/newsfirstlive-kannada/media/post_attachments/wp-content/uploads/2025/01/UPI-ID-TRANSACTIONS.jpg)
ದಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ ಕುರಿತಾಗಿ ಒಂದು ವಿಶೇಷ ಘೋಷಣೆ ಮಾಡಿದೆ. ಅದು ಫೆಬ್ರವರಿ 1,2025ರಿಂದ ಅನ್ವಯವಾಗಲಿದೆ. ಈ ಒಂದು ನಿರ್ಧಾರ ಯುಪಿಐ ಪೆಮೇಂಟ್​ಗೆ ಸಂಬಂಧಿಸಿದ್ದು ಕೆಲವು ಟೆಕ್ನಿಕಲ್ ಸ್ಪೆಸಿಫಿಕೇಷನ್​ಗಳನ್ನು ಸುಧಾರಣೆ ಮಾಡುವ ಸಲುವಾಗಿ ಹಾಗೂ ಸಂಪೂರ್ಣವಾಗಿ ಡಿಜಿಟಲ್ ಪೇಮೆಂಟ್​​ನ ಸುರಕ್ಷತೆಗಾಗಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಎನ್​ಪಿಸಿಐ ಜನವರಿ 9 ರಿಂದ ಒಂದು ಸರ್ಕ್ಯೂಲರ್​ನ್ನು ಹೊರಬಿಟ್ಟಿದೆ. ಯುಪಿಐ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯುಪಿಐ ಅಡ್ರೆಸ್​ನಲ್ಲಿ ಕಡ್ಡಾಯವಾಗಿ ಅಕ್ಷರಸಂಖ್ಯಾಯುಕ್ತಗಳು ಇರದಂತೆ ಅಪ್​ಡೇಟ್​ ಮಾಡಿಕೊಳ್ಳಲು ಹೇಳಿದೆ . ಅಂದರೆ ನಮ್ಮ ಯುಪಿಐ ಐಡಿಯಲ್ಲಿರುವ ವಿಶೇಷ ಪದಗಳಾದ @,! ಇಲ್ಲವೇ # ನಂತಹ ಪದಗಳು ಇದ್ದರೆ ನಮ್ಮ ಟ್ರಾನ್ಸಕ್ಷನ್​ಗಳು ಆಟೋಮೆಟಿಕ್​ ಆಗಿ ತಿರಸ್ಕರಿಸಲ್ಪಡುತ್ತವೆ. ಎನ್​ಪಿಸಿಐ ಈಗಾಗಲೇ ಹೇಳಿದಂತೆ ಸಾಕಷ್ಟು ಜನರು ಯುಪಿಐನ ವ್ಯವಸ್ಥೆಯನ್ನು ಈಗಾಗಲೇ ಪಾಲಿಸಿದ್ದಾರೆ. ಇನ್ನು ಕೆಲವರು ಪಾಲಿಸಿಲ್ಲ. ಹೀಗಾಗಿ ಫೆಬ್ರವರಿ 1ರೊಳಗಾಗಿ ನಿಮ್ಮ ಯುಪಿಐ ಅಡ್ರೆಸ್​ನಲ್ಲಿರುವ ವಿಶೇಷ ಪದಗಳನ್ನು ತೆಗೆದುಹಾಕುವಂತೆ ಹಾಗೂ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಹೇಳಿದೆ.
ಈಗಾಗಲೇ ದೇಶದ ಲಕ್ಷಾಂತರ ಜನರು ಯುಪಿಐ ಮೂಲಕ ತಮ್ಮ ವ್ಯವಹಾರವನ್ನು ಮಾಡುತ್ತಾರೆ. ಸದ್ಯ ಈಗ ಮಾಡಿರುವ ಈ ಒಂದು ಬದಲಾವಣೆ ಅವರ ಮೇಲೆ ಪರಿಣಾಮ ಬೀರಲಿದೆ. ಸ್ಪೇಷಲ್ ಕ್ಯಾರೆಕ್ಟರ್ ಇರುವ ಐಡಿಯೊಂದಿಗೆ ಅವರು ವ್ಯವಹಾರ ಮಾಡಲು ಹೋದಲ್ಲಿ ಆ ಪೇಮೆಂಟ್​ ಖಂಡಿತವಾಗಿಯೂ ಫೇಲ್ ಆಗಲಿದೆ.
ಇದನ್ನೂ ಓದಿ:72 ಗಂಟೆ, 50 ಲಕ್ಷ ಭಕ್ತಾದಿಗಳ ಭೇಟಿ; ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಜನಸಾಗರ!
ಉದಾಹರಣೆಗೆ ನಿಮ್ಮ ಫೋನ್ ನಂಬರ್ 1234567890 ಅಂತ ಇತ್ತು ಅಂದುಕೊಳ್ಳೋಣ. ಯುಪಿಐ ಐಡಿ ಎಸ್​ಬಿಐ ಜೊತೆಗೆ ಲಿಂಕ್ ಹೊಂದಿದ್ದಲ್ಲಿ. ಆ ಐಡಿ ಅಡ್ರೆಸ್​ 1234567890oksbi ರೀತಿಯಲ್ಲಿ ಇರಬೇಕು. ಒಂದು ವೇಳೆ ಅದು 1234567890@ok-sbi ಇದ್ದಲ್ಲಿ ನಿಮ್ಮ ಟ್ರ್ಯಾಂಸಕ್ಷನ್​ಗಳು ಕ್ಯಾನ್ಸಲ್ ಆಗಲಿವೆ. ಈ ರೀತಿಯಾದ ವಿಶೇಷ ಪದಗಳನ್ನೊಳಗೊಂಡ ಯುಪಿಐ ಅಡ್ರೆಸ್ ಇರುವ ಆ್ಯಪ್​ನಿಂದ ಪೇಮೆಂಟ್​ ಆಗುವುದಿಲ್ಲ ಹಾಗೂ ಸ್ವೀಕರಿಸಲು ಕೂಡ ಸಾಧ್ಯವಿಲ್ಲ ಎಂದು ಹೊಸ ರೂಲ್ಸ್ ಹೇಳುತ್ತಿದೆ.
ಇದನ್ನು ದೂರ ಮಾಡಲು ಬಳಕೆದಾರರು ಮಾಡಬೇಕಾಗಿದ್ದು ಇಷ್ಟೇ. ಮೊದಲು ಅವರು ತಮ್ಮ ಯುಪಿಐ ಆ್ಯಪ್​ ಲೇಟೆಸ್ಟ್ ವರ್ಷನ್​ನಲ್ಲಿ ಅಪ್​ಡೇಟ್ ಆಗಿದೆಯಾ ಇಲ್ವಾ ನೋಡಬೇಕು. ಆ್ಯಪ್ ಅಪ್​ಡೇಟ್ ಆದಮೇಲೆ ಫೀಚರ್ಸ್ ಹಾಗೂ ಸೆಕ್ಯೂರಿಟಿ ಸುಧಾರಣೆಗಳ ಬಗ್ಗೆಯೂ ಗಮನಕೊಡಬೇಕು. ಇದು ಕಷ್ಟವಾದಲ್ಲಿ ಬಳಕೆದಾರರು ಸೆಟ್ಟಿಂಗ್ ಇಲ್ಲವೇ ಎನ್​ಪಿಸಿಐಯಿಂದ ಇದಕ್ಕೆ ಸಂಬಂಧಿಸಿದ ಯಾವುದಾದರೂ ನೋಟಿಫಿಕೇಷನ್ ಬಂದಿದೆಯಾ ಎಂದು ನೋಡಿಕೊಂಡು ಆ ಹೊಸ ರೂಲ್ಸ್​ನಂತೆ ಆ್ಯಪ್​ನಲ್ಲಿ ಯುಪಿಐ ಅಡ್ರೆಸ್​ ಬದಲಾಯಿಸಬೇಕು.
ಒಂದು ವೇಳೆ ಇದು ಕೂಡ ನಿಮಗೆ ಕ್ಲಿಷ್ಟವೆನಿಸಿದರೆ ನೀವು ಆ್ಯಪ್​ನ ಕಸ್ಟಮರ್ ಕೇರ್ ಬೆಂಬಲ ಪಡೆದುಕೊಂಡು ಸ್ಪಷ್ಟನೆ ಪಡೆಯಬಹುದು. ಈ ಒಂದು ವಿಶೇಷ ಪದಗಳನ್ನು ನಿಷೇಧ ಮಾಡುವುದರ ಹಿಂದೆ ಯುಪಿಐ ಡಿಜಿಟಲ್ ಪೇಮೆಂಟ್ ಎಕೊಸಿಸ್ಟಮ್​ನ್ನು ಮತ್ತಷ್ಟು ಸುಧಾರಿಸುವ ಹಾಗೂ ಸುರಕ್ಷತೆಗೊಳಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್​ 2024ರ ವೇಳೆಯಲ್ಲಿ ಒಟ್ಟು ಯುಪಿಐನಲ್ಲಿ ನಡೆದ ಟ್ರಾನ್ಸಕ್ಷನ್​ಗಳ ಮೊತ್ತ 1600 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ