ಹನುಮ ಜಯಂತಿ ವೇಳೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ; 6 ಜನರ ಮೇಲೆ ಪ್ರಕರಣ ದಾಖಲು

author-image
AS Harshith
Updated On
ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್; ಸಾಂತ್ವನ ಹೇಳಲು ಬಂದ ಬಿಜೆಪಿ ನಿಯೋಗದ ಮುಂದೆ ಕುಟುಂಬಸ್ಥರ ಕಣ್ಣೀರು
Advertisment
  • ತಿರುವನಂತ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ
  • ಹನುಮ ಜಯಂತಿ ವೇಳೆ ಘಟನೆ; ಆರು ಜನರ ಮೇಲೆ ಪ್ರಕರಣ ದಾಖಲು
  • ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ವೇಣುಗೋಪಾಲ್​ ನಾಯಕ್

ಮೈಸೂರು: ನಿನ್ನೆ ತಿರುವನಂತ ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ನಡೆದಿದೆ. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ಮೇಲೆ ಪ್ರಕರಣ ದಾಖಲಾಗಿದೆ.

ವೇಣುಗೋಪಾಲ್​ ನಾಯಕ್​ ಕೊಲೆಯಾದ ಯುವಕ. ಈತ ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯ ನಿವಾಸಿಯಾಗಿದ್ದು, ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿದ್ದಾನೆ.

ಮಾತಿನ ಚಕಮಕಿ

ಹನುಮ ಜಯಂತಿ ವೇಳೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ವೇಳೆ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಿಂದ ವೇಣುಗೋಪಾಲ್​​ ನಾಯಕ್​ ಕೊಲೆಯಾಗಿದ್ದಾನೆ.

publive-image

ಆರೋಪಿಗಳ ಪತ್ತೆ ಬಲೆ ಬಿಸಿದ ಪೊಲೀಸರು 

ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಯ ಹಿನ್ನಲೆ ತಿ. ನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿಗಳಾದ ಮಣಿಕಂಠ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು, ಹ್ಯಾರಿಸ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment