newsfirstkannada.com

ಬಿಗ್​ ಬಾಸ್​ ವಿನ್ನರ್, ಯೂಟ್ಯೂಬರ್ ಎಲ್ವಿಶ್ ಯಾದವ್ ಅರೆಸ್ಟ್​..​ ಐದು ನಾಗರಹಾವು, 20 ML ಹಾವಿನ ವಿಷ ವಶಕ್ಕೆ

Share :

Published March 18, 2024 at 10:33am

Update March 18, 2024 at 10:35am

    ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್

    14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾದ ಯೂಟ್ಯೂಬರ್​

    ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ವಶಕ್ಕೆ

ಉತ್ತರ ಪ್ರದೇಶ: ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್​ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಪಾರ್ಟಿಯಲ್ಲಿ ಮಾದಕ ವ್ಯಸನಕ್ಕಾಗಿ ಬಳಸಿದ 20 ಎಂಎಲ್​ ಹಾವಿನ ವಿಷವನ್ನು ಪೊಲೀಸರು ಪತ್ತೆ ಮಾಡಿ ಎಲ್ವಿಶ್​ ಯಾದವ್​ನನ್ನ ಬಂಧಿಸಿದ್ರು.

ನವೆಂಬರ್ 3 ರಂದು, ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಲ್ಲಿ 5 ಜನರನ್ನು ಬಂಧಿಸಿ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ವಶಕ್ಕೆ ಪಡೆದಿದ್ರು. ಈಗ ಈ ಸಂಬಂಧ ಸೂರಜ್‌ಪುರದ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಎಲ್ವಿಶ್​ ಯಾದವ್​ನನ್ನ ಒಪ್ಪಿಸಿದೆ.

ಇನ್ನು 26 ವರ್ಷದ ಎಲ್ವಿಶ್​ ಯಾದವ್​ ವಿರುದ್ಧ ವನ್ಯಜೀವಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್​ 120ಎ ಅಡಿ ನಿಬಂಧನೆಗಳ ಆರೋಪ ಹೊರಿಸಲಾಗಿದೆ. ಈ ಹಿಂದೆಯೂ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಬಂಧಿಸಿರಲಿಲ್ಲ. ಆದರೀಗ ಪೊಲೀಸರು ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದಾರೆ.

ಮಾರ್ಚ್ 9ರಂದು ಎಲ್ವಿಶ್​ ಯಾದವ್ ಮತ್ತು ಆತನ ತಂಡ​ ದೆಹಲಿ ಮೂಲದ ಯೂಟ್ಯೂಬರ್​ ಮೇಲೆ ಹಲ್ಲೆ ಮಾಡಿದ್ರು, ಅಂಗಡಿಗೆ ತೆರಳಿ ಆತನಿಗೆ ಸರಿಯಾಗಿ ಏಟು ನೀಡಿ ಕೊಲೆ ಮಾಡುವುದುದಾಗಿ ಬೆದರಿಕೆ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಬಾಸ್​ ವಿನ್ನರ್, ಯೂಟ್ಯೂಬರ್ ಎಲ್ವಿಶ್ ಯಾದವ್ ಅರೆಸ್ಟ್​..​ ಐದು ನಾಗರಹಾವು, 20 ML ಹಾವಿನ ವಿಷ ವಶಕ್ಕೆ

https://newsfirstlive.com/wp-content/uploads/2024/03/Elvish-yadeav.jpg

Load More