newsfirstkannada.com

ಚಿತ್ರದುರ್ಗ ಗ್ರಾಮದೇವಿಯ ಜಾತ್ರೆಯಲ್ಲಿ ನಾಲ್ವರಿಗೆ ಚೂರಿ ಇರಿತ; ಆತಂಕದ ವಾತಾವರಣ

Share :

Published January 24, 2024 at 9:38am

  5 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿಯ ಜಾತ್ರಾಹೋತ್ಸವ

  ಗ್ರಾಮದ ಯುವಕನೇ ಚಾಕು ಇರಿದು ಪರಾರಿ ಎಂದು ಆರೋಪ

  ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ನಾಲ್ವರು ಗಾಯಾಳುಗಳು

ಚಿತ್ರದುರ್ಗ: ಗ್ರಾಮದೇವಿಯ ಜಾತ್ರಾ ಹೋತ್ಸವದಲ್ಲಿ ಯುವಕನೊಬ್ಬ ಮದ್ಯ, ಗಾಂಜಾದ ಮತ್ತಲ್ಲಿ ನಾಲ್ವರಿಗೆ ಚೂರಿ ಇರಿದು ಎಸ್ಕೇಪ್ ಆಗಿರುವ ಘಟನೆ ಮಲ್ಲಾಪುರದ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಚೂರಿ ಇರಿತದಿಂದ ಜಾತ್ರೆಯಲ್ಲಿ ಕೆಲ ಸಮಯ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಮದ ವೀರೇಶ್ ಎಂಬವನಿಂದ ಚೂರಿ ಇರಿದ ಆರೋಪವಿದ್ದು ಪವನ್ ಕಲ್ಯಾಣ, ಮಂಜುನಾಥ್, ಉಮೇಶ್, ಮಾರುತಿ ಎಂಬವವರು ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

5 ವರ್ಷಕ್ಕೊಮ್ಮೆ ಗ್ರಾಮದಲ್ಲಿ ಉಡಸಲಮ್ಮ ದೇವಿಯ ಜಾತ್ರಾಮಹೋತ್ಸವ ನಡೆಯುತ್ತದೆ. ಈ ಜಾತ್ರಾಹೋತ್ಸವದಲ್ಲಿ ಗಾಂಜಾ, ಮದ್ಯಪಾನ ಸೇವನೆ ಮಾಡಿದ್ದ ಯುವಕನು ಗ್ರಾಮದ ನಾಲ್ವರಿಗೆ ಚಾಕು ಇರಿದಿದ್ದಾನೆ. ಇದರಿಂದ ಗಂಭಿರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿತ್ರದುರ್ಗ ಗ್ರಾಮದೇವಿಯ ಜಾತ್ರೆಯಲ್ಲಿ ನಾಲ್ವರಿಗೆ ಚೂರಿ ಇರಿತ; ಆತಂಕದ ವಾತಾವರಣ

https://newsfirstlive.com/wp-content/uploads/2024/01/CTR_JATRE.jpg

Load More