/newsfirstlive-kannada/media/post_attachments/wp-content/uploads/2025/02/WWE_1.jpg)
ಡಬ್ಲುಡಬ್ಲುಇ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳು ತುಂಬಾ ಇಷ್ಟ ಪಡುವಂತ ಟೆಲಿವಿಷನ್ ಗೇಮ್ ಆಗಿದೆ. ರಿಂಗ್​​ನಲ್ಲಿ ಅವರು ಹೊಡೆದಾಡುವುದನ್ನು ನೋಡಲು ಕೋಟ್ಯಂತರ ಜನರು ಕಾಯುತ್ತಿರುತ್ತಾರೆ. ಈಗಲೂ ಡಬ್ಲುಡಬ್ಲುಇ ಎಂದರೆ ಸಾಕಷ್ಟು ಜನರು ನೋಡಲು ಇಷ್ಟ ಪಡುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಈ ಶೋ ನೋಡಲು ಪ್ರೇಕ್ಷಕರು ಸಾಲುಗಟ್ಟಿ ನಿಂತಿರುತ್ತಾರೆ. ಇಂತಹ ದೊಡ್ಡ ಶೋನಲ್ಲಿ ವಿಶ್ವದ ಫೇಮಸ್​ ಯೂಟ್ಯೂಬ್ ಸ್ಟಾರ್​ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ವಿಶ್ವದ ಫೇಮಸ್​ ಯೂಟ್ಯೂಬ್ ಸ್ಟಾರ್ ಐ ಶೋ ಸ್ಪೀಡ್​ (IShowSpeed) ಎಂದೇ ಖ್ಯಾತಿ ಪಡೆದಿರುವ ಯುವಕ ಡ್ಯಾರೆನ್ ಜೇಸನ್ ವಾಟ್ಕಿನ್ಸ್ (Darren Jason Watkins)ಗೆ ಡಬ್ಲುಡಬ್ಲುಇ ರಿಂಗ್​ನಲ್ಲಿ ಹೊಡೆಯಲಾಗಿದೆ. ಇದರಿಂದ ತೀವ್ರ ಗಾಯಗೊಂಡಿರುವ ಯೂಟ್ಯೂಬ್ ಸ್ಟಾರ್ ಐ ಶೋ ಸ್ಪೀಡ್, ಇದೆಲ್ಲಾ ನನಗೆ ಬೇಕಿತ್ತಾ ಎಂದುಕೊಂಡಿದ್ದಾನೆ. ಏಕೆಂದರೆ ರಿಂಗ್​ಗೆ ಎಂಟ್ರಿ ಆಗುತ್ತಿದ್ದಂತೆ ಬಂದ ಡಬ್ಲುಡಬ್ಲುಇ ಸ್ಪರ್ಧಿಗಳು ಯೂಟ್ಯೂಬ್ ಸ್ಟಾರ್​ಗೆ ಹೆಂಗೇ ಅಂದ್ರೆ ಹಂಗೆ ಮೇಲಕ್ಕೆ ಎತ್ತಿ ಎಸೆದಿದ್ದಾರೆ.
/newsfirstlive-kannada/media/post_attachments/wp-content/uploads/2025/02/WWE.jpg)
ಇದನ್ನೂ ಓದಿ: ಸರಣಿ ಗೆದ್ದರೂ ಟೀಮ್​ ಇಂಡಿಯಾಗೆ ಮಾತ್ರ ಟೆನ್ಶನ್.. ಟೆನ್ಶನ್.. ಸಾರಥಿ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ
ಯುವಕ ಡ್ಯಾರೆನ್ ಜೇಸನ್ ವಾಟ್ಕಿನ್ಸ್, ಐ ಶೋ ಸ್ಪೀಡ್ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಇವರ ಒಂದು ವಿಡಿಯೋಗೆ ಮಿಲಿಯನ್ ಗಟ್ಟಲೇ ವೀವ್ಸ್ ಬರುತ್ತವೆ. ಆದರೆ ಈ ಯುವಕ WWE ರಾಯಲ್ ರಂಬಲ್‌ಗೆ ಎಂಟ್ರಿ ಕೊಟ್ಟಿದ್ದ. ಈ ವೇಳೆ ಒಳಗೆ ಇರುವಾಗ ರಿಂಗ್​ಗೆ ಹೋಗುವಂತೆ ಟ್ರಿಪಲ್ ಹೆಚ್ ಸೂಚಿಸಿದ್ದಾರೆ. ಹೋಗಲು ಮೊದಲು ಹಿಂದೇಟು ಹಾಕಿದ್ದಾನೆ. ಆದರೆ ನಂತರ ಒತ್ತಾಯದ ಮೇರೆಗೆ ರಿಂಗ್​ಗೆ ಹೋಗಿದ್ದ.
ಡಬ್ಲುಡಬ್ಲುಇ ರಾಯಲ್ ರಂಬಲ್ ರಿಂಗ್​​ಗೆ ಎಂಟ್ರಿ ಕೊಡುವ ಯುವಕ ಡ್ಯಾರೆನ್, ಡಬ್ಲುಡಬ್ಲುಇ ಸ್ಟಾರ್​ಗಳು ಮಾಡುವಂತೆ ಎಲ್ಲ ಪೋಸ್ ಕೊಟ್ಟ. ಫುಟ್ಬಾಲ್​ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ರಿಂಗ್​ನಲ್ಲಿ ಬ್ಯಾಕ್‌ಫ್ಲಿಪ್ ಹೊಡೆದು ಘರ್ಜಿಸಿದ. ಆದರೆ ಈ ವೇಳೆ ಅಕಿರಾ ತೋಜಾವಾ ಹಾಗೂ ಬ್ರಾನ್ ಬ್ರೇಕರ್ ಇಬ್ಬರು ಸೇರಿ ಡ್ಯಾರೆನ್​ಗೆ ಹಿಗ್ಗಾಮುಗ್ಗಾ ಥಳಿಸಿದರು. ಅಲ್ಲದೇ ರಿಂಗ್​ನಿಂದ ಕೆಳಕ್ಕೆ ಎತ್ತಿ ಬಿಸಾಕಿದ್ದಾರೆ. ಇದನ್ನು ಇನ್ನೊಬ್ಬ ಸ್ಪರ್ಧಿ ಕ್ಯಾಚ್ ಹಿಡಿದು ಮತ್ತೆ ಕಾಮೆಂಟರಿ ಕೊಡುವ ಟೇಬಲ್​ ಮೇಲೆ ಎತ್ತಿ ಬಿಸಾಕಿ ಕೇವಲ ಒಂದು ಕ್ಷಣದಲ್ಲಿ ಹೊಡೆದು ಓಡಿಸಿದ್ದಾರೆ. ಇದರಿಂದ ಡ್ಯಾರೆನ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us