newsfirstkannada.com

ಪೋಷಕರೇ ಎಚ್ಚರ! ನಿಮ್ಮ ಮಕ್ಕಳು ಮೊಬೈಲ್​ ಯೂಸ್​ ಮಾಡ್ತಾರಾ? ನೀವು ಓದಲೇಬೇಕಾದ ಸ್ಟೋರಿ!

Share :

Published May 1, 2024 at 6:09am

    ಮಕ್ಕಳು ಗೇಮ್ಸ್​ ಆಡುತ್ತಿದ್ದಾರೆ ಅಂತ ಯಾಮಾರಿದ್ರೆ ಬೀದಿಗೆ ಬರಬೇಕಾಗುತ್ತದೆ!

    ಮಕ್ಕಳ ವೀಕ್​ನೆಸ್​​ ಜೊತೆಗೆ ಆಟ ಆಡುತ್ತಿದ್ದಾರೆ ಖತರ್ನಾಕ್​ ಕಿಲಾಡಿಗಳು

    ಡ್ರೀಮ್​ 11 ಆ್ಯಪ್​ ಯೂಸ್​ ಮಾಡುತ್ತಿದ್ದ ಬಾಲಕನಿಗೆ ಖದೀಮರಿಂದ ಬೆದರಿಕೆ

ಬೆಂಗಳೂರು: ಈಗ ಯಾರ ಕೈಯಲ್ಲಿ ಫೋನ್​ ಇರೋದಿಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಕೈಯಲ್ಲಿ ಫೋನ್​ ಇರುತ್ತು. ಊಟ ಮಾಡುವಾಗ, ಮಲಗುವಾಗ, ಓದುವಾಗ, ಟೀ ಕುಡಿಯುವಾಗ ಹೀಗೆ ಸಾಕಷ್ಟು ಸಂದರ್ಭದಲ್ಲಿ ಜನರು ಫೋನ್​ ಯೂಸ್​ ಮಾಡುತ್ತಾ ಇರುತ್ತಾರೆ. ಪೋಷಕರೇ ಹೀಗೆ ​ನಿಮ್ಮ ಮಕ್ಕಳೇನಾದ್ರೂ ಫೋನ್​ನಲ್ಲೇ ಮುಳುಗಿದ್ರೆ ಸ್ವಲ್ಪ ಹುಷಾರಾಗಿರಿ.

ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್‌; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಸಾಕಷ್ಟು ಮಕ್ಕಳು ಇನ್​ಸ್ಟಾಗ್ರಾಮ್​ ರೀಲ್ಸ್​ ನೋಡ್ತಿದಾರೆ. ಗೇಮ್ಸ್​ ಆಡುತ್ತಿದ್ದಾರೆ ಅಂತ ನೀವು​ ಯಾಮಾರಿದ್ರೆ ಬೀದಿಗೆ ಬರಬೇಕಾಗುತ್ತದೆ. ಯಾಕಂದ್ರೆ ಇಲ್ಲೊಬ್ಬ ಅಪ್ರಾಪ್ತ ಡ್ರೀಮ್​ 11 ಗೇಮ್​ಗೆ ಅಡಿಕ್ಟ್​​ ಆಗಿ ಎಂಥಾ ಕೆಲಸ ಮಾಡಿದ್ದಾನೆ ಅಂತಾ ಕೇಳಿದರೇ ನೀವು ಕೂಡ ಶಾಕ್​ ಆಗುತ್ತೀರಾ. ಅಪ್ರಾಪ್ತ ಬಾಲಕನನ್ನ ಹೆದರಿಸಿ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ವಸೂಲಿ ಮಾಡಿ, ಈಗ ಆರ್​ಆರ್​ ನಗರ ಪೊಲೀಸರ ಕೈಗೆ ಲಾಕ್​ ಆಗಿದ್ದಾರೆ. ಡ್ರೀಮ್​ 11 ಗೇಮ್​ ಆಡುತ್ತಿದ್ದ ಅಪ್ರಾಪ್ತ ಬಾಲಕನನ್ನ ಟಾರ್ಗೆಟ್​ ಮಾಡಿದ್ದ ಈ ಖದೀಮರು, ಮನೆಯಲ್ಲಿ ವಿಚಾರ ಹೇಳೋದಾಗಿ ಹೆದರಿಸಿ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಅವರ ಮಾತುಗಳ ಬಲೆಗೆ ಬಿದ್ದಿದ್ದ ಬಾಲಕ, ತನ್ನ ಮನೆಯಲ್ಲಿದ್ದ 600-700 ಗ್ರಾಂ ಚಿನ್ನದ ಆಭರಣವನ್ನ ತಂದು ಕೊಟ್ಟಿದ್ದ.

ಮನೆಯಲ್ಲಿ ಯಾವಾಗ ಚಿನ್ನಾಭರಣ ನಾಪತ್ತೆ ಆಯ್ತು ಆಗ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ರು. ತನಿಖೆ ವೇಳೆ ಅಸಲಿ ಕಹಾನಿ ಹೊರಬಿದ್ದಿದೆ. ಸದ್ಯ ಬಂಧಿತರಿಂದ 302 ಗ್ರಾಂ ಚಿನ್ನದ ಗಟ್ಟಿಗಳು, 23 ಲಕ್ಷದ 50 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ತನಿಖೆಯಲ್ಲಿ ಇಬ್ಬರು ಬಾಲಕರು ತಮಗೆ ಪರಿಚಯ ಇರೋ ನಾಲ್ಕು ಜನರಿಗೆ ಚಿನ್ನ ಕೊಟ್ಟಿರುವುದಾಗಿ ಹೇಳಿಕೆ ಕೊಟ್ಟಿದ್ದು, ಪೊಲೀಸರು ನಾಲ್ಕು ಜನರನ್ನ ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ! ನಿಮ್ಮ ಮಕ್ಕಳು ಮೊಬೈಲ್​ ಯೂಸ್​ ಮಾಡ್ತಾರಾ? ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/04/police2.jpg

Load More