/newsfirstlive-kannada/media/post_attachments/wp-content/uploads/2024/08/peacock.jpg)
ಹೈದರಾಬಾದ್​: ರಾಷ್ಟ್ರಿಯ ಪಕ್ಷಿ ನವಿಲಿನ ಮಾಂಸದ ಅಡುಗೆ ಮಾಡುವುದೇಗೆ ಎಂದು ವಿಡಿಯೋ ಮಾಡಿ ಯೂಟ್ಯೂಬ್​​​​ಗೆ ಅಪ್​ಲೋಡ್ ಮಾಡಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ತೆಲಂಗಾಣದ ಸಿರ್ಸಿಲ್ಲಾ ನಗರದ ತಂಗಲ್ಲಾಪಲ್ಲಿ ಮಂಡಲದಲ್ಲಿ ಈ ಘಟನೆ ನಡೆದಿದೆ.
ಯೂಟ್ಯೂಬರ್​ ಕೋಡಂ ಪ್ರಣಯ್ ಕುಮಾರ್ ಕೃತ್ಯ ಎಸಗಿದ ಆರೋಪಿ. ನವಿಲನ್ನು ಕೊಂದು ಅದರ ಮಾಂಸದಿಂದ ಅಡುಗೆ ಮಾಡಿದ್ದಾನೆ. ಅಡುಗೆ ಮಾಡುವುದನ್ನೆಲ್ಲ ವಿಡಿಯೋ ಮಾಡಿಕೊಂಡು ಬಳಿಕ ಅದನ್ನು ಯೂಟ್ಯೂಬ್​​​ಗೆ ಅಪ್​ಲೋಡ್ ಮಾಡಿದ್ದಾನೆ. ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಆರೋಪಿ ಇರೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಡವಿ ಹಂದಿ, ಉಡಾ ಇತ್ಯಾದಿ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿರುವುದು ಅವರ ಯೂಟ್ಯೂಬ್​ನಲ್ಲಿದೆ ಎಂದು ಹೇಳಲಾಗುತ್ತಿದೆ.
ಬಳಿಕ ಆರೋಪಿ ಪ್ರಣಯ್ ಕುಮಾರ್​ನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರೆಸ್ಟ್ ಮಾಡಲಾಗಿದೆ. ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು ಅದರ ರಕ್ಷಣೆಯನ್ನು ಇಲ್ಲಿ ಕಡೆಗಣಿಸಲಾಗಿದೆ. ಅಲ್ಲದೇ ಅದನ್ನು ಹತ್ಯೆ ಮಾಡಿ ವಿಡಿಯೋ ಮೂಲಕ ಪ್ರಚಾರ ಮಾಡಿರುವ ಆರೋಪದ ಮೇಲೆ ವ್ಯಕ್ತಿಯನ್ನ ಬಂಧಿಸಲಾಗಿದೆ. ಯೂಟ್ಯೂಬರ್‌ನ ರಕ್ತದ ಮಾದರಿ ಹಾಗೂ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಫೋರೆನ್ಸಿಕ್​ಗೆ ಕಳುಹಿಸಲಾಗಿದೆ. ನವಿಲು ಮಾಂಸ ತಿಂದಿರುವುದು ದೃಢವಾದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ