಾರ್ಚ್​​.. ಹೆಂಗಿದೆ ಗೊತ್ತಾ ಚಕ್ರವ್ಯೂಹ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

https://newsfirstlive.com/wp-content/uploads/2024/07/VIRAT-KOHLI.jpg

Load More