ಜೈ ಶ್ರೀರಾಮ ಎಂದ ಯುವಕನ ಮೇಲೆ 25ಕ್ಕೂ ಹೆಚ್ಚು ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು

author-image
AS Harshith
Updated On
ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ.. ಕೊಡಲಿಯಿಂದ ಕೊಚ್ಚಿ ಕೊಲೆಗೈದು ಅಲ್ಲೇ ನಿದ್ರಿಸಿದ ಪತಿ
Advertisment
  • ಜೈ ಶ್ರೀರಾಮ ಘೋಷಣೆ ಕೂಗಿದ ಯುವಕನ ಮೇಲೆ ಹಲ್ಲೆ
  • ಊಟಕ್ಕೆ ಕುಳಿತ್ತಿದ್ದ ಯುವಕರ ಗುಂಪಿಂದ ವ್ಯಕ್ತಿ ಮೇಲೆ ಹಲ್ಲೆ
  • ಅನ್ಯ‌ ಕೋಮಿನ 25ಕ್ಕೂ ಜನರಿಂದ ಹಲ್ಲೆ ನಡೆದಿದೆ ಎಂದು ಆರೋಪ

ಕೊಪ್ಪಳ: ಜೈ ಶ್ರೀರಾಮ ಘೋಷಣೆ ಹಿನ್ನೆಲೆ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಘಟನೆ ನಡೆದಿದೆ.

ಕುಮಾರ್ ರಾಥೋಡ್ (25) ಹಲ್ಲೆಗೊಳಗಾದ ಯುವಕ. ಶ್ರೀರಾಮನಗರ ಬಾರ್ ವೊಂದರಲ್ಲಿ ಊಟ ಮಾಡುವಾಗ ಜೈ ಶ್ರೀರಾಮ ಎಂದ ಕುಮಾರ್.  ಈ ವೇಳೆ ಎದುರುಗಡೆ ಊಟಕ್ಕೆ ಕುಳಿತ್ತಿದ್ದ ಯುವಕರ ಗುಂಪಿಂದ ಆತನ ಮೇಲೆ ಹಲ್ಲೆ ನಡೆದಿದೆ.

ಇದನ್ನೂ ಓದಿ: ಸಿಂಗಸಂದ್ರದಲ್ಲಿ ಅಗ್ನಿ ಅವಘಡ; ಬೆಂಕಿ ಕೆನ್ನಾಲಿಗೆಗೆ 1 BMW ಕಾರು, 40 ಬೈಕ್​ಗಳು, ರೆಡಿಮೆಡ್​ ಬಟ್ಟೆಗಳು ಭಸ್ಮ

ಹಲ್ಲೆಗೊಳಗಾದ ಯುವಕನನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯ‌ ಕೋಮಿನ 25ಕ್ಕೂ ಜನರಿಂದ ಹಲ್ಲೆ ನಡೆದಿದೆ ಎಂದು ಆರೋಪಸಿದ್ದಾನೆ. ಹಲ್ಲೆಗೊಳಗಾದ ಯುವಕ ಕುಟುಂಬ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment