ಪಟಾಕಿ ದುರಂತ; ಡಬ್ಬದ ಮೇಲೆ ಯುವಕನನ್ನು ಕೂರಿಸಿ ಬಾಂಬ್​ ಸಿಡಿಸಿದ್ರು; ಸ್ಥಳದಲ್ಲೇ ಸಾವು!

author-image
AS Harshith
Updated On
ಪಟಾಕಿ ದುರಂತ; ಡಬ್ಬದ ಮೇಲೆ ಯುವಕನನ್ನು ಕೂರಿಸಿ ಬಾಂಬ್​ ಸಿಡಿಸಿದ್ರು; ಸ್ಥಳದಲ್ಲೇ ಸಾವು!
Advertisment
  • ಅಪಾಯಕಾರಿ ಪಟಾಕಿ ಜೊತೆಗೆ ಯುವಕರ ಹುಚ್ಚಾಟ
  • ಪಟಾಕಿ ಸಿಡಿಸಿ ಸ್ನೇಹಿತನನ್ನು ಬಲಿಕೊಟ್ಟ ಗೆಳೆಯರು
  • ಮದ್ಯದ ನಶೆಯಲ್ಲಿ ಪ್ರಾಣ ಚೆಲ್ಲಿದ ಯುವಕ.. ಇಲ್ಲಿದೆ ವಿಡಿಯೋ

ಬೆಂಗಳೂರು: ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.

ಪಟಾಕಿ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸ್ನೇಹಿತರು ಹುಡುಗಾಟ ಮಾಡಲು ಹೋಗಿ ಸ್ನೇಹಿತನನ್ನೇ ಕಳೆದುಕೊಂಡಿದ್ದಾರೆ. ಶಬರೀಶ್ ಎಂಬ ಯುವಕ ಸ್ನೇಹಿತರೊಂದಿಗೆ ಹುಚ್ಚಾಟ ಮಾಡಲು ಹೋಗಿ ಬಲಿಯಾಗಿದ್ದಾನೆ.

ಇದನ್ನೂ ಓದಿ: ಕಂದಕಕ್ಕೆ ಉರುಳಿ ಬಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​.. 15 ಜನರು ಸಾ*ವನ್ನಪ್ಪಿರುವ ಶಂಕೆ

ದೀಪಾವಳಿ ದಿನದಂದು ಶಬರೀಶ್ ಹಾಗೂ ಸ್ನೇಹಿತರು ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ಪಟಾಕಿ ಇಟ್ಟು ಅದರ ಮೇಲೆ ಡಬ್ಬ ಇಟ್ಟು ಕೂರಲು ಚಾಲೆಂಜ್ ಹಾಕಿದ್ದರು. ಮದ್ಯಪಾನ‌ ಮಾಡಿದ್ದ ಶಬರೀಶ್ ಅದೇ ರೀತಿ ಮಾಡಿದ್ದಾನೆ. ಪಟಾಕಿ ಸಿಡಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ.


">November 4, 2024

ಇದನ್ನೂ ಓದಿ: ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್​, ಮೊಳೆ, ಉಗುರು ಸೇರಿ 56 ವಸ್ತುಗಳು.. ಆಪರೇಷನ್​ ಬಳಿಕ ಸಾ*ವು

ಗಾಯಾಳು ಶಬರೀಶನನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶಬರೀಶ್ ಸಾವನ್ನಪ್ಪಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment