/newsfirstlive-kannada/media/post_attachments/wp-content/uploads/2025/07/youtube-icon.jpg)
ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ಯೂಟ್ಯೂಬ್ ಶಾಕ್ ಕೊಟ್ಟಿದೆ. ಜುಲೈ 15ರ ನಂತರ ಯೂಟ್ಯೂಬ್ ಮೂಲಕ ಹಣ ಗಳಿಕೆ ಸ್ವಲ್ಪ ಕಠಿಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಅದರಲ್ಲೂ ಸಾಕಷ್ಟು ಮಂದಿ ಯೂಟ್ಯೂಬ್ನಲ್ಲಿ ವಿಡಿಯೋ ಮಾಡಿ ಹಣವನ್ನು ಸುಲಭವಾಗಿ ಗಳಿಸುತ್ತಿದ್ದಾರೆ. ಜನರು ಎಐ ಬಳಸಿ, ಸುಲಭವಾಗಿ, ಯಾವುದೇ ಶ್ರಮವಿಲ್ಲದೆ ವಿಡಿಯೋ ಶೇರ್ ಮಾಡಿ ಸಂಪಾದಿಸುತ್ತಿದ್ದಾರೆ.
ಇದನ್ನೂ ಓದಿ: ಅಲಿಯಾ ಭಟ್ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
ಅಷ್ಟೇ ಅಲ್ಲದೇ ಮತ್ತೆ ಕೆಲವರು ಬೇರೆ ಕಡೆಯ ವಿಡಿಯೋಗಳನ್ನು ಬದಲಾವಣೆ ಮಾಡಿ ಹಾಕ್ತಿದ್ದಾರೆ. ಈಗ ಹಾಗೇ ಮಾಡಲು ಆಗೋದಿಲ್ಲ. ತನ್ನ ವಿಡಿಯೋ ಕ್ರಿಯೇಟರ್‌ಗಳಿಗೆ ಹೊಸ ಶಾಕ್ ನೀಡಿದೆ. ಲಾಭ ಗಳಿಸುವ ಮಾದರಿಯಲ್ಲಿ ಹಲವು ನಿಮಯಗಳ ಬದಲಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯುಟ್ಯೂಬ್ ಸಂಸ್ಥೆ ಮುಂದಾಗಿದೆ. ತನ್ನ ಮೋನಟೈಸೇಶನ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡ್ತಿದೆ. ಹೊಸ ನಿಯಮ ಇದೇ ಜುಲೈ 15ರಿಂದ ಜಾರಿಗೆ ಬರಲಿದೆ. ಹಳೆ ವಿಡಿಯೋಗಳನ್ನೇ ಮತ್ತೆ ಮತ್ತೆ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಈಗ ಇವೆಲ್ಲದಕ್ಕೂ ಕಡಿವಾಣ ಹಾಕಲು ಯೂಟ್ಯೂಬ್ ಮುಂದಾಗಿದೆ.
ಯೂಟ್ಯೂಬ್ ಹೊಸ ನಿಯಮ ಏನು?
ಜುಲೈ 15, 2025 ರಿಂದ, ಪದೇ ಪದೆ ಒಂದೇ ವಿಡಿಯೋ ಅಪ್ಲೋಡ್ ಮಾಡಿದ್ರೆ, ಇಲ್ಲವೆ ಬೇರೆಯವರ ವಿಡಿಯೋವನ್ನು ನಕಲಿ ಮಾಡಿ ಪೋಸ್ಟ್ ಮಾಡಿದ್ರೆ ಅಂಥ ಖಾತೆದಾರರಿಗೆ ಯೂಟ್ಯೂಬ್ ಹಣಗಳಿಸಲು ಅವಕಾಶ ನೀಡುವುದಿಲ್ಲ. ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗುವ ವಿಡಿಯೋಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಯೂಟ್ಯೂಬ್ ತನ್ನ ನಿಯಮಗಳನ್ನು ತಂದಿದೆ. ಜೊತೆಗೆ ನಿಜವಾದ ಕಂಟೆಂಟ್ ಕ್ರಿಯೇಟರ್ಸ್ ರಕ್ಷಿಸುವುದು ಮತ್ತು ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಚಾನೆಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿದೆ.
ಇನ್ಮುಂದೆ ಬೇರೊಬ್ಬರ ವಿಷಯವನ್ನು ಎತ್ತಿಕೊಂಡು ಅದನ್ನು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ವೀಡಿಯೊವನ್ನು ಹೊಸದಾಗಿ ತಯಾರಿಸಬೇಕು. ಬೇರೆ ವಿಡಿಯೋವನ್ನು ಕೂಡ ಸಂಪೂರ್ಣ ಬದಲಿಸಿ ಪೋಸ್ಟ್ ಮಾಡ್ಬೇಕು. ಪುನರಾವರ್ತಿತ ವೀಡಿಯೊಗಳನ್ನು ನಿಷೇಧಿಸಲಾಗುವುದು. ಹಣ ಗಳಿಕೆಗೆ ನೀವು ಮಾಡಿದ ವಿಡಿಯೋವನ್ನೇ ಮತ್ತೆ ಮತ್ತೆ ಹಾಕುವಂತಿಲ್ಲ. ರೋಬೋಟ್ಗಳ ಧ್ವನಿ ಹೊಂದಿರುವ ವಿಡಿಯೋಕ್ಕೆ ಅವಕಾಶ ಇಲ್ಲ. ಬರೀ ಹಣ ಗಳಿಸುವ ಉದ್ದೇಶದಿಂದ ಮಾಹಿತಿ ಇಲ್ಲದ ಅಥವಾ ಮನರಂಜನೆ ಇಲ್ಲದ ವೀಡಿಯೊಗಳಿಗೆ ಅವಕಾಶ ಇಲ್ಲ. ಬಹಳ ಮುಖ್ಯವಾಗಿ ಯೂಟ್ಯೂಬ್ ತನ್ನ ನಿಯಮದಲ್ಲಿ ಎಲ್ಲೂ ಎಐ ಹೆಸರನ್ನು ಹೇಳಿಲ್ಲ. ಆದ್ರೆ ಎಐ ನಿಂದ ಮಾಡಿದ, ಮಾನವೀಯ ಸ್ಪರ್ಶವಿಲ್ಲದ, ಆಟೋ ಜನರೇಟ್ ಧ್ವನಿಯ ವಿಡಿಯೋವನ್ನು ಸಹ ಈ ಕಟ್ಟುನಿಟ್ಟಿನ ನಿಯಮದಲ್ಲಿ ತರಬಹುದು ಎನ್ನಲಾಗಿದೆ.
ಈ ಹಿಂದೆ ಯೂಟ್ಯೂಬ್ನಲ್ಲಿ ಹಣ ಗಳಿಸಲು 12 ತಿಂಗಳುಗಳಲ್ಲಿ 1,000 ಸಬ್‌ಸ್ಕ್ರೈಬರ್ ಮತ್ತು 4,000 ಗಂಟೆ ವೀವ್ಸ್ ಸಮಯ ಪೂರ್ಣಗೊಂಡಿರಬೇಕು. ಕಳೆದ 90 ದಿನಗಳಲ್ಲಿ ಶಾರ್ಟ್ಸ್ ವಿಡಿಯೋಗಳು 10 ಮಿಲಿಯನ್ ವೀವ್ಸ್ ಪಡೆದಿರಬೇಕು. ನೀವು ಇದನ್ನು ಪೂರ್ಣಗೊಳಿದ್ರೆ ಚಾನಲ್ ಹಣಗಳಿಕೆ ಒಪ್ಪಿಗೆ ನೀಡ್ತಿತ್ತು. ಈ ಹಿಂದೆ ಕಾಪಿ ಪೇಸ್ಟ್ಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಎಐ ಬಳಕೆ ಮಾಡಬಹುದಾಗಿತ್ತು. ಜೊತೆಗೆ ಹಳೆ ವಿಡಿಯೋವನ್ನು ಮತ್ತೆ ಪೋಸ್ಟ್ ಮಾಡಬಹುದಿತ್ತು. ಈ ಬದಲಾವಣೆ ಸಾವಿರಾರು ಕಂಟೆಂಟ್ ಕ್ರಿಯೇಟರ್ಗಳ ಗಳಿಕೆ ಮೇಲೆ ಪರಿಣಾಮ ಬೀರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ