/newsfirstlive-kannada/media/post_attachments/wp-content/uploads/2025/02/Ranveer-Allahbadia.jpg)
ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಯುವ ಆನ್‌ಲೈನ್ ಇನ್‌ಪ್ಯೂಯೆನ್ಸರ್ ರಣವೀರ್ ಅಲಹಾಬಾದಿಯಾ ಕೀಳುಮಟ್ಟದ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಸ್ಸಾಂನಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿದೆ. ಬಂಧನದ ಭೀತಿ ಎದುರಿಸುತ್ತಿರುವ ರಣವೀರ್ ಕ್ಷಮೆ ಕೋರಿದ್ದಾರೆ.
ಏನಿದು ಪ್ರಕರಣ..?
ಬರೋಬ್ಬರಿ 12 ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ರಣವೀರ್, ಇತ್ತೀಚೆಗೆ ಕಾಮಿಡಿ ಯನ್ ಸಮಯ್ ರೈನಾರ ‘ಇಂಡಿಯಾ ಗಾಟ್ ಟ್ಯಾಲೆಂಟ್’ ಎಂಬ ಯುಟ್ಯೂಬ್ ರಿಯಾಲಿಟಿ ಶೋದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿದ್ದ ಮಹಿಳಾ ಸ್ಪರ್ಧಿಗೆ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡಿದ್ದಾರೆ. ಜೀವಮಾನದುದ್ದಕ್ಕೂ ನಿಮ್ಮ ಅಪ್ಪ-ಅಮ್ಮನ ಸೆ* ನೋಡುತ್ತಲೇ ಕಾಲ ಕಳೆಯುತ್ತೀರಾ ಅಥವಾ ನಮ್ಮೊಂದಿಗೆ ಸೇರಿಕೊಂಡು ಅದಕ್ಕೆ ಫುಲ್‌ಸ್ಟಾಪ್ ಹಾಕುತ್ತೀರಾ ಎಂದು ಪ್ರಶ್ನೆ ಕೇಳಿ ನಕ್ಕಿದ್ದಾರೆ. ಇದಕ್ಕೆ ಉಳಿದ ಜಡಜ್ಗಳು ಸಾಥ್ ನೀಡಿದ್ದಾರೆ.
ಭಾರೀ ವಿರೋಧ..!
ರಣವೀರ್ ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರ ಮಹಿಳಾ ಆಯೋಗವು ರಣವೀರ್ ಹಾಗೂ ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಜಡ್ಜ್ಗಳು, ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ, ಶಿವಸೇನೆ, ಕಾಂಗ್ರೆಸ್‌ನ ಹಲವು ಮುಖಂಡರೂ ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ ರಣವೀರ್ ಅವರ ಯೂಟ್ಯೂಬ್ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬಳೊಂದಿಗೆ ಪತಿಯ ಪ್ರಣಯ ಪ್ರಸಂಗ.. ಮನನೊಂದ ಪತ್ನಿ ಮಾಡಿದ್ದೇನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ